ಬಾಯಿ ಚಪ್ಪರಿಸುವಂತ ರುಚಿಯ ಸೀತಾಫಲ ರಬ್ಡಿ
By Rakshitha Sowmya
Sep 14, 2024
Hindustan Times
Kannada
ಮಧ್ಯಾಹ್ನ, ರಾತ್ರಿ ಊಟದ ನಂತರ ಏನಾದರೂ ಸಿಹಿ ತಿನ್ನಬೇಕು ಎನಿಸದೆ ಇರದು
ಖೀರು, ಚಾಕೊಲೇಟ್, ಹಲ್ವಾ ತಿಂದು ಬೇಸರ ಎನಿಸಿದರೆ ಒಮ್ಮೆ ಸೀತಾಫಲ ರಬ್ಡಿ ಮಾಡಿ ಸೇವಿಸಿ
ಸೀತಾಫಲ ಆರೋಗ್ಯಕ್ಕೆ ಬಹಳ ಒಳ್ಳೆಯದು
ಈ ಸಿಹಿ ಹಣ್ಣಿನಿಂದ ರಬ್ಡಿ ಮಾಡುವುದು ಬಹಳ ಸುಲಭ
1 ಲೀ. ಕಟ್ಟಿ ಹಾಲು, 2 ಕಪ್ ಸೀತಾಫಲ ಪ್ಯೂರಿ, 2 ಚಮಚ ಡ್ರೈ ಫ್ರೂಟ್ಸ್, ಚಿಟಿಕೆ ಏಲಕ್ಕಿ ಪುಡಿ ಇದ್ದರೆ ಸಾಕು
ದಪ್ಪ ತಳವಿರುವ ಪ್ಯಾನ್‌ಗೆ ಹಾಲು ಸೇರಿಸಿ ಕುದಿಯಲು ಬಿಡಿ
ಹಾಲು ಕುದಿಯುವಾಗ ಉರಿ ಕಡಿಮೆ ಮಾಡಿ ಏಲಕ್ಕಿ ಪುಡಿ ಸೇರಿಸಿ ಕಡಿಮೆ ಉರಿಯಲ್ಲಿ 15 ನಿಮಿಷ ಬಿಡಿ
ಹಾಲಿನ ಮೇಲ್ಭಾಗ ಕೆನೆ ಕಟ್ಟುವಾಗ ಅದನ್ನು ತಿರುವುತ್ತಿರಿ
ಹಾಲು, ಸುಮಾರು ಅರ್ಧದಷ್ಟು ಬಂದಾಗ ಸೀತಾಫಲ ಪ್ಯೂರಿ, ಡ್ರೈ ಫ್ರೂಟ್ಸ್ ಸೇರಿಸಿ ಮಿಕ್ಸ್ ಮಾಡಿ
ಮಿಶ್ರಣ ಗಟ್ಟಿಯಾದಾಗ ಸ್ಟೌವ್ ಆಫ್ ಮಾಡಿ, ತಣ್ಣಗಾದಾಗ 2 ಗಂಟೆಗಳ ಕಾಲ ರೆಫ್ರಿಜರೇಟರ್‌ನಲ್ಲಿಡಿ, ರುಚಿ ನೋಡಿ ಬೇಕಿದ್ದಲ್ಲಿ ಸಕ್ಕರೆ ಸೇರಿಸಿ
ಜೈಪುರ ಪಿಂಕ್ ಪ್ಯಾಂಥರ್ಸ್ಗೆ ನೂತನ ನಾಯಕ ಘೋಷಣೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ