ದಕ್ಷಿಣ ಭಾರತದಲ್ಲಿ ಅನ್ನದಿಂದ ತಯಾರಿಸುವ 10 ಫೇಮಸ್ ಅಡುಗೆಗಳು

Freepik

By HT Kannada Desk
Nov 23, 2024

Hindustan Times
Kannada

ದಕ್ಷಿಣ ಭಾರತದ ಪಾಕಪದ್ದತಿ ವೈವಿಧ್ಯಮಯವಾಗಿದೆ. ಅನ್ನದಿಂದ ತಯಾರಿಸುವ ಸಾಂಪ್ರದಾಯಿಕ ಭಕ್ಷ್ಯಗಳು ಜನಪ್ರಿಯ. ತರಕಾರಿ, ಮಸಾಲೆ, ಬೇಳೆಗಳನ್ನು ಸೇರಿಸಿ ತಯಾರಿಸುವ ಅಡುಗೆಗಳು ದೈನಂದಿನ ಊಟದ ಭಾಗವಾಗಿದೆ. ಅನ್ನದಿಂದ ತಯಾರಿಸುವ 10 ಫೇಮಸ್‌ ಅಡುಗೆಗಳಿವು.

Freepik

ಪುಳಿಯೋಗರೆ: ಹುಣಸೆಹಣ್ಣಿನಿಂದ ತಯಾರಿಸುವ ಒಂದು ಫೇಮಸ್‌ ರೈಸ್‌ ಐಟಮ್‌. ಎಣ್ಣೆಯನ್ನು ಕಾಯಿಸಿ ಅದಕ್ಕೆ ಶೇಂಗಾಬೀಜ, ಕಡ್ಲೆಬೇಳೆ, ಎಳ್ಳು ಹುರಿದು, ಹುಣಸೆಹಣ್ಣಿನ ಪೇಸ್ಟ್‌ ಮತ್ತು ಪುಳಿಯೋಗರೆ ಮಸಾಲೆಗಳನ್ನು ಹಾಕಿ ಕುದಿಸಿ, ಅದಕ್ಕೆ ಅನ್ನವನ್ನು ಸೇರಿಸಿ ತಯಾರಿಸಲಾಗುತ್ತದೆ. 

Freepik

ಪೋಡಿ ರೈಸ್‌: ಬಿಸಿ ಅನ್ನಕ್ಕೆ ಬೇಳೆಗಳಿಂದ ತಯಾರಿಸದ ಮಸಾಲೆ ಪುಡಿ ಸೇರಿಸಿ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ತುಪ್ಪ ಅಥವಾ ಎಣ್ಣೆಯಲ್ಲಿ ಮಸಾಲೆ ಪುಡಿಯನ್ನು ಹುರಿದು ಪೋಡಿ ರೈಸ್‌ ತಯಾರಿಸುತ್ತಾರೆ. ಇದು ದಿಢೀರ್‌ ಎಂದು ತಯಾರಿಸುವ ಅನ್ನದ ಅಡುಗೆ.

Freepik

ಪೊಂಗಲ್‌: ಅನ್ನ ಮತ್ತು ಹೆಸರುಬೇಳೆ ಸೇರಿಸಿ ತಯಾರಿಸಿವ ಪರಿಮಳದ ಭಕ್ಷ್ಯ. ತುಪ್ಪದಲ್ಲಿ ಕರಿಮೆಣಸು, ಜೀರಿಗೆ, ಗೋಡಂಬಿ, ಕರಿಬೇವಿನ ಎಲೆ ಮುಂತಾದ ಮಸಾಲೆಗಳನ್ನು ಹುರಿದು ತಯಾರಿಸಲಾಗುತ್ತದೆ. ಇದನ್ನು ಖಾರ ಮತ್ತು ಸಿಹಿ ಎರಡೂ ವಿಧಾನದಲ್ಲಿ ತಯಾರಿಸಲಾಗುತ್ತದೆ. 

Freepik

ಚಿತ್ರಾನ್ನ: ದಕ್ಷಿಣ ಭಾರತದಲ್ಲಿ ವಾರದಲ್ಲಿ ಒಮ್ಮೆಯಾದರೂ ತಯಾರಿಸುವ ಖಾದ್ಯ. ಸಾಸಿವೆ, ಶೇಂಗಾ, ಕಡ್ಲೆಬೇಳೆ, ಹಸಿರುಮೆಣಸಿನಕಾಯಿ, ಕರಿಬೇವಿನ ಎಲೆ, ಅರಿಶಿಣದ ಒಗ್ಗರಣೆ ಮಾಡಿಕೊಂಡು ಅದಕ್ಕೆ ಅನ್ನ, ಲಿಂಬು ರಸ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ತಯಾರಿಸಲಾಗುತ್ತದೆ. ಇದು ಲಂಚ್‌ ಬಾಕ್ಸ್‌ ಮತ್ತು ಪಿಕ್‌ನಿಕ್‌ಗಳಿಗೆ ಬೆಸ್ಟ್‌ ಆಯ್ಕೆ.

Freepik

ತೆಂಗಿನಕಾಯಿ ಅನ್ನ: ಇದೊಂದು ಸರಳ, ರುಚಿಕರ ಭಕ್ಸ್ಯ. ಸಾಸಿವೆ, ಉದ್ದಿನಬೇಳೆ, ಹಸಿರು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಎಣ್ಣೆಯಲ್ಲಿ ಹುರಿದು ಅದಕ್ಕೆ ಅನ್ನ ಮತ್ತು ತುರಿದ ತೆಂಗಿನಕಾಯಿ ಸೇರಿಸಿ ಮಿಕ್ಸ್‌ ಮಾಡಲಾಗುತ್ತದೆ. ಇದನ್ನು ಸಾರಿನ ಜೊತೆಗೂ ಸವಿಯಬಹುದು.

Freepik

ಹೈದರಾಬಾದ್‌ ಬಿರಿಯಾನಿ: ನಾನ್‌ವೆಜ್‌ ರೆಸಿಪಿ. ಬಾಸ್ಮತಿ ಅಕ್ಕಿ ಮತ್ತು ಮಾಂಸವನ್ನು ಪದರುಗಳಾಗಿ ಹಾಕಿ, ಅದಕ್ಕೆ ಗಾಢ ಪರಿಮಳದ ಮಸಾಲೆಗಳನ್ನು ಸೇರಿಸಿ ಬೇಯಿಸುವ ವಿಶಿಷ್ಟ  ಪಾಕವಿಧಾನ. ಇದನ್ನು ರಾಯತಾ ಅಥವಾ ಸಲಾಡ್‌ನೊಂದಿಗೆ ಸವಿಯಲಾಗುತ್ತದೆ.

Freepik

ಬಿಸಿ ಬೇಳೆಬಾತ್‌: ಕರ್ನಾಟಕದ ಸಾಂಪ್ರದಾಯಿಕ ಅಡುಗೆ. ಅಕ್ಕಿ, ಬೇಳೆ, ತರಕಾರಿ, ಹುಣಸೆಹಣ್ಣು, ಮಸಾಲೆಗಳನ್ನು ಹದವಾಗಿ ಬೆರೆಸಿ ಮೃದುವಾಗಿ ಬೇಯಿಸಿ ತಯಾರಿಸುವ ಫೇಮಸ್‌ ಖಾದ್ಯ. 

Freepik

ಅನ್ನ ಮತ್ತು ರಸಂ: ಟೊಮೆಟೊ ಬೇಯಿಸಿ ರಸ ತೆಗೆದು ಅದಕ್ಕೆ ಹುಣಸೆ ರಸ, ಮೆಣಸಿನಪುಡಿ, ಉಪ್ಪು ಮತ್ತು ಬೆಲ್ಲ ಸೇರಿಸಿ ಕುದಿಸಲಾಗುತ್ತದೆ. ಇದಕ್ಕೆ ಮೇಲಿನಿಂದ ಒಗ್ಗರಣೆ ಮಾಡಿ, ಮೇಲಿನಿಂದ ಕೊತ್ತಂಬರಿ ಸೊಪ್ಪು ಸೇರಿಸಿ ಬಿಸಿ ಅನ್ನದೊಟ್ಟಿಗೆ ಸವಿಯಲಾಗುತ್ತದೆ. ಮಳೆಗಾಲ ಮತ್ತು ಚಳಿಗಾಲದ ಊಟಕ್ಕೆ ಇದು ಬೆಸ್ಟ್‌ ಕಾಂಬಿನೇಷನ್‌.

Freepik

ಅನ್ನ–ಸಾಂಬಾರ್‌: ಸಾಂಬಾರ್‌ ಅನ್ನು ಬೇಳೆ ಮತ್ತು ತರಕಾರಿಗಳನ್ನು ಬೇಯಿಸಿ, ಅದಕ್ಕೆ ತೆಂಗಿನಕಾಯಿ, ಮಸಾಲೆಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಅನ್ನಕ್ಕೆ ಬೆಸ್ಟ್‌ ಕಾಂಬಿನೇಷನ್‌ ಆಗಿರುವ ಸಾಂಬಾರ್‌ ಅನ್ನು ಸಾಮಾನ್ಯವಾಗಿ ದಕ್ಷಿಣ ಭಾರತದ ಮನೆಗಳಲ್ಲಿ ಪ್ರತಿದಿನ ತಯಾರಿಸಲಾಗುತ್ತದೆ. 

Freepik

ಮೊಸರನ್ನ: ಗಟ್ಟಿ ಮೊಸರಿಗೆ ಅನ್ನ ಸೇರಿಸಿ, ಅದಕ್ಕೆ ಒಗ್ಗರಣೆ ಹಾಕಲಾಗುತ್ತದೆ. ಇದಕ್ಕೆ ದಾಳಿಂಬೆ ಬೀಜಗಳನ್ನು ಸೇರಿಸಲಾಗುತ್ತದೆ. ದೇಹಕ್ಕೆ ತಂಪು ನೀಡುವ ಮೊಸರನ್ನವನ್ನು ಊಟದ ಕೊನೆಯಲ್ಲಿ ಬಡಿಸುತ್ತಾರೆ. 

Freepik

ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಪಂದ್ಯವಾಡಿದ ಕ್ರಿಕೆಟಿಗರು