ಈರುಳ್ಳಿ-ಬೆಳ್ಳುಳ್ಳಿ ಬಳಸದೆ ಅಡುಗೆ ರುಚಿ ಹೆಚ್ಚಿಸಲು ಇಲ್ಲಿದೆ ಐಡಿಯಾ

By Reshma
Apr 01, 2024

Hindustan Times
Kannada

ಅಡುಗೆಯ ರುಚಿ ಹೆಚ್ಚಬೇಕು ಅಂದ್ರೆ ಸರ್ವ ಸಾಮಗ್ರಿಗಳು ಇರಬೇಕು ಎಂದು ಹಿಂದಿನವರು ಹೇಳುತ್ತಿದ್ದರು. ಅದರಂತೆ ಬೆಳ್ಳುಳ್ಳಿ, ಈರುಳ್ಳಿ ಇಲ್ಲ ಅಂದ್ರೆ ಅಡುಗೆಗೆ ರುಚಿ ಇರುವುದಿಲ್ಲ. ಆದರೆ ಕೆಲವು ಸಂಪ್ರದಾಯಗಳಲ್ಲಿ ಅಡುಗೆಗೆ ಬೆಳ್ಳುಳ್ಳಿ, ಈರುಳ್ಳಿ ಬಳಸುವುದೇ ಇಲ್ಲ. 

ಯಾವುದೇ ಖಾದ್ಯಕ್ಕೆ ಮಸಾಲೆ ತಯಾರಿಸುವಾಗ ಬೆಳ್ಳುಳ್ಳಿ, ಈರುಳ್ಳಿ ಇರಲೇಬೇಕಾಗುತ್ತದೆ. ಹಾಗಿದ್ದಾಗ ಈರುಳ್ಳಿ, ಬೆಳ್ಳುಳ್ಳಿ ಬಳಸದೇ ಖಾದ್ಯಗಳ ರುಚಿ ಹೆಚ್ಚಿಸುವುದು ಸವಾಲೇ ಸರಿ. 

ಆದರೆ ಈ ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ ಬೆಳ್ಳುಳ್ಳಿ ಹಾಗೂ ಈರುಳ್ಳಿ ಬಳಸದೇ ಅಡುಗೆಯ ರುಚಿಯನ್ನು ಹೆಚ್ಚಿಸಬಹುದು. 

ಕಾಶ್ಮೀರಿ ಚಿಲ್ಲಿ, ಸಾಸಿವೆ ಎಣ್ಣೆ, ಇಂಗು, ಖಾರದಪುಡಿ, ಸೋಂಪು, ಜೀರಿಗೆ, ದಾಲ್ಚಿನ್ನಿ, ಲವಂಗ, ಕಪ್ಪು ಏಲಕ್ಕಿ, ಕಾಳುಮೆಣಸು, ಹಸಿರು ಏಲಕ್ಕಿ, ಒಣ ಶುಂಠಿ ಈ ಎಲ್ಲವನ್ನೂ ಸೇರಿಸಿ ಮಸಾಲೆ ತಯಾರಿಸಿ. 

ಮಸಾಲೆಯನ್ನು ಟೊಮೆಟೊ ಪ್ಯೂರಿಯೊಂದಿಗೆ ಸೇರಿಸಿ. ಬಾಟಲಿಯಲ್ಲಿ ಈ ಮಿಶ್ರಣವನ್ನು ಚೆನ್ನಾಗಿ ಫ್ರೈ ಮಾಡಿ. ನಂತರ ಆಲೂಗೆಡ್ಡೆ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಗೂ ತರಕಾರಿಗಳನ್ನು ಸೇರಿಸಿ ಬೇಯಿಸಿ. 

ಈ ಎಲ್ಲವೂ ಬೆಂದ ನಂತರ ಕಸೂರಿ ಮೇಥಿ ಹಾಗೂ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಈ ನಿಮ್ಮ ವೆಜ್‌ ಸಂಬಾರ್‌ ಸಖತ್‌ ಟೇಸ್ಟಿ ಆಗಿ ತಿನ್ನಲು ಸಿದ್ಧವಾಗುತ್ತದೆ. 

ತರಕಾರಿ ಗ್ರೇವಿಗೆ ಈರುಳ್ಳಿ, ಬೆಳ್ಳುಳ್ಳಿ ಬದಲು ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ ಸೇರಿಸಿ. ಇದು ಕೂಡ ಅಡುಗೆಯ ರುಚಿ ಹೆಚ್ಚಲು ಸಹಾಯ ಮಾಡುತ್ತದೆ. 

ನೀವು ಯಾವುದೇ ತರಕಾರಿ ಸಾಂಬಾರ್‌ ಮಾಡುತ್ತಿರಲಿ ಅದಕ್ಕೆ ಕರಿಬೇವು ಸೇರಿಸಿದರೆ ಆ ಅಡುಗೆಯ ಘಮವೇ ಬದಲಾಗುತ್ತದೆ. ಜೊತೆಗೆ ರುಚಿಯೂ ಹೆಚ್ಚುತ್ತದೆ. 

ದಾಲ್ಚನ್ನಿ ಪುಡಿ ಹಾಗೂ ಲವಂಗ ಸೇರಿಸುವುದರಿಂದ ಸಾಂಬಾರ್‌ಗೆ ವಿಶೇಷ ರುಚಿ ಸಿಗುತ್ತದೆ. 

ನೀವು ಈರುಳ್ಳಿ, ಬೆಳ್ಳುಳ್ಳಿ ಬಳಸದೇ ಸಾಂಬಾರ್‌ ತಯಾರಿಸುತ್ತಿದ್ದರೆ ಗರಂಮಸಾಲೆ ಸೇರಿಸುವುದರಿಂದ ಕೂಡ ರುಚಿ ಹಾಗೂ ಸ್ವಾದವನ್ನು ಹೆಚ್ಚಿಸಬಹುದು. 

ಸುಖಕರ ದಾಂಪತ್ಯ ಜೀವನಕ್ಕೆ ಈ ಸಲಹೆಗಳನ್ನು ಪಾಲಿಸಿ

freepik