ತೆಂಗಿನಕಾಯಿ ಚಟ್ನಿ ಮಾಡುವುದು ತುಂಬಾನೇ ಸಿಂಪಲ್, ಇಲ್ಲಿದೆ ಸರಳ ವಿಧಾನ
freepik
By Priyanka Gowda
Sep 11, 2024
Hindustan Times
Kannada
ದೋಸೆ, ಇಡ್ಲಿ ಮುಂತಾದ ತಿಂಡಿಗಳನ್ನು ಚಟ್ನಿಯೊಂದಿಗೆ ಸವಿಯೋದೆ ಆನಂದ. ಈ ತೆಂಗಿನಕಾಯಿ ಚಟ್ನಿಯನ್ನು ಮಾಡುವುದು ಹೇಗೆ, ಇಲ್ಲಿ ತಿಳಿದುಕೊಳ್ಳಿ.
freepik
ಬೇಕಾಗುವ ಸಾಮಗ್ರಿ: ತುರಿದ ತೆಂಗಿನಕಾಯಿ- 1 ಕಪ್, ಹಸಿರು (ಒಣ) ಮೆಣಸಿನಕಾಯಿ-1, ಶುಂಠಿ- ಸಣ್ಣ ತುಂಡು, ಹುಣಸೆಹಣ್ಣು- ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
freepik
ಒಗ್ಗರಣೆ ಮಾಡಲು ಬೇಕಾಗುವ ಸಾಮಗ್ರಿ: ತೆಂಗಿನೆಣ್ಣೆ- 2 ಚಮಚ, ಒಣ ಮೆಣಸು-1, ಬೆಳ್ಳುಳ್ಳಿ- 2 (ಬೇಕಿದ್ದರೆ) ಸಾಸಿವೆ- 1 ಚಮಚ, ಕರಿಬೇವು- 7 ರಿಂದ 8 ಎಲೆ.
freepik
ತುರಿದ ತೆಂಗಿನಕಾಯಿ, ಹಸಿರು ಮೆಣಸಿನಕಾಯಿ, ಶುಂಠಿ, ಹುಣಸೆಹಣ್ಣು, ಉಪ್ಪನ್ನು ಸೇರಿಸಿ ಮಿಕ್ಸಿ ಜಾರಿನಲ್ಲಿ ರುಬ್ಬಿಕೊಳ್ಳಿ.
freepik
ಒಗ್ಗರಣೆ ತಯಾರಿಸಿ: ತೆಂಗಿನೆಣ್ಣೆ ಬಿಸಿ ಮಾಡಿ, ಒಣ ಮೆಣಸು, ಸಾಸಿವೆ, ಕರಿಬೇವು ಸೊಪ್ಪು ಹಾಕಿ. ಈ ಒಗ್ಗರಣೆಯನ್ನು ರುಬ್ಬಿರುವ ಚಟ್ನಿಗೆ ಸೇರಿಸಿ.
freepik
ಈ ಮಿಶ್ರಣವನ್ನು ಒಂದು ಬೌಲ್‍ಗೆ ವರ್ಗಾಯಿಸಿದರೆ ರುಚಿಕರವಾದ ತೆಂಗಿನಕಾಯಿ ಚಟ್ನಿ ಸವಿಯಲು ಸಿದ್ಧ.
freepik
ಇದೀಗ ಈ ಚಟ್ನಿಯನ್ನು ಇಡ್ಲಿ, ದೋಸೆ, ಕಡುಬು ತಿಂಡಿಯೊಂದಿಗೆ ಬಡಿಸಿ, ಸವಿಯಿರಿ.
freepik
ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ