ಅಕ್ಕಿಯಿಂದ ಮಾಡಿದ ಎಂಟು ಬಗೆಯ ಸಾಂಪ್ರದಾಯಿಕ ಸಿಹಿ-ತಿಂಡಿಗಳು ಇಲ್ಲಿವೆ
freepik
By Priyanka Gowda Sep 24, 2024
Hindustan Times Kannada
ಭಾರತದಲ್ಲಿ ಅಕ್ಕಿ ಬಹಳ ಪ್ರಧಾನವಾಗಿದ್ದು, ಇದನ್ನು ಕೇವಲ ಮುಖ್ಯ ಭಕ್ಷ್ಯಗಳಿಗಾಗಿ ಮಾತ್ರವಲ್ಲ, ಸಾಂಪ್ರದಾಯಿಕ ಭಾರತೀಯ ಸಿಹಿ-ತಿಂಡಿಗಳಲ್ಲೂ ಇದನ್ನು ಬಳಕೆ ಮಾಡಲಾಗುತ್ತದೆ.
freepik
ಅಕ್ಕಿ ಪಾಯಸ: ಇದು ಅತ್ಯಂತ ಪ್ರಸಿದ್ಧವಾದ ಭಾರತೀಯ ಸಿಹಿ ತಿಂಡಿಯಾಗಿದ್ದು, ಅಕ್ಕಿ, ಹಾಲು, ಸಕ್ಕರೆ ಅಥವಾ ಬೆಲ್ಲ, ಏಲಕ್ಕಿ ಮತ್ತು ಒಣಹಣ್ಣುಗಳನ್ನು ಹಾಕಿ ತಯಾರಿಸಲಾಗುತ್ತದೆ.
freepik
ಅರಶಿನ ಎಲೆ ಕಡುಬು: ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಇದನ್ನು ನಾಗರಪಂಚಮಿಯಂದು ತಯಾರಿಸಲಾಗುತ್ತದೆ. ಅಕ್ಕಿ ಹಿಟ್ಟು, ತೆಂಗಿನತುರಿ ಬೆಲ್ಲ ವನ್ನು ಅರಶಿನ ಎಲೆಗೆ ಸವರಿ ಹಬೆಯಲ್ಲಿ ಬೇಯಿಸಲಾಗುತ್ತದೆ.
slurrp
ಅಕ್ಕಿ ಹಿಟ್ಟು, ಸಕ್ಕರೆ, ತುಪ್ಪ, ಉಪ್ಪು ಇವೆಲ್ಲವನ್ನೂ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಸಣ್ಣಗೆ ಬನ್ಸ್ ರೀತಿ ತಟ್ಟಿ ಕಾದ ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಿದರೆ ರುಚಿಕರವಾದ ಅಕ್ಕಿ ಹಿಟ್ಟಿನ ಸಿಹಿ ತಿಂಡಿ ಸಿದ್ಧ.
freepik
ಅಕ್ಕಿ ಬರ್ಫಿ: ಅಕ್ಕಿ ಹಿಟ್ಟು, ತುಪ್ಪ, ಖೋವಾ, ಒಣ ಹಣ್ಣುಗಳು ಮತ್ತು ಸಕ್ಕರೆ ಪಾಕದಿಂದ ತಯಾರಿಸಲಾಗುತ್ತದೆ.
freepik
ಅಕ್ಕಿ ಹಲ್ವಾ: ಅಕ್ಕಿ ಹಿಟ್ಟಿನಿಂದ ಈ ಹಲ್ವಾವನ್ನು ತಯಾರಿಸಲಾಗುತ್ತದೆ. ತುಪ್ಪ, ಸಕ್ಕರೆ ಅಥವಾ ಸಕ್ಕರೆಪಾಕ, ಏಲಕ್ಕಿ ಪುಡಿ, ಒಣಹಣ್ಣುಗಳನ್ನು ಹಾಕಿ ತಯಾರಿಸಲಾಗುತ್ತದೆ.
freepik
ಅಕ್ಕಿ ಪೊಂಗಲ್ ತಮಿಳುನಾಡಿನ ಅತ್ಯಂತ ಪ್ರಸಿದ್ಧ ಸಿಹಿ ಭಕ್ಷ್ಯವಾಗಿದೆ. ಕರ್ನಾಟಕದಲ್ಲೂ ಇದನ್ನು ತಯಾರಿಸಲಾಗುತ್ತದೆ. ಅಕ್ಕಿ, ಬೆಲ್ಲ, ಕಡಲೇಬೇಳೆ ಹಾಗೂ ತುಪ್ಪ ಹಾಕಿ ಈ ಸಿಹಿ ಖಾದ್ಯವನ್ನು ತಯಾರಿಸಲಾಗುತ್ತದೆ.
ಪತಿಶಪ್ತ: ಇದನ್ನು ಅಕ್ಕಿ ಹಿಟ್ಟು, ತೆಂಗಿನಕಾಯಿ, ತುಪ್ಪ, ಖರ್ಜೂರ, ಬೆಲ್ಲ ಮತ್ತು ಏಲಕ್ಕಿಯಿಂದ ತಯಾರಿಸಲಾಗುತ್ತದೆ. ಇದು ಬಂಗಾಳಿ ಸಿಹಿ-ತಿಂಡಿಯಾಗಿದೆ.
ಕಾಸರ್ ಲಡ್ಡು: ಅಕ್ಕಿ ಹಿಟ್ಟು, ಬೆಲ್ಲ, ತುಪ್ಪ ಮತ್ತು ಸೋಂಪು ಕಾಳು ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಉತ್ತರ ಭಾರತದ ಕಡೆ ಇದು ಬಹಳ ಪ್ರಸಿದ್ಧಿ ಪಡೆದಿದೆ.
freepik
ಪುಟಾಣಿ ಮಕ್ಕಳಿಗೆ ರಂಗು ರಂಗಿನ ಚಿತ್ರ ಬಿಡಿಸಲು ಇಲ್ಲಿದೆ ಸಲಹೆ