ಹೋಟೆಲ್ ಶೈಲಿಯ ಟೊಮೆಟೊ ಸೂಪ್ ರೆಸಿಪಿ, ಚಳಿಗಾಲಕ್ಕೆ ಸಖತ್ ಆಗಿರುತ್ತೆ
By Reshma
Nov 23, 2024
Hindustan Times
Kannada
ಚಳಿಯ ವಾತಾವರಣದಲ್ಲಿ ಬಿಸಿ ಬಿಸಿ ಟೊಮೆಟೊ ಸೂಪ್ ತಿನ್ನೋಕೆ ಸಖತ್ ಆಗಿರುತ್ತೆ. ಇದು ಆರೋಗ್ಯಕ್ಕೂ ಒಳ್ಳೆಯದು
ಹೋಟೆಲ್‌ನಲ್ಲಿ ಸಿಗುವಷ್ಟೇ ರುಚಿಯ ಟೊಮೆಟೊ ಸೂಪ್ ಅನ್ನು ನೀವು ಮನೆಯಲ್ಲೂ ಮಾಡಿಕೊಳ್ಳಬಹುದು
ಹೋಟೆಲ್ ಶೈಲಿಯ ಟೊಮೆಟೊ ಸೂಪ್ ಮಾಡಲು ಟೊಮೆಟೊ, ಬೆಳ್ಳುಳ್ಳಿ, ಈರುಳ್ಳಿ, ಬೆಣ್ಣೆ, ಉಪ್ಪು, ಕಾಳುಮೆಣಸು, ಸಕ್ಕರೆ, ಕೆನೆ ಹಾಗೂ ತಾಜಾ ಕೊತ್ತಂಬರಿ ಸೊಪ್ಪು ಬೇಕು
ಮೊದಲು ಟೊಮೆಟೊವನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಹೆಚ್ಚಿಕೊಳ್ಳಿ
ಈಗ ಬಾಣಲಿಯನ್ನು ಬಿಸಿ ಮಾಡಿ ಅದಕ್ಕೆ ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ ಹಾಕಿ ಕೆಂಬಣ್ಣ ಬರುವವರೆಗೂ ಹುರಿದುಕೊಳ್ಳಿ. ನಂತರ ಇದಕ್ಕೆ ಹೆಚ್ಚಿಕೊಂಡ ಟೊಮೆಟೊ ಸೇರಿಸಿ
ಟೊಮೆಟೊ ಮೃದುವಾಗುವವರೆಗೂ ಬೇಯಿಸಿ. ನಂತರ ಉಪ್ಪು, ಕಾಳುಮೆಣಸು ಸೇರಿಸಿ. ಈ ಮಿಶ್ರಣವು ತಣ್ಣದಾಗ ಮೇಲೆ ರುಬ್ಬಿ ಫಿಲ್ಟರ್ ಮಾಡಿ
ಸೋಸಿದ ಮಿಶ್ರಣವನ್ನು ಬಿಸಿ ಮಾಡಿ. ಹುರಿದ ಜೀರಿಗೆ, ಕಾಲು ಚಮಚ ಸಕ್ಕರೆ, ಕೆನೆ ಹಾಕಿ. 10 ರಿಂದ 15 ನಿಮಿಷ ಅದನ್ನು ಕುದಿಸಿ
ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಬೇಕಿದರೆ ಇದರ ಜೊತೆ ಬ್ರೆಡ್ ತುಂಡುಗಳನ್ನು ಸೇರಿಸಬಹುದು
ಭಾರತದ ದಿಗ್ಗಜ ಕ್ರಿಕೆಟಿಗರ ನೆಚ್ಚಿನ ಹವ್ಯಾಸಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ