ಕಲಬೆರಕೆಯ ಭಯವೇ? ಹೀಗೆ ಮನೆಯಲ್ಲೇ ದೇಶಿ ಶೈಲಿಯ ತುಪ್ಪ ಮಾಡಿಕೊಳ್ಳಿ

By Raghavendra M Y
Sep 29, 2024

Hindustan Times
Kannada

ತುಪ್ಪದ ವಿಚಾರದಲ್ಲಿ ಕೇಳಿಬಂದಿರುವ ಕಲಬೆರಕೆಯ ಸುದ್ದಿಯಿಂದಾಗಿ ಎಲ್ಲರೂ ಆತಂಕಗೊಂಡಿದ್ದಾರೆ. ವಿಶೇಷವಾಗಿ ಹಬ್ಬ ಹರಿದಿನಗಳಲ್ಲಿ ಕಲಬೆರಕೆ ಹೆಚ್ಚಿರುತ್ತೆ

ರುಚಿಕರವಾದ ಆಹಾರ, ಸಿಹಿ ತಿಂಡಿ ತಯಾರಿಸಲು ಶುದ್ಧ ತುಪ್ಪ ಬಳಸಲಾಗುತ್ತೆ. ಪೂಜೆಯಲ್ಲಿ ಹವನ, ದೀಪಕ್ಕೂ ತುಪ್ಪ ಬಳಸಲಾಗುತ್ತೆ

ಕಲಬೆರಕೆಯ ಭಯದಿಂದ ನೀವು ತುಪ್ಪ ಖರೀದಿಸಲು ಇಷ್ಟವಿಲ್ಲದಿದ್ದರೆ ಅದನ್ನು ಮನೆಯಲ್ಲೇ ತಯಾರಿಸಬಹುದು. ತುಪ್ಪ ಮಾಡುವ ವಿಧಾನ ತಿಳಿದುಕೊಳ್ಳಿ

ಮನೆಯಲ್ಲೇ ತುಪ್ಪವನ್ನು ತಯಾರಿಸಲು ಅದಕ್ಕೆ ಬೇಕಾಗುವ ಹಾಲನ್ನು ಅಂಗಡಿಯಿಂದ ಖರೀದಿಸಿ. ಮನೆಯಲ್ಲೇ ಹಸುವಿನ ಹಾಲು ಸಿಕ್ಕರೆ ಇನ್ನೂ ಉತ್ತಮ

ಶುದ್ಧ ತುಪ್ಪವನ್ನು ತಯಾರಿಸಲು ಪ್ರತಿದಿನ ಕಾಯಿಸಿದ  ಹಾಲಿನಿಂದ ಕೆನೆಯನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಬಳಿಕ ಶೇಖರಿಸಿದ ಕೆನೆಗೆ 1 ಚಮಚ ಮೊಸರು ಸೇರಿಸಬೇಕು

ಕೆನೆಗೆ ಸ್ವಲ್ಪ ಮೊಸರು ಮಿಶ್ರಣ ಮಾಡಿ ಸುಮಾರು 1 ಗಂಟೆ ಹಾಗೆ ಬಿಡಿ. ಕೆನೆಗೆ ಮೊಸರು ಸೇರಿಸುವುದರಿಂದ ತುಪ್ಪದ ರುಚಿ ಹೆಚ್ಚಾಗುತ್ತೆ

ಬಳಿಕ ಗ್ಯಾಸ್ ಸ್ಟೌವ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಈ ಬೆಣ್ಣೆಯನ್ನು ಹಾಕಿ ಕಡಿಮೆ ಉರಿಯಲ್ಲಿ ಕಾಯಿಸಬೇಕು

ಸುಮಾರು 20 ರಿಂದ 25 ನಿಮಿಷಗಳ ನಂತರ ಹಳದಿ ಬಣ್ಣದ ತುಪ್ಪ ಮೇಲೆ ತೇಲಲು ಪ್ರಾರಂಭಿಸುತ್ತೆ. ಸುಟ್ಟ ಕಂದು ಬಣ್ಣದ ಕೆನೆ ತಳಭಾಗದಲ್ಲಿ ಉಳಿದುಕೊಳ್ಳುತ್ತೆ

ಈಗ ಗ್ಯಾಸ್ ಸ್ಟೌವ್ ಆಫ್ ಮಾಡಿ. ತುಪ್ಪವನ್ನು ತಣ್ಣಗಾಗಲು ಬಿಡಿ. ಸ್ಟ್ರೈನರ್ ಅಥವಾ ಒಣ ಬಟ್ಟೆಯ ಸಹಾಯದಿಂದ ಒಂದು ಪಾತ್ರೆಯಲ್ಲಿ ತುಪ್ಪವನ್ನು ಸೋಸಿಕೊಳ್ಳಿ

ತುಪ್ಪವನ್ನು ದೀರ್ಘಕಾಲದವರಿಗೆ ಸಂಗ್ರಹಿಸಲು ಅದನ್ನು ಗಾಜಿನ ಅಥವಾ ಸೆರಾಮಿಕ್ ಪಾತ್ರಯಲ್ಲಿ ಸಂಗ್ರಹಿಸಿ ಇಡಬೇಕು

ಮೊಸರಿನಿಂದ ಬೆಣ್ಣೆ ತೆಗೆದು ಅದರಿಂದಲೂ ಶುದ್ಧ ತುಪ್ಪವನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು

ಥೈರಾಯಿಡ್‌ ನಿಯಂತ್ರಿಸುವ 5 ಸರಳ ಯೋಗಾಸನಗಳು