ಪರ್ಫೆಕ್ಟ್‌ ಮೋಮೊ ತಯಾರಿಸಲು ಉಪಯುಕ್ತ ಟಿಪ್ಸ್‌

By Rakshitha Sowmya
Sep 13, 2024

Hindustan Times
Kannada

ಮೋಮೊಸ್‌ ಈಗ ಎಲ್ಲರ ಅಚ್ಚುಮೆಚ್ಚಿನ ಡಿಶ್‌ ಆಗಿದೆ, ಇದು ಟಿಬೆಟಿಯನ್-ನೇಪಾಳಿ ಕುಸಿನ್‌

ಕರ್ನಾಟಕದಲ್ಲೂ ಮೋಮೊಸ್‌ ಇಷ್ಟಪಡುವವರು ಹೆಚ್ಚಾಗಿದ್ದಾರೆ, ಈಗ ಇದು ಸ್ಟ್ರೀಟ್‌ ಫುಡ್‌ ಆಗಿಯೂ ಫೇಮಸ್‌

ಮೋಮೊಸ್‌ ಹಬೆಯಲ್ಲಿ ಬೇಯಿಸುವುದರಿಂದ ಕರಿದ ತಿಂಡಿಗಳಿಗೆ ಹೋಲಿಸಿದರೆ ಇದು ಬೆಸ್ಟ್‌

ಒಂದು ವೇಳೆ ನೀವು ಮನೆಯಲ್ಲೇ ಮೋಮೊಸ್‌ ತಯಾರಿಸಬೇಕು ಎಂದಿದ್ದರೆ ಇಲ್ಲಿ ನಿಮಗಾಗಿ ಕೆಲವೊಂದು ಟಿಪ್ಸ್‌ ನೀಡಲಾಗಿದೆ

ಮೊಮೊ ಮಿಕ್ಸ್‌ ಹೊರಗೆ ತರುವ ಬದಲಿಗೆ ಮೈದಾಹಿಟ್ಟು, ಚಿಟಿಕೆ ಉಪ್ಪು, ಹಾಲನ್ನು ಬಳಸಿ ಮೋಮೊ ಹಿಟ್ಟು ತಯಾರಿಸಿ

ಹಿಟ್ಟು ಬೆರೆಸುವಾಗ ಹಿಟ್ಟು ಮತ್ತು ನೀರನ್ನು 2:1 ಅನುಪಾತದಲ್ಲಿ ಸೇರಿಸಿ, ಹಿಟ್ಟು ಮಿಕ್ಸ್‌ ಮಾಡಿದ ನಂತರ ಅರ್ಧ ಗಂಟೆವರೆಗೆ ಬಿಡಿ

ಹಿಟ್ಟನ್ನು ಶೇಪ್‌ ಮಾಡುವಾಗ ಗಾತ್ರಕ್ಕೆ ಆದ್ಯತೆ ಕೊಡಿ, ಮೋಮೊಸ್‌ ಸುತ್ತ ಬಹಳ ದಪ್ಪ ಇರಬಾರದು, ತೆಳುವಾಗಿಯೂ ಇರಬಾರದು

ಮೋಮೋಸ್‌ ಒಳಗೆ ಹೆಚ್ಚು ಸ್ಟಫಿಂಗ್‌ ತುಂಬಿದರೆ ಅದು ಬೇಯುವಾಗ ಹೊರ ಬರಬಹುದು, ಕಡಿಮೆ ಇದ್ದರೆ ರುಚಿ ಇರುವುದಿಲ್ಲ, ಆದ್ದರಿಂದ ಸರಿಯಾಗಿ ಫಿಲ್ಲಿಂಗ್‌ ಇಡಿ

ಮೊಮೊಸ್  ಚಿಕ್ಕದಾಗಿದ್ದರೆ,   ಒಂದು ಚಮಚ ಸ್ಟಫಿಂಗ್‌ ಸೇರಿಸಿ ಮತ್ತು ಗಾತ್ರವು ಸ್ವಲ್ಪ ದೊಡ್ಡದಾಗಿದ್ದರೆ ಸ್ವಲ್ಪ ಹೊರಗೆ ತೆಗೆಯಿರಿ

ಮೊಮೊಸ್ ಅಂಚುಗಳನ್ನು ಸರಿಯಾಗಿ ಮುಚ್ಚಿ, ಬಿಡದಂತೆ ಮಾಡಲು ಪ್ಲೀಟಿಂಗ್ (ನೆರಿಗೆಯಂತೆ) ತಂತ್ರ ಬೆಸ್ಟ್‌ ಆಯ್ಕ. ಹೀಗೆ ಮಾಡುವುದರಿಂದ ಸ್ಟಫಿಂಗ್ ಹೊರ ಬರುವುದಿಲ್ಲ

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?