ರಾಗಿ ಹುರಿಹಿಟ್ಟು ಮಾಡುವ ವಿಧಾನ

By Meghana B
Feb 25, 2024

Hindustan Times
Kannada

ಒಂದು ಕಪ್​ ರಾಗಿಯನ್ನು 2 ಗ್ಲಾಸ್​ ಕುದಿಕುದಿ ಬಿಸಿ ನೀರಿನಲ್ಲಿ ನೆನೆಸಿ ಒಂದು ಗಂಟೆಯ ಕಾಲ ಮುಚ್ಚಿಡಿ. 

ಕೆಲವರು ಬಿಸಿ ನೀರಿನಲ್ಲಿ ಒಂದು ಗಂಟೆ ನೆನೆಸುವ ಬದಲು, ಹುಳಿ ಮಜ್ಜಿಗೆಯಲ್ಲಿ 5-6 ಗಂಟೆಗಳ ಕಾಲ ನೆನೆಸುತ್ತಾರೆ. 

ಈಗ ನಾವು ಬಿಸಿ ನೀರಿಲ್ಲಿ 1 ಗಂಟೆ ನೆನೆದ ನಂತರ ರಾಗಿಯನ್ನು ಸೋಸಿಕೊಳ್ಳಿ. ರಾಗಿಯಲ್ಲಿನ ನೀರು ಸಂಪೂರ್ಣವಾಗಿ ಹೋಗುವಂತೆ ನೋಡಿಕೊಳ್ಳಿ. 

ನಂತರ ಒಂದು ಬಾಣಲಿಯಲ್ಲಿ ಲೋ ಫ್ಲೇಮ್​ ಅಲ್ಲಿ ರಾಗಿಯನ್ನು ಹುರಿದುಕೊಳ್ಳಬೇಕು. ರಾಗಿ ಚಟಪಟ ಅಂತ ಸಿಡಿದರೆ ಸಾಕು, ಹೆಚ್ಚು ಹೊತ್ತು ಬಿಟ್ಟರೆ ಸೀದಿ ಹೋಗುತ್ತದೆ. ಆದರೆ ಅದು ಸಿಡಿಯುವ ವರೆಗೂ ಹುಟ್ಟು ಆಡಿಸುತ್ತಲೇ ಇರಬೇಕು. 

ಹುರಿದ ರಾಗಿಯನ್ನು ಮಿಕ್ಸಿ ಜಾರ್​ಗೆ ಹಾಕಿ ಪುಡಿ ಮಾಡಿಕೊಳ್ಳಿ. ಈಗ ರಾಗಿ ಹುರಿಹಿಟ್ಟು ರೆಡಿ. 

ರಾಗಿ ಹುರಿಹಿಟ್ಟಿಗೆ ಸಿಹಿ-ಹುಳಿ ಸೇರಿಸಿ ನೀವು ಪಾನಕ, ಸಿಹಿ ಉಂಡೆ, ಹುರಿಹಿಟ್ಟು ಒಗ್ಗರಣೆ ಹಾಗೂ ಇತರ ತಿನಿಸನ್ನು ತಯಾರಿಸಬಹುದಾಗಿದೆ. 

ಗದಗ ನಗರದಲ್ಲಿ 1998ರಲ್ಲಿ ಆರಂಭಗೊಂಡ ವಸ್ತುಸಂಗ್ರಹಾಲಯದಲ್ಲಿ 700 ಪ್ರಾಚ್ಯವಸ್ತುಗಳ ಸಂಗ್ರಹವಿದೆ.