ಈರುಳ್ಳಿ, ಬೆಳ್ಳುಳ್ಳಿ ಹಾಕದೆ ತಯಾರಿಸಬಹುದು ರುಚಿಕರವಾದ ಸಬ್ಬಕ್ಕಿ ಹಪ್ಪಳ

slurrp

By Priyanka Gowda
Oct 10, 2024

Hindustan Times
Kannada

ಸಬ್ಬಕ್ಕಿ ಹಪ್ಪಳವನ್ನು ವಿಶೇಷವಾಗಿ ನವರಾತ್ರಿಗೆ ತಯಾರಿಸಬಹುದು. ಅನ್ನದ ಜೊತೆ ಮಾತ್ರವಲ್ಲ ಹಾಗೆಯೇ ತಿನ್ನಲೂ ರುಚಿಕರವಾಗಿರುತ್ತದೆ. ಇದನ್ನು ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು: ಸಬ್ಬಕ್ಕಿ- 1 ಕಪ್, ಜೀರಿಗೆ- 2 ಟೀ ಚಮಚ, ನಿಂಬೆ ರಸ, ಕರಿಮೆಣಸು- 1 ಟೀ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ಮೊದಲಿಗೆ ಸಬ್ಬಕ್ಕಿಯನ್ನು ತೊಳೆದು ರಾತ್ರಿಯಿಡೀ ನೆನೆಯಲು ಬಿಡಿ. ಸಮಯವಿಲ್ಲದಿದ್ದರೆ ಕನಿಷ್ಠ 3-4 ಗಂಟೆಗಳ ಕಾಲ ನೆನೆಸಿ.

Pinterest

ನೆನೆದ ನಂತರ ಪ್ಯಾನ್‌ನಲ್ಲಿ ನೀರು ಬಿಸಿ ಮಾಡಿ ಅದಕ್ಕೆ ಸಬ್ಬಕ್ಕಿಯನ್ನು ಹಾಕಿ ಬೇಯಿಸಿ.

Pinterest

ಇದಕ್ಕೆ ಜೀರಿಗೆ, ಕರಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಕಡಿಮೆ ಉರಿಯಲ್ಲಿ ಸಬ್ಬಕ್ಕಿ ಮೃದುವಾಗುವವರೆಗೆ ಬೇಯಲು ಬಿಡಿ.

slurrp

ಬೆಂದ ನಂತರ ಮಿಶ್ರಣವನ್ನು 10 ನಿಮಿಷ ಕಾಲ ಹಾಗೆಯೇ ಬಿಡಿ. ಬಟರ್ ಪೇಪರ್‌ನಲ್ಲಿ ಹಪ್ಪಳ ಮಾಡುವಷ್ಟು ಅಗಲ ಹಾಕಿಡಿ.

slurrp

ಹಪ್ಪಳ ಗಟ್ಟಿಯಾಗುವವರೆಗೆ ಹಾಗೆಯೇ ಬಿಡಿ. ನಂತರ ನಿಮಗೆ ಬೇಕೆಂದಾಗ ಕಾದ ಎಣ್ಣೆಯಲ್ಲಿ ಪ್ರೈ ಮಾಡಿ ಸವಿಯಿರಿ.

slurrp

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ