ಆಪಲ್‍ಗಳಿಂದ ತಯಾರಿಸಿ ಬಗೆ-ಬಗೆಯ ಭಕ್ಷ್ಯಗಳು

freepik

By Priyanka Gowda
Sep 13, 2024

Hindustan Times
Kannada

ಸೇಬನ್ನು ಹಣ್ಣು ಎಂದು ತಿನ್ನುವುದು ಮಾತ್ರವಲ್ಲ, ಇದರಿಂದ ವಿವಿಧ ರುಚಿಕರವಾದ ಭಕ್ಷ್ಯಗಳನ್ನೂ ಸಹ ತಯಾರಿಸಬಹುದು. ಇಲ್ಲಿದೆ ಆಪಲ್‍ನಿಂದ ತಯಾರಿಸಲಾಗುವ ಖಾದ್ಯಗಳು.

freepik

ಆಪಲ್ ಹಲ್ವಾ: ಸೇಬು, ಸಕ್ಕರೆ, ದಾಲ್ಚಿನ್ನಿ ಮತ್ತು ವೆನಿಲ್ಲಾದಿಂದ ತಯಾರಿಸಲಾಗುವ ಹಲ್ವಾ ತಿನ್ನಲು ಬಹಳ ರುಚಿಕರವಾಗಿರುತ್ತದೆ.

freepik

ಆಪಲ್ ಸ್ಮೂಥಿ: ಸೇಬನ್ನು ಸಣ್ಣಗೆ ಕತ್ತರಿಸಿ ಇದಕ್ಕೆ ಮೊಸರು, ಒಣಹಣ್ಣುಗಳು ಮತ್ತು ಬೀಜಗಳನ್ನು ಮಿಶ್ರಣ ಮಾಡಿ ಸವಿಯಬಹುದು. ತುಂಬಾ ರುಚಿಕರವಾಗಿರುತ್ತದೆ.

freepik

ಆಪಲ್ ಕೇಸರಿಬಾತ್: ರವೆ, ಸಕ್ಕರೆ, ತುರಿದ ಆಪಲ್, ಡ್ರೈ ಫ್ರೂಟ್ಸ್, ತುಪ್ಪ ಬಳಸಿ ಕೇಸರಿಬಾತ್ ತಯಾರಿಸಬಹುದು. ಬಹಳ ರುಚಿಕರವಾಗಿರುತ್ತದೆ. 

freepik

ಆಪಲ್ ಪಾಯಸ: ಸಿಪ್ಪೆ ತೆಗೆದ ತುರಿದ ಆಪಲ್ ಅನ್ನು ತುಪ್ಪದಲ್ಲಿ ಹುರಿಯಿರಿ.. ಬಳಿಕ ಬೇರೆ ಪಾತ್ರೆಯಲ್ಲಿ ಹಾಲು ಸಕ್ಕರೆ ಹಾಕಿ ಕುದಿಸಿ. ಇದಕ್ಕೆ ಹುರಿದಿಟ್ಟ ಡ್ರೈ ಫ್ರೂಟ್ಸ್ ಸೇರಿಸಿದರೆ ರುಚಿಕರವಾದ ಖೀರ್ ಸವಿಯಲು ಸಿದ್ಧ.

freepik

ಸೇಬು ಪಲ್ಯ: ಸಿಪ್ಪೆ ತೆಗೆದ ಆಪಲ್ ಅನ್ನು ಕತ್ತರಿಸಿ ಎಣ್ಣೆಯಲ್ಲಿ ಹುರಿಯಿರಿ. ಇದಕ್ಕೆ ಮಸಾಲೆಗಳು, ಉಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿದರೆ ಆಪಲ್ ಪಲ್ಯ ಸವಿಯಲು ಸಿದ್ಧ.

freepik

ಪೀನಟ್ ಬಟರ್‍ ಜತೆ ಆಪಲ್ ಸ್ಲೈಸ್: ಸೇಬುಗಳನ್ನು ಸ್ಲೈಸ್ ರೀತಿ ಕತ್ತರಿಸಿ. ಬಳಿಕ ಅದನ್ನು ಪೀನಟ್ ಬಟರ್ ಜೊತೆ ಅದ್ದಿ ಸವಿಯಬಹುದು.

freepik

ಆಪಲ್ ಚೀಸ್: ಸೇಬನ್ನು ಸಣ್ಣಗೆ ಕತ್ತರಿಸಿ ಅದಕ್ಕೆ ಚೀಸ್, ಚಿಲ್ಲಿ ಫ್ಲೇಕ್ ಸವರಿ ಕಡಿಮೆ ಉರಿಯಲ್ಲಿ, ಪನ್ನೀರ್ ಟಿಕ್ಕಾ ಬೇಯಿಸುವಂತೆ ಬೇಯಿಸಿ ಸವಿಯಬಹುದು.

freepik

ಆಪಲ್ ಚಿಪ್ಸ್: ಸೇಬುಗಳನ್ನು ತೆಳುವಾಗಿ ಕತ್ತರಿಸಿ, ಎಣ್ಣೆಯಲ್ಲಿ ಕರಿಯಿರಿ. ಕರಿದ ಬಳಿಕ ಇದಕ್ಕೆ ಖಾರದ ಪುಡಿ, ಉಪ್ಪು ಸಿಂಪಡಿಸಬಹುದು. 

freepik

ಆಪಲ್ ಪ್ಯಾನ್‍ಕೇಕ್: ಆಪಲ್ ಕತ್ತರಿಸಿ ರುಬ್ಬಿರಿ. ಈ ಮಿಶ್ರಣಕ್ಕೆ ಗೋಧಿ ಹಿಟ್ಟು, ಸಕ್ಕರೆ ಪುಡಿ, ಜೀರಿಗೆ ಪುಡಿ, ಅಡುಗೆ ಸೋಡಾ ಸೇರಿಸಿ. ದೋಸೆ ಹದಕ್ಕೆ ಮಾಡಲು ಹಾಲನ್ನು ಬೆರೆಸಿ ಮಿಕ್ಸ್ ಮಾಡಿ ತವಾದಲ್ಲಿ ಹರಡಿ.

freepik

ಆಪಲ್ ನ್ಯಾಚೋಸ್: ಸೇಬುಗಳನ್ನು ತೆಳುವಾಗಿ ಕತ್ತರಿಸಿ ಅದಕ್ಕೆ ಚಾಕೋಲೇಟ್ ಸಿರಪ್ ಅಥವಾ ಕ್ಯಾರಮೆಲ್ ಸಾಸ್ ಚಿಮುಕಿಸಿ ಸವಿಯಬಹುದು.

unsplash

ರಶ್ಮಿಕಾ ಮಂದಣ್ಣ ಹಾಟ್‌ ಲುಕ್‌ ನೋಡಿ ದಂಗಾದ ಫ್ಯಾನ್ಸ್‌