ದಕ್ಷಿಣ ಭಾರತದ ಪಾಕಪದ್ಧತಿ ಬಹಳ ವಿಭಿನ್ನವಾಗಿದೆ. ಚಿಕನ್ ರೆಸಿಪಿಯನ್ನು ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿ ತಯಾರಿಸಲಾಗುತ್ತದೆ. ವೀಕೆಂಡ್‍ನಲ್ಲಿ ನೀವು ಪ್ರಯತ್ನಿಸಬಹುದಾದ 8 ಬಗೆಯ ಚಿಕನ್ ಖಾದ್ಯಗಳು ಇಲ್ಲಿವೆ:
freepik
ಚಿಕನ್ ಚೆಟ್ಟಿನಾಡ್: ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಚಿಕನ್ ಖಾದ್ಯವಿದು. ತಮಿಳುನಾಡಿನ ಚೆಟ್ಟಿನಾಡ್‍ನಲ್ಲಿ ಹುಟ್ಟಿಕೊಂಡ ಈ ಭಕ್ಷ್ಯವನ್ನು ನೀವಿನ್ನೂ ಸವಿದಿಲ್ಲವಾದರೆ ಇಂದೇ ಪ್ರಯತ್ನಿಸಿ.
Slurrp
ಕೋಳಿ ಪುಳಿಮುಂಚಿ: ಕರ್ನಾಟಕದ ಮಂಗಳೂರು ಭಾಗದಲ್ಲಿ ಬಹಳ ಪ್ರಸಿದ್ಧಿ ಪಡೆದಿರುವ ಈ ಚಿಕನ್ ಖಾದ್ಯವನ್ನು ವಿವಿಧ ಮಸಾಲೆಗಳು, ಹುಣಸೆಹಣ್ಣು, ಈರುಳ್ಳಿ ಸೇರಿಸಿ ತೆಂಗಿನೆಣ್ಣೆ ಅಥವಾ ತುಪ್ಪ ತಯಾರಿಸಲಾಗುತ್ತದೆ.
freepik
ಕುಂದಾಪುರ ಕೋಳಿ ಸಾರು: ವಿವಿಧ ಮಸಾಲೆಗಳು, ಹುಣಸೆ ಹಣ್ಣು, ಈರುಳ್ಳಿ, ಟೊಮ್ಯಾಟೋ, ತುರಿದ ತೆಂಗಿನಕಾಯಿಯನ್ನು ಹುರಿದು ಅದರ ಹಾಲು ತೆಗೆದು ಇದನ್ನು ತಯಾರಿಸಲಾಗುತ್ತದೆ.
freepik
ಕೂರ್ಗ್ ಸ್ಟೈಲ್ ಚಿಕನ್ ಗ್ರೇವಿ: ಮಸಾಲೆಗಳು, ಹುಣಸೆ ಹಣ್ಣು, ಗುಂಟೂರು ಮೆಣಸಿನಕಾಯಿ, ಸಾಸಿವೆ, ಮೆಂತ್ಯ ಇತ್ಯಾದಿ ಬಳಸಿ ಕೊಡಗಿನಲ್ಲಿ ತಯಾರಿಸಲಾಗುವ ಈ ಸ್ಪೆಷಲ್ ಚಿಕನ್ ಗ್ರೇವಿ ಸಖತ್ ರುಚಿಯಾಗಿರುತ್ತದೆ.
freepik
ಆಂಧ್ರ ಶೈಲಿಯ ಚಿಕನ್ ಗ್ರೇವಿ: ಚಿಕನ್‍ಗೆ ಗೋಡಂಬಿ ಹಾಗೂ ಗಸಗಸೆ ಪೇಸ್ಟ್ ಮತ್ತು ಚಿಕನ್ ಮಸಾಲೆ ಹಾಕಿ ತಯಾರಿಸಲಾಗುತ್ತದೆ.
freepik
ಮಂಡ್ಯ ಶೈಲಿ ನಾಟಿ ಕೋಳಿ ಸಾರು: ತೆಂಗಿನಕಾಯಿ, ವಿವಿಧ ಮಸಾಲೆಗಳ ಪುಡಿ, ಈರುಳ್ಳಿ ಇತ್ಯಾದಿ ಸಾಮಾಗ್ರಿಗಳನ್ನು ಬಳಸಿ ತಯಾರಿಸಲಾಗುವ ಈ ಕೋಳಿ ಸಾರನ್ನು ಮುದ್ದೆಯೊಂದಿಗೆ ಸವಿದರೆ ಅದರ ಮಜಾವೇ ಬೇರೆ.
HT File
ಮಲಬಾರ್ ಚಿಕನ್ ಕರಿ: ಕೇರಳದ ಭಾಗದ ಪ್ರಸಿದ್ಧ ಚಿಕನ್ ಖಾದ್ಯವಾಗಿರುವ ಇದನ್ನು ತೆಂಗಿನೆಣ್ಣೆ, ಕರಿಬೇವಿನ ಎಲೆಗಳು, ಸಾಸಿವೆ, ದಾಲ್ಚಿನ್ನಿ ಹಾಗೂ ಮ್ಯಾರಿನೇಟೆಡ್ ಚಿಕನ್‍ಗೆ ಮಸಾಲೆಗಳನ್ನು ಹಾಕಿ ತಯಾರಿಸಲಾಗುತ್ತದೆ.
freepik
ಹೈದರಾಬಾದ್ ಚಿಕನ್ ಕರಿ: ತೆಂಗಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕೆಂಪು ಮೆಣಸಿನಕಾಯಿ ಹಾಗೂ ವಿವಿಧ ಮಸಾಲೆಗಳನ್ನು ಸೇರಿಸಿ ತಯಾರಿಸಲಾಗುತ್ತದೆ.