ಮನೆಯಲ್ಲಿ ಮಾಡುವ ದೋಸೆ ಗರಿಗರಿಯಾಗಿ ಬರಲು ಈ ಟಿಪ್ಸ್ ಫಾಲೋ ಮಾಡಿ

slurrp

By Priyanka Gowda
Nov 26, 2024

Hindustan Times
Kannada

ಮನೆಯಲ್ಲಿ ಮಾಡುವ ದೋಸೆ ಮೃದುವಾಗಿರುತ್ತದೆ. ಆದರೆ, ಹೋಟೆಲ್‍ಗಳಲ್ಲಿ ತಿನ್ನುವ ದೋಸೆ ಗರಿಗರಿಯಾಗಿರುತ್ತದೆ. ಮನೆಯಲ್ಲೇ ಈ ರೀತಿ ಮಾಡಲು ಇಲ್ಲಿದೆ ಟಿಪ್ಸ್ 

slurrp

ರಾತ್ರಿಯಿಡೀ ಬೆಚ್ಚಗಿನ ಸ್ಥಳದಲ್ಲಿ ಇಡುವ ಮೂಲಕ ದೋಸೆ ಹಿಟ್ಟು ಚೆನ್ನಾಗಿ ಹುದುಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಹಿಟ್ಟು ಚೆನ್ನಾಗಿ ಹುದುಗಿದ್ದರೆ ದೋಸೆ ಗರಿಗರಿಯಾಗಿ ಬರುತ್ತದೆ.

slurrp

ಅಕ್ಕಿ ಮತ್ತು ಉದ್ದಿನಬೇಳೆ 3:1 ಅನುಪಾತ ಇರಲಿ. ಇದಕ್ಕೆ ಒಂದು ಹಿಡಿ ಬೇಯಿಸಿದ ಅನ್ನ ಅಥವಾ ಪೇಪರ್ ಅವಲಕ್ಕಿಯನ್ನು ಸೇರಿಸಬಹುದು. ಇದರಿಂದ ದೋಸೆ ಗರಿಗರಿಯಾಗಿ ಬರುತ್ತದೆ.

freepik

ದೋಸೆಯನ್ನು ಕಬ್ಬಿಣದ ತವಾ ಅಥವಾ ಉತ್ತಮ ಗುಣಮಟ್ಟದ ನಾನ್ ಸ್ಟಿಕ್ ಬಳಕೆ ಮಾಡಬೇಕು. ಯಾಕೆಂದರೆ ಶಾಖ ಇಡೀ ತವಾವನ್ನು ಒಂದೇ ರೀತಿಯಲ್ಲಿರಿಸುತ್ತದೆ.

freepik

ಹಿಟ್ಟು ತುಂಬಾ ದಪ್ಪವಾಗಿರಬಾರದು, ಹಾಗಂತ ಹೆಚ್ಚು ನೀರು ಸೇರಿಸಬೇಡಿ. ಸ್ವಲ್ಪ ತೆಳುವಾಗಿರಲಿ. ಹಿಟ್ಟು ದಪ್ಪವಿದ್ದರೆ ಗರಿಗರಿಯಾಗಿ ಬರುವುದಿಲ್ಲ, ದೋಸೆ ಮೃದುವಾಗಿರುತ್ತದೆ.

slurrp

ಮೊದಲಿಗೆ ತವಾವನ್ನು ಹೆಚ್ಚಿನ ಉರಿಯಲ್ಲಿ ಕಾಯಿಸಿ. ದೋಸೆ ಹಿಟ್ಟು ಹರಡುವ ಸಮಯದಲ್ಲಿ ಮಧ್ಯಮಕ್ಕೆ ತಗ್ಗಿಸಿ. ಇದರಿಂದ ಗೋಲ್ಡನ್ ಬ್ರೌನ್ ಹಾಗೂ ಗರಿಗರಿಯಾಗಿ ಹರಲು ಸಾಧ್ಯ.

slurrp

ದೋಸೆ ಬೇಯಿಸುವಾಗ ಅದರ ಅಂಚುಗಳ ಸುತ್ತಲೂ ಎಣ್ಣೆ ಅಥವಾ ತುಪ್ಪ ಹಾಕಿ. ಇದು ಪರಿಮಳವನ್ನು ಹೆಚ್ಚಿಸುವುದಲ್ಲದೆ, ದೋಸೆ ಗರಿಗರಿಯಾಗಿ ಬರಲು ಕಾರಣವಾಗುತ್ತದೆ.

slurrp

ದೋಸೆ ಹಿಟ್ಟು ಹಾಕಿದ ನಂತರ ವೃತ್ತಾಕಾರದಲ್ಲಿ ತೆಳುವಾಗಿ, ಸಮವಾಗಿ ಹರಡಿ. ಇದರಿಂದ ದೋಸೆ ಗರಿಗರಿಯಾಗಿ ಬರುತ್ತದೆ.

slurrp

ಚಳಿಗಾಲದಲ್ಲಿ ನೋಯುತ್ತಿರುವ ಗಂಟಲುನೋವಿಗೆ ಇಲ್ಲಿದೆ ಪರಿಹಾರ

freepik