ಸಮೋಸದಿಂದ ತುಪ್ಪದವರೆಗೆ ವಿದೇಶಗಳಲ್ಲಿ ಬ್ಯಾನ್ ಆಗಿರುವ ಆಹಾರ ಪದಾರ್ಥಗಳು

By Reshma
Sep 11, 2024

Hindustan Times
Kannada

ಪ್ರಪಂಚದಲ್ಲೇ ಆಹಾರ ವೈವಿಧ್ಯದಲ್ಲಿ ಭಾರತಕ್ಕೆ ಅಗ್ರಸ್ಥಾನವಿದೆ. ಇಲ್ಲಿನ ರೆಸ್ಟೋರೆಂಟ್‌, ಹೋಟೆಲ್‌ಗಳನ್ನು ಹೊರತು ಪಡಿಸಿ ಬೀದಿ ಬೀದಿಗಳಲ್ಲೂ ವಿಭಿನ್ನ ಆಹಾರ ಖಾದ್ಯಗಳನ್ನು ಕಾಣಬಹುದು 

ಟೇಸ್ಟಿ ಆಹಾರಗಳ ಸೇವನೆ ಭಾರತೀಯರಿಗೆ ಬಲು ಇಷ್ಟ. ಆದರೆ ಭಾರತದಲ್ಲಿ ದೊರೆಯುವ ಈ ಕೆಲವು ಆಹಾರ ಪದಾರ್ಥಗಳನ್ನು ಪ್ರಪಂಚದ ವಿವಿಧ ದೇಶಗಳಲ್ಲಿ ಬ್ಯಾನ್ ಮಾಡಲಾಗಿದೆ  

ಹಾಗಾದರೆ ಭಾರತದಲ್ಲಿ ಪ್ರಸಿದ್ಧಿ ಪಡೆದಿರುವ ಯಾವೆಲ್ಲಾ ಆಹಾರಗಳನ್ನು ಯಾವ ಯಾವ ದೇಶಗಳಲ್ಲಿ ಬ್ಯಾನ್ ಮಾಡಲಾಗಿದೆ ನೋಡಿ

ಭಾರತದಲ್ಲಿ ತುಪ್ಪದ ಬಳಕೆಯಿಲ್ಲದ ಖಾದ್ಯಗಳನ್ನು ಊಹಿಸಲು ಸಾಧ್ಯವಿಲ್ಲ. ಸಿಹಿತಿಂಡಿಗಳಿಂದ ಹಿಡಿದು ನಾನ್‌ವೆಜ್‌ವರೆಗೂ ತುಪ್ಪ ಬೇಕು. ಆದರೆ ಅಮೆರಿಕದಲ್ಲಿ ತುಪ್ಪವನ್ನು ನಿಷೇಧಿಸಲಾಗಿದೆ 

ಜೆಲ್ಲಿ ಚಾಕೊಲೇಟ್‌ಗಳು ನಮ್ಮ ನಿಮ್ಮೆಲ್ಲರ ಮನೆಯ ಮಕ್ಕಳಿಗೆ ಬಲು ಇಷ್ಟ. ಆದರೆ ಕೆನಡಾ ಹಾಗೂ ಅಮೆರಿಕದಲ್ಲಿ ಈ ಜೆಲ್ಲಿ ಕ್ಯಾಂಡಿಗಳನ್ನು ನಿಷೇಧ ಮಾಡಲಾಗಿದೆ 

ಭಾರತದಲ್ಲಿ ಸಮೋಸಾ ಹಲವರ ಫೇವರಿಟ್ ಸ್ನ್ಯಾಕ್ಸ್‌. ಆದರೆ ಇದು ತ್ರಿಕೋನಾಕಾರದಲ್ಲಿರುವ ಕಾರಣ ಸಮೋಲಿಯಾದಲ್ಲಿ ಇದನ್ನು ನಿಷೇಧಿಸಲಾಗಿದೆ 

ಭಾರತದಲ್ಲಿ ಚ್ಯೂಯಿಂಗ್ ಗಮ್ ಅಗಿಯುವವರ ಸಂಖ್ಯೆ ಕಡಿಮೆ ಇಲ್ಲ. ಆದರೆ ಸಿಂಗಾಪುರದಲ್ಲಿ ಚ್ಯೂಯಿಂಗ್ ತಿನ್ನಲು ವೈದ್ಯರ ಅನುಮತಿ ಬೇಕು

ಚಿಕನ್ ಪ್ರಿಯರ ಟಾಪ್ ಫೇವರಿಟ್‌ ಕಬಾಬ್‌. ಭಾರತವು ವಿಭಿನ್ನ ರುಚಿಯ ಕಬಾಬ್‌ಗಳಿಗೆ ಪ್ರಸಿದ್ಧಿ ಪಡೆದಿದೆ. 2017ರಿಂದ ಇಟಲಿಯ ವೆನಿಸ್‌ನಲ್ಲಿ ಕಬಾಬ್ ಬ್ಯಾನ್ ಮಾಡಲಾಗಿದೆ 

ನಾರ್ವೆ ಹಾಗೂ ಆಸ್ಟ್ರೇಲಿಯಾ ದೇಶಗಳಲ್ಲಿ ಚೀಸ್ ಅನ್ನು ಬ್ಯಾನ್ ಮಾಡಲಾಗಿದೆ 

ಕೆಚಪ್ ಇಲ್ಲ ಎಂದರೆ ಪಿಜ್ಜಾ, ಬರ್ಗರ್, ಸ್ಯಾಂಡ್‌ವಿಚ್ ತಿನ್ನಲು  ಮನಸ್ಸೇ ಬರುವುದಿಲ್ಲ. ಆದರೆ ಫ್ರಾನ್ಸ್‌ನಲ್ಲಿ ಕೆಚಪ್ ಬಳಕೆ ಇಲ್ಲ. ಇದರ ಬದಲು ಇಲ್ಲಿನ ಸಾಂಪ್ರದಾಯಿಕ ಖಾದ್ಯ ನೀಡಲಾಗುತ್ತದೆ 

ನವರಾತ್ರಿಯ ಸಂಭ್ರಮ ಹೆಚ್ಚಿಸಲಿ ಸಾಬುದಾನಿ ಪಾಯಸ; ಇಲ್ಲಿದೆ ರೆಸಿಪಿ