ಜಿಐ ಟ್ಯಾಗ್ ಗೌರವ ಪಡೆದ ಭಾರತದ ಸ್ವೀಟ್ಸ್ ಇವು, ಕರ್ನಾಟಕದ್ದೂ ಇವೆ

By Jayaraj
May 05, 2024

Hindustan Times
Kannada

ಭಾರತದಲ್ಲಿ ಹಬ್ಬ ಹರಿದಿನಗಳಂದು ಸಿಹಿ ಬೇಕೇ ಬೇಕು. ಸಾವಿರಾರು ಬಗೆಯ ಸಿಹಿತಿಂಡಿಗಳಗೆ ಭಾರತ ಹೆಸರುವಾಸಿ. 

ದೇಶದ ಪ್ರತಿ ರಾಜ್ಯಗಳೂ ತನ್ನದೇ ಆದ ವಿಶೇಷ ಸಿಹಿತಿಂಡಿಗಳನ್ನು ಹೊಂದಿದೆ. ಇದರಲ್ಲಿ ಕೆಲವೊಂದು ತನ್ನ ವಿಶಿಷ್ಟ ರುಚಿಯಿಂದಾಗಿ ಸರ್ಕಾರದಿಂದ GI ಟ್ಯಾಗ್ ಸಹ ಪಡೆದುಕೊಂಡಿದೆ.

ಹಾಗಿದ್ದರೆ ಈ ಜಿಐ ಟ್ಯಾಗ್ (Geographical Indication) ಗೌರವ ಪಡೆದ ಭಾರತದ ಸಿಹಿತಿಂಡಿಗಳು ಯಾವುದು ಎಂಬ ಬಗ್ಗೆ ತಿಳಿಯೋಣ.

ಮಿಹಿದಾನ: ಇದು ಬಂಗಾಳದ ಪ್ರಸಿದ್ಧ ಸಿಹಿ ತಿಂಡಿಯಾಗಿದೆ. ನೋಡಲು ಮೋತಿಚೂರ್ ಲಡ್ಡುವಿನಂತೆಯೇ ಕಾಣುತ್ತದೆ. ಈ ಸಿಹಿತಿಂಡಿಗೆ 2017ರಲ್ಲಿ GI ಟ್ಯಾಗ್ ಸಿಕ್ಕಿತು.

ರಸಗುಲ್ಲಾ: ಪಶ್ಚಿಮ ಬಂಗಾಳದ ರಸಗುಲ್ಲಾ, ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿದೆ. 2017ರಲ್ಲಿ ಇದು GI ಟ್ಯಾಗ್ ಗೌರವ ಪಡೆದುಕೊಂಡಿದೆ.

ಖಾಜಾ: ದೇಶದ ವಿವಿಧ ರಾಜ್ಯಗಳಲ್ಲಿ ಹಲವು ಹೆಸರುಗಳಿಂದ ಇದನ್ನು ಕರೆಯಲಾಗುತ್ತದೆ. 2018ರಲ್ಲಿ, ಬಿಹಾರದ ಪ್ರಸಿದ್ಧ ಸಿಲಾವ್ ಖಾಜಾ ಸಿಹಿತಿಂಡಿಗೆ GI ಟ್ಯಾಗ್ ಸಿಕ್ಕಿತು.

ತಮಿಳುನಾಡಿನ ಕೋವಿಲ್‌ಪಟ್ಟಿಯಲ್ಲಿ ಕಡಲೆಕಾಯಿಯಿಂದ ತಯಾರಿಸುವ ವಿಶಿಷ್ಟ ಸಿಹಿ ತಿಂಡಿ ಕಡಲೈ. ವಿಶಿಷ್ಟ ರುಚಿಯಿಂದಾಗಿ 2021ರ ಏಪ್ರಿಲ್ ತಿಂಗಳಲ್ಲಿ GI ಟ್ಯಾಗ್ ಪಡೆದುಕೊಂಡಿತು.

ಧಾರವಾಡ ಪೇಡಾ: ನಮ್ಮ ಕರ್ನಾಟಕದ ಪ್ರಸಿದ್ಧ ಸಿಹಿತಿಂಡಿ ಧಾರವಾಡ ಪೇಡಾ. ಹಾಲಿನಿಂದ ತಯಾರಿಸುವ ಈ ಸಿಹಿಗೆ ಜಿಐ ಟ್ಯಾಗ್ ಸಿಕ್ಕಿದೆ.

ಮೈಸೂರು ಪಾಕ್: ಕರ್ನಾಟಕದ ಘನತೆ ಹಾಗೂ ಅಸ್ಮಿತೆಯಲ್ಲಿ ಪಾಲು ಪಡೆದ ಮೈಸೂರು ಪಾಕ್, 2016ರಲ್ಲಿ ಜಿಐ ಟ್ಯಾಗ್ ಪಡೆದುಕೊಂಡಿತು.

2024ರಲ್ಲಿ ಹೆಚ್ಚು ಸಂಭಾವನೆ ಪಡೆಯುವ ಟಾಪ್-10 ಕ್ರೀಡಾಪಟುಗಳು