ಬಾಯಲ್ಲಿ ನೀರೂರುವ ರಸಂ ವಡೆ ರೆಸಿಪಿ ಮಾಡುವ ವಿಧಾನ ಇಲ್ಲಿದೆ

freepik

By Priyanka Gowda
Dec 16, 2024

Hindustan Times
Kannada

ಈ ಚಳಿಗಾಲದಲ್ಲಿ ಬಿಸಿ ಬಿಸಿ ರಸಂ ವಡೆ ತಿನ್ನುತ್ತಿದ್ದರೆ ಅದರ ರುಚಿಯೇ ಬೇರೆ. ಬಹಳ ಸರಳವಾಗಿ ತಯಾರಿಸಬಹುದಾದ ದಕ್ಷಿಣ ಭಾರತದ ಸ್ಪೆಷಲ್ ರೆಸಿಪಿ ಇಲ್ಲಿದೆ.

freepik

ವಡೆ ಮಾಡಲು ಬೇಕಾಗುವ ಸಾಮಗ್ರಿಗಳು: ಉದ್ದಿನ ಬೇಳೆ- 1 ಕಪ್, ಶುಂಠಿ- 1 ಇಂಚು, ಹಸಿಮೆಣಸಿನಕಾಯಿ- 1, ತೆಂಗಿನ ತುರಿ- 1 ಟೀ ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ಕಾಳುಮೆಣಸು- 4 ರಿಂದ 5, ಉಪ್ಪು, ಕರಿಯಲು ಎಣ್ಣೆ.

freepik

ರಸಂ ಮಾಡಲು ಬೇಕಾಗುವ ಸಾಮಗ್ರಿಗಳು: ತೊಗರಿಬೇಳೆ- ಕಾಲು ಕಪ್, ಟೊಮೆಟೊ- 2, ಹುಣಸೆಹಣ್ಣು- 1 ಸಣ್ಣ ನಿಂಬೆ ಗಾತ್ರ, ರಸಂ ಪುಡಿ- 1 ಟೀ ಚಮಚ, ಕರಿಬೇವು- ಸ್ವಲ್ಪ, ಸಾಸಿವೆ- 1 ಟೀ ಚಮಚ, ಜೀರಿಗೆ- ಅರ್ಧ ಟೀ ಚಮಚ, ಅರಿಶಿನ ಪುಡಿ -ಚಿಟಿಕೆ, ಮೆಣಸಿನಪುಡಿ- ಅರ್ಧ ಟೀ ಚಮಚ, ಉಪ್ಪು, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಎಣ್ಣೆ.

ಮಾಡುವ ವಿಧಾನ: ಮೊದಲಿಗೆ ಉದ್ದಿನ ಬೇಳೆಯನ್ನು 3-4 ಗಂಟೆಗಳ ಕಾಲ ನೆನೆಸಿಡಿ. ಇದನ್ನು ಶುಂಠಿ, ಹಸಿಮೆಣಸಿನಕಾಯಿ, ಉಪ್ಪು ಹಾಕಿ ರುಬ್ಬಿಕೊಳ್ಳಿ.

freepik

ಈ ಮಿಶ್ರಣಕ್ಕೆ ಕತ್ತರಿಸಿದ ಕೊತ್ತಂಬರಿಸೊಪ್ಪು, ಸ್ವಲ್ಪ ತೆಂಗಿನತುರಿ, ಜಜ್ಜಿದ ಕಾಳುಮೆಣಸು ಹಾಕಿ ಮಿಶ್ರಣ ಮಾಡಿಟ್ಟುಕೊಳ್ಳಿ.

freepik

ರಸಂ ಮಾಡಲು, ಮೊದಲಿಗೆ ಬೇಯಿಸಿದ ಟೊಮೆಟೊ, ಜೀರಿಗೆ, ಕಾಳುಮೆಣಸು ಹಾಕಿ ರುಬ್ಬಿಕೊಳ್ಳಿ. 

freepik

ಬಾಣಲೆಯಲ್ಲಿ ಎಣ್ಣೆ ಹಾಕಿ ಒಗ್ಗರಣೆ ಮಾಡಿ. ಇದಕ್ಕೆ ರುಬ್ಬಿರುವ ಮಿಶ್ರಣವನ್ನು ಹಾಕಿ. ನಂತರ ಹುಣಸೆಹಣ್ಣು, ಕೊತ್ತಂಬರಿ ಸೊಪ್ಪು, ಬೆಲ್ಲ, ರಸಂ ಪುಡಿ ಮೆಣಸಿನ ಪುಡಿ, ಉಪ್ಪು ಸೇರಿಸಿ ಬೇಯಲು ಬಿಡಿ.

ಇನ್ನೊಂದೆಡೆ ಕರಿಯಲು ಬಾಣಲೆಗೆ ಎಣ್ಣೆ ಹಾಕಿ ವಡೆಯ ಮಿಶ್ರಣವನ್ನು ತೆಗೆದುಕೊಂಡು ಎಣ್ಣೆಯಲ್ಲಿ ಚೆನ್ನಾಗಿ ಕರಿಯಿರಿ.

freepik

ರಸಂ ಸಿದ್ಧವಾದರೆ ಸ್ಟೌವ್ ಆಫ್ ಮಾಡಿ. ಇತ್ತ ಕಡೆ ವಡೆ ಕೂಡ ಸಿದ್ಧವಾಗಿದೆ. ವಡೆ ಮೇಲೆ ರಸಂ ಹಾಕಿದರೆ ಬಿಸಿ ಬಿಸಿ ರಸಂ ವಡೆ ಸವಿಯಲು ಸಿದ್ಧ.

freepik

ಸಾರ್ವಕಾಲಿಕ ಶ್ರೇಷ್ಠ ತಬಲಾ ವಾದಕ ಜಾಕಿರ್ ಹುಸೇನ್  ಕುರಿತು 10 ಆಸಕ್ತಿಕರ ವಿಚಾರಗಳಿವು