ಮನೆಯಲ್ಲೇ ಮಾಡ್ಕೊಳ್ಳಿ ರುಚಿಯಾದ ವೆಜ್ ಶಮಿ ಕಬಾಬ್‌, ಇಲ್ಲಿದೆ ವಿಧಾನ 

By Reshma
Sep 17, 2024

Hindustan Times
Kannada

ಕಬಾಬ್ ಯಾರಿಗೆ ಇಷ್ಟವಿಲ್ಲ ಹೇಳಿ. ಇದರ ಹೆಸರು ಕೇಳಿದ್ರೆ ಬಾಯಲ್ಲಿ ನೀರೂರುತ್ತೆ

ಕಬಾಬ್ ಇತಿಹಾಸ ತಿಳಿಯಲು ಹೊರಟರೆ ಇದು ಪರ್ಷಿಯನ್ ಸಾಮ್ರಾಜ್ಯದಲ್ಲಿ ಹುಟ್ಟಿಕೊಂಡಿತು. ಪರ್ಷಿಯಾ ಮೂಲದ ಈ ತಿನಿಸು ಈಗ ಭಾರತೀಯರಿಗೆ ಅಚ್ಚುಮೆಚ್ಚು 

ನಾನ್‌ ವೆಜ್‌ ಕಬಾಬ್ ಫೇಮಸ್‌, ಹಾಗಂತ ವೆಜ್ ಕಬಾಬ್ ಮಾಡಲು ಸಾಧ್ಯವಿಲ್ಲ ಎಂದರ್ಥವಲ್ಲ. ವೆಜ್‌ನಲ್ಲೂ ಸಖತ್ ಟೇಸ್ಟಿ ಕಬಾಬ್ ಮಾಡಬಹುದು 

ಇಂದು ವೆಜ್ ಶಮಿ ಕಬಾಬ್ ಅನ್ನು ಸುಲಭವಾಗಿ ಮಾಡೋದು ಹೇಗೆ ನೋಡಿ

ಅರ್ಧ ಕಪ್ ಬೇಯಿಸಿಟ್ಟುಕೊಂಡ ಬೇಳೆ, ಅರ್ಧ ಕಪ್ ಬೇಯಿಸಿದ ಆಲೂಗೆಡ್ಡೆ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ 1 ಟೀ ಚಮಚ, ಕಾಳುಮೆಣಸು – ಚಿಟಿಕೆ, ಖಾರದಪುಡಿ – ಅರ್ಧ ಚಮಚ, ಕೊತ್ತಂಬರಿ ಪುಡಿ – 1 ಚಮಚ, ಉಪ್ಪು ಹಾಗೂ ಎಣ್ಣೆ 

ಮೊದಲು ಒಂದು ಬಟ್ಟಲಿನಲ್ಲಿ ಬೇಯಿಸಿದ ಬೇಳೆ ಹಾಗೂ ಆಲೂಗೆಡ್ಡೆಯನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿ 

ಈಗ ಈ ಮಿಶ್ರಣಕ್ಕೆ ಎಣ್ಣೆ ಹೊರತು  ಪಡಿಸಿ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ

ಈ ಮಿಶ್ರಣ ಹಿಟ್ಟಿನ ಹದಕ್ಕೆ ಬಂದ ಮೇಲೆ ಅದರಿಂದ ಉಂಡೆ ತಯಾರಿಸಿ 

ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಬಿಸಿಯಾದ ಮೇಲೆ ಮಾಡಿಟ್ಟುಕೊಂಡ ಉಂಡೆಯನ್ನು ಸ್ವಲ್ಪ ಅಗಲಕ್ಕೆ ತಟ್ಟಿ ಎಣ್ಣೆಗೆ ಬಿಡಿ 

ಎರಡೂ ಕಡೆ ಬಣ್ಣ ಬದಲಾಗಿ ಬೆಂದ ಮೇಲೆ ಇದನ್ನು ಗ್ರೀನ್ ಚಟ್ನಿ ಹಾಗೂ ಸಾಸ್ ಜೊತೆ ನೆಂಜಿಕೊಂಡು ತಿನ್ನಿ

10 ಸಾವಿರ ರೂಗಿಂತ ಕಡಿಮೆ ದರದ ಅತ್ಯುತ್ತಮ 15 ಸ್ಮಾರ್ಟ್‌ಫೋನ್‌ಗಳಿವು