ಪ್ರತಿಯೊಂದು ಭಾರತೀಯ ಮನೆಗಳಲ್ಲಿ ಬಳಕೆ ಮಾಡಲಾಗುವ ಮೊಸರಿನಲ್ಲಿ ಪೌಷ್ಟಿಕಾಂಶ ಅಡಗಿದೆ. ಖಾರದ ಖಾದ್ಯದಿಂದ ಸಿಹಿ ತಿನಿಸುಗಳವರೆಗೆ ಮೊಸರನ್ನು ಬಳಸಲಾಗುತ್ತದೆ. ಇಲ್ಲಿದೆ 10 ಬಗೆಯ ಮೊಸರಿನಿಂದ ಮಾಡಲಾದ ಭಕ್ಷ್ಯಗಳು.
freepik
ರಾಯಿತಾ: ಸಣ್ಣಗೆ ಹೆಚ್ಚಿದ ಸೌತೆಕಾಯಿ, ಈರುಳ್ಳಿ, ಟೊಮೆಟೊ, ಹಸಿಮೆಣಸು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮೊಸರು ಮಿಶ್ರಣ ಮಾಡಿದರೆ ರಾಯಿತಾ ಸಿದ್ಧ. ಇದನ್ನು ಸೈಡ್ ಡಿಶ್ ಆಗಿ ಸವಿಯಬಹುದು.
freepik
ಸೌತೆಕಾಯಿ ಹುಳಿ: ಮಂಗಳೂರು ಸೌತೆಯನ್ನು ಬೇಯಿಸಿ ಇದಕ್ಕೆ ರುಬ್ಬಿರುವ ತೆಂಗಿನತುರಿ ಹಾಗೂ ಹಸಿಮೆಣಸಿನಕಾಯಿ ಮಿಶ್ರಣವನ್ನು ಹಾಕಿ ಮೊಸರನ್ನು ಕಡೆದು ಹಾಕಬೇಕು. ಅನ್ನದೊಂದಿಗೆ ಸೂಪರ್ ಕಾಂಬಿನೇಷನ್.
freepik
ಮೊಸರನ್ನ: ಅನ್ನಕ್ಕೆ ಮೊಸರು, ಉಪ್ಪು, ದಾಳಿಂಬೆ, ದ್ರಾಕ್ಷಿ, ಕತ್ತರಿಸಿದ ಸೇಬು ಸೇರಿಸಿ ಒಗ್ಗರಣೆ ಹಾಕಿ ಮಿಕ್ಸ್ ಮಾಡಿದರೆ ದಕ್ಷಿಣ ಭಾರತದ ಸ್ಪೆಷಲ್ ಮೊಸರನ್ನ ಸವಿಯಲು ಸಿದ್ಧ.
freepik
ಕಧಿ: ಮೊಸರು ಮತ್ತು ಕಡಲೇ ಹಿಟ್ಟಿಗೆ ಅರಶಿನ, ಜೀರಿಗೆ, ಸಾಸಿವೆ ಮುಂತಾದ ಮಸಾಲೆಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಅನ್ನದೊಂದಿಗೆ ಸವಿಯಲು ರುಚಿಕರವಾಗಿರುತ್ತದೆ.
ಮೊಸರು ವಡೆ: ದಹೀ ವಡಾ ಎಂದೂ ಕರೆಯಲಾಗುತ್ತದೆ. ಮೊಸರಿಗೆ ಉದ್ದಿನ ಬೇಳೆ ವಡೆಯನ್ನು ಅದ್ದಿ ಮಸಾಲೆ ಮಿಶ್ರಣ ಮಾಡಿ ಇದನ್ನು ತಯಾರಿಸಲಾಗುತ್ತದೆ.
ದಹಿ ಪಖಾಲಾ: ಇದು ಒಡಿಶಾದ ಸಾಂಪ್ರದಾಯಿಕ ಖಾದ್ಯವಾಗಿದೆ. ದೇಹವನ್ನು ತಂಪಾಗಿಸಲು ಮತ್ತು ಜೀರ್ಣಕ್ರಿಯೆ ಸುಧಾರಿಸಲು ಸಹಕಾರಿಯಾಗಿದೆ.
Wikipedia
ಶ್ರೀಖಂಡ್: 2 ಟೀ ಚಮಚ ಹಾಲಿಗೆ ಕೇಸರಿ ಮಿಶ್ರಣ ಮಾಡಿ ಮೊಸರಿನೊಂದಿಗೆ ಸೇರಿಸಿ, ಜೊತೆಗೆ ಪುಡಿ ಸಕ್ಕರೆ ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಇದಕ್ಕೆ ಒಣಹಣ್ಣುಗಳನ್ನು ಮಿಶ್ರಣ ಮಾಡಿದರೆ ಶ್ರೀಖಂಡ ಸಿಹಿ ತಿನಿಸು ಸವಿಯಲು ಸಿದ್ಧ.
ಖಮನ್ ಧೋಕ್ಲಾ: ಬೇಳೆ ಹಿಟ್ಟಿನಿಂದ ತಯಾರಿಸಲಾಗುವ ಈ ರೆಸಿಪಿಯನ್ನು ಮೊಸರಿನೊಂದಿಗೆ ಬಡಿಸಲಾಗುತ್ತದೆ. ಟೇಸ್ಟಿಯಾಗಿರುವ ಈ ಖಾದ್ಯವು ಆರೋಗ್ಯಕ್ಕೂ ಉತ್ತಮವಾಗಿದೆ.
ಬೆಂಡೆಕಾಯಿ ಮೊಸರು ಹುಳಿ: ಒಗ್ಗರಣೆ ಹಾಕಿ ಬೇಯಿಸಿದ ಬೆಂಡೆಕಾಯಿ ಮಸಾಲೆಗಳನ್ನು ಸೇರಿಸಿ, ಕೊನೆಗೆ ಮೊಸರು ಸೇರಿಸಬೇಕು. ಅನ್ನದೊಂದಿಗೆ ಈ ಖಾದ್ಯವನ್ನು ಸವಿಯಬಹುದು.
ಆಲೂ ದಹಿ: ಮೊಸರಿಗೆ ಮಸಾಲೆಗಳನ್ನು ಸೇರಿಸಿ ಮಿಕ್ಸ್ ಮಾಡಿಟ್ಟುಕೊಳ್ಳಬೇಕು. ಬಾಣಲೆಯಲ್ಲಿ ಎಣ್ಣೆ ಹಾಕಿ ಆಲೂಗಡ್ಡೆಯನ್ನು ಫ್ರೈ ಮಾಡಿ ಈ ಮೊಸರಿನ ಮಿಶ್ರಣವನ್ನು ಸೇರಿಸಿದರೆ ರುಚಿಕರವಾದ ಖಾದ್ಯ ಸವಿಯಲು ಸಿದ್ಧ.
ಹಳೆ ಸೀರೆ ಅಂತ ಮೂಲೆಗೆ ಹಾಕ್ಬೇಡಿ, ಇದ್ರಿಂದ ಸಖತ್ ಟ್ರೆಂಡಿ ಆಗಿರೋ ಬ್ಲೌಸ್ ಹೊಲಿಸಬಹುದು ನೋಡಿ