ರಾಕುಲ್​ಪ್ರೀತ್​ನಂತೆ ಫಿಟ್ ಆಗ್ಬೇಕಾ; ಅವ್ರ ಡಯೆಟ್ ಫಾಲೋ ಮಾಡಿ ಸಾಕು

By Prasanna Kumar P N
Sep 20, 2024

Hindustan Times
Kannada

ನಟಿ ರಾಕುಲ್ ಪ್ರೀತ್ ಸಿಂಗ್ ತಮ್ಮ ಸೌಂದರ್ಯ ಮತ್ತು ಫಿಟ್​ನೆಸ್​ನಿಂದಲೇ ಹೆಚ್ಚು ಹೆಸರು ಸಂಪಾದಿಸಿದ್ದಾರೆ.

ಅದಕ್ಕೆ ಕಾರಣ ರಾಕುಲ್​ಪ್ರೀತ್ ಆಹಾರ ಪದ್ಧತಿ. ಪ್ರತಿದಿನ ವ್ಯಾಯಾಮ ಮಾಡುವುದರ ಜೊತೆಗೆ ಆರೋಗ್ಯಕರ ಆಹಾರ ಸೇವಿಸುತ್ತಾರೆ.

ಇತ್ತೀಚೆಗೆ ತನ್ನ ಆರೋಗ್ಯಕರ ಜೀವನ ಶೈಲಿಯ ಕುರಿತು ರಣವೀರ್​ ಶೋ ಪಾಡ್​ಕಾಸ್ಟ್​​ನಲ್ಲಿ ವಿವರಿಸಿದ್ದಾರೆ. ಇಲ್ಲಿ ತಿಳಿಯಿರಿ.

ಉಗುರುಬೆಚ್ಚಗಿನ ನೀರು ಕುಡಿಯುವ ಮೂಲಕ ದಿನ ಪ್ರಾರಂಭಿಸುವ ರಾಕುಲ್, ನಂತರ ದಾಲ್ಚಿನ್ನಿ ನೀರು ಅಥವಾ ಅರಿಶಿನ ನೀರನ್ನು ಕುಡಿಯುತ್ತಾರೆ.

ಇದರ ನಂತರ ಐದು ನೆನೆಸಿದ ಬಾದಾಮಿ ಮತ್ತು ಒಂದು ನೆನೆಸಿದ ಆಕ್ರೋಟ್ ತಿನ್ನುತ್ತಾರೆ. ಬಳಿಕ ತುಪ್ಪದೊಂದಿಗೆ ಬ್ಲಾಕ್ ಟೀ ಕುಡಿಯುತ್ತಾರೆ.

ತನ್ನ ವ್ಯಾಯಾಮದ ಆಧಾರದ ಮೇಲೆ ಉಹಾರ ಆರಿಸುವ ರಾಕುಲ್, ಜಿಮ್ ಬಳಿಕ ಪ್ರೋಟೀನ್ ಸ್ಮೂಥಿಯನ್ನು ಕುಡಿಯುತ್ತಾರೆ. ಮೊಟ್ಟೆಗಳು, ಪೊಹಾ ಅಥವಾ ಮೊಳಕೆಯೊಡೆದ ಕಾಳು ಸೇವಿಸುತ್ತಾರೆ.

ರಾಕುಲ್ ಊಟದ ವೇಳೆ ಅನ್ನ ಅಥವಾ ರೊಟ್ಟಿಯೊಂದಿಗೆ ತರಕಾರಿ ಒಳಗೊಂಡಿರುತ್ತದೆ. ಪ್ರೋಟೀನ್​ಗಾಗಿ ಮೀನು ಮತ್ತು ಚಿಕನ್ ತಿನ್ನುತ್ತಾರೆ.

ಸಂಜೆ 4:30ರ ಸಮಯದಲ್ಲಿ ಪ್ರೋಟೀನ್ ಚಿಯಾ ಪುಡಿಂಗ್ ತಿನ್ನುತ್ತಾರೆ. ಹಣ್ಣು, ಮೊಸರು, ಬೆಣ್ಣೆ ಟೋಸ್ಟ್ ಅಥವಾ ಪ್ರೋಟೀನ್ ಆಹಾರವನ್ನು ಸೇವಿಸುತ್ತಾರೆ.

ರಾತ್ರಿ 7ರ ನಂತರ ಹೆಚ್ಚು ಊಟ ಮಾಡುವುದಿಲ್ಲ. ಊಟದಲ್ಲಿ ಕಾರ್ಬೋಹೈಡ್ರೇಟ್‌ ಹೆಚ್ಚಿರುತ್ತದೆ. ಪ್ರೋಟೀನ್ ಮತ್ತು ತರಕಾರಿಗಳನ್ನು ಸೇವಿಸುತ್ತಾರೆ. 

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?