ರಾತ್ರಿ ಮಿಕ್ಕಿದ ಅನ್ನದಿಂದ ಮಾಡಬಹುದು ಸಖತ್ ಟೇಸ್ಟಿ ಇಡ್ಲಿ, ಹೇಗೆ ಅಂತ ನೋಡಿ
By Reshma Sep 10, 2024
Hindustan Times Kannada
ದಕ್ಷಿಣ ಭಾರತದಲ್ಲಿ ಅನ್ನದ ಬಳಕೆ ಹೆಚ್ಚು. ಬಹುತೇಕರು ಪ್ರತಿದಿನ ಅನ್ನ ತಿನ್ನುತ್ತಾರೆ. ಆದರೆ ಎಷ್ಟೇ ಕಡಿಮೆ ಮಾಡಿದ್ರು ಅನ್ನ ಮಿಕ್ಕದೇ ಇರುವುದಿಲ್ಲ.
ಆದರೆ ರಾತ್ರಿ ಮಿಕ್ಕಿದ ಅನ್ನವನ್ನು ಮರುದಿನ ತಿನ್ನಲು ಯಾರೂ ಇಷ್ಟಪಡುವುದಿಲ್ಲ. ಹಾಗಾಗಿ ಎಸೆಯಬೇಕಾಗುತ್ತದೆ.
ಅದರ ಬದಲು ಮಿಕ್ಕಿದ ಅನ್ನದಿಂದ ರುಚಿಕರ ಖಾದ್ಯವನ್ನು ತಯಾರಿಸಬಹುದು. ಇಂದು ಮಿಕ್ಕಿದ ಅನ್ನದಿಂದ ಸಖತ್ ಟೇಸ್ಟಿ ಆಗಿರೋ ಇಡ್ಲಿ ಮಾಡೋದು ಹೇಗೆ ಅಂತ ನೋಡೋಣ.
ಇಡ್ಲಿಗೆ ಬೇಕಾಗುವ ಸಾಮಗ್ರಿಗಳು: ಮಿಕ್ಕಿದ ಅನ್ನ – 1.5 ಕಪ್, ರವೆ – 1 ಕಪ್, ಮೊಸರು – 1ಕಪ್, ಅಡುಗೆ ಸೋಡಾ – ಚಿಟಿಕೆ, ಉಪ್ಪು – ರುಚಿಗೆ ತಕ್ಕಷ್ಟು
ಮಿಕ್ಕಿದ ಅನ್ನವನ್ನು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ. ಇದು ಇಡ್ಲಿ ಹಿಟ್ಟಿನ ಹದಕ್ಕೆ ಇರಬೇಕು.
ಈಗ ಪ್ಯಾನ್ ಸಣ್ಣ ಉರಿಯಲ್ಲಿ ಇಡಿ ಇಟ್ಟು ಬಿಸಿ ಮಾಡಿ, ಅದಕ್ಕೆ ರವೆ ಹಾಕಿ ಹುರಿಯಿರಿ. ರವೆ ತಣ್ಣದಾಗ ಮೇಲೆ ಅದಕ್ಕೆ ಒಂದು 1 ಕಪ್ ಮೊಸರು, ಸ್ವಲ್ಪ ಉಪ್ಪು ಸೇರಿಸಿ ಮಿಶ್ರಣ ಮಾಡಿ.
ಒಂದು ದೊಡ್ಡ ಪಾತ್ರೆಯಲ್ಲಿ ರುಬ್ಬಿಕೊಂಡ ಅಕ್ಕಿ ಹಿಟ್ಟು ಮತ್ತು ರವೆ ಪೇಸ್ಟ್ ಸೇರಿಸಿ, ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ.
ಈ ಹಿಟ್ಟನ್ನು 20 ರಿಂದ 30 ನಿಮಿಷಗಳ ಕಾಲ ಹುದುಗಲು ಬಿಡಿ. ಅದಕ್ಕೆ ಅಡಿಗೆ ಸೋಡಾ ಸೇರಿಸಿ ಮಿಶ್ರಣ ಮಾಡಿ.
ಇಡ್ಲಿ ಪಾತ್ರೆಗೆ ಎಣ್ಣೆ ಸವರಿ ಹಿಟ್ಟನ್ನು ಹಾಕಿ. ಇದನ್ನು ಮಧ್ಯಮ ಉರಿಯಲ್ಲಿ ಬೇಯಿಸಿ.
ಇದೀಗ ನಿಮ್ಮ ಮುಂದೆ ಮಿಕ್ಕಿದ ಅನ್ನದಿಂದ ತಯಾರಾದ ರುಚಿಕರ ಇಡ್ಲಿ ಇರುತ್ತದೆ. ಇದಕ್ಕೆ ಬೇಕಾದರೆ ನೀವು ಉದ್ದಿನಬೇಳೆ ಒಗ್ಗರಣೆ ಸೇರಿಸಬಹುದು. ಇದನ್ನು ಚಟ್ನಿ ಅಥವಾ ಸಾಂಬಾರ್ ಜೊತೆ ತಿನ್ನಲು ಸಖತ್ ಆಗಿರುತ್ತೆ.