ಊಟಕ್ಕೂ ಮುನ್ನ ಏನನ್ನಾದರೂ ತಿನ್ನಬೇಕು ಅನಿಸುತ್ತಾ: ಈ ಆರೋಗ್ಯಕರ ಆಹಾರಗಳನ್ನು ಸೇವಿಸಿ
freepik
By Priyanka Gowda
Sep 20, 2024
Hindustan Times
Kannada
ಮಧ್ಯಾಹ್ನದ ಊಟಕ್ಕೆ ಸ್ವಲ್ಪ ಮುಂಚಿತವಾಗಿ ಏನನ್ನಾದರೂ ತಿನ್ನಬೇಕು ಎಂದು ಕಡುಬಯಕೆ ಉಂಟಾಗುವುದು ಸಹಜ. ಹಸಿವನ್ನು ಕಳೆದುಕೊಳ್ಳದೆ ನೀವು ಪ್ರಯತ್ನಿಸಬಹುದಾದ ಆರೋಗ್ಯಕರ ಆಹಾರಗಳಿವು.
freepik
ಕತ್ತರಿಸಿದ ಸೇಬು ಹಣ್ಣು, ಬಾಳೆಹಣ್ಣು ಅಥವಾ ಬೀಜಗಳನ್ನು ಮಿಶ್ರಣ ಮಾಡಿ ಸೇವಿಸಬಹುದು. ಕ್ಯಾರೆಟ್ ಅನ್ನು ಕೂಡ ಸೇವಿಸಬಹುದು. ಇವು ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ.
Pexel
ಪ್ರೋಬಯಾಟಿಕ್‍ಗಳ ಉತ್ತಮ ಮೂಲವಾಗಿರುವ ಮೊಸರನ್ನು ಊಟಕ್ಕಿಂತ ಮುಂಚೆ ಸೇವಿಸಬಹುದು. ಸಿಹಿ ತಿಂಡಿ ತಿನ್ನಬೇಕು ಎಂಬ ಆಸೆಯುಂಟಾದರೆ ಮೊಸರು ಸೇವಿಸಬಹುದು.
Pexel
ಡಾರ್ಕ್ ಚಾಕೋಲೇಟ್ ಕಹಿ ರುಚಿಯನ್ನು ಹೊಂದಿರುವುದರಿಂದ ನಿಮ್ಮ ಕಡುಬಯಕೆಗಳನ್ನು ನಿಯಂತ್ರಿಸುತ್ತದೆ. ಆರೋಗ್ಯಕ್ಕೂ ಇದು ಉತ್ತಮ.
Pexel
ಗೋಡಂಬಿ, ಪಿಸ್ತಾ, ಬಾದಾಮಿ ಸೇವನೆಯು ಆರೋಗ್ಯಕ್ಕೆ ಉತ್ತಮವಾಗಿದೆ. ಇದನ್ನು ಮಿತವಾಗಿ ಸೇವಿಸುವುದು ಒಳಿತು.
Pexel
ಕುರುಕಲು ತಿಂಡಿ ತಿನ್ನಬೇಕು ಎಂದು ಬಯಕೆ ಉಂಟಾದರೆ ಆರೋಗ್ಯಕರವಾದ ಮಖಾನಾವನ್ನು ಆಯ್ಕೆ ಮಾಡಬಹುದು.
Pexel
ಚಿಕ್ಕಮಗಳೂರು ಜಿಲ್ಲೆ ಹರಿಹರಪುರ ಶಾರದೆಗಿಂದು ಮಯೂರವಾಹಿನಿ ಅಲಂಕಾರ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ