ಕ್ರಿಸ್‌ಮಸ್‌ಗೆ ಥಿಯೇಟರ್‌ನಲ್ಲಿ ಯಾವ ಸಿನಿಮಾ ನೋಡ್ತಿರಿ? ಮ್ಯಾಕ್ಸ್‌ನಿಂದ ಬೇಬಿ ಜಾನ್‌ ತನಕ

By Praveen Chandra B
Dec 24, 2024

Hindustan Times
Kannada

ಡಿಸೆಂಬರ್‌ 25ರಂದು ಕ್ರಿಸ್‌ಮಸ್‌ ಹಬ್ಬದ ರಜಾ ದಿನದಂದು ನಾಲ್ಕು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇವುಗಳಲ್ಲಿ ಮೂರು ಸಿನಿಮಾಗಳ ಕುರಿತು ಹೆಚ್ಚಿನ ಹೈಪ್‌ ಕ್ರಿಯೆಟ್‌ ಆಗಿದೆ.

ಮ್ಯಾಕ್ಸ್‌:  ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾ ಡಿಸೆಂಬರ್‌ 25ರಂದು ಬಿಡುಗಡೆಯಾಗುತ್ತಿದೆ. ನಾಯಕಿಯಾಗಿ  ವರಲಕ್ಷ್ಮಿ ಶರತ್‌ಕುಮಾರ್ ನಟಿಸಿದ್ದಾರೆ.

ಬೇಬಿ ಜಾನ್‌: ವರುಣ್ ಧವನ್ ಅಭಿನಯದ ಬೇಬಿ ಜಾನ್‌ ಹಿಂದಿ ಸಿನಿಮಾ ಕೂಡ ಕ್ರಿಸ್‌ಮಸ್‌ ಹಬ್ಬದಂದು ಬಿಡುಗಡೆಯಾಗುತ್ತಿದೆ.  ಕೀರ್ತಿ ಸುರೇಶ್ , ವಮಿಕಾ  ಕೂಡ ನಟಿಸಿದ್ದಾರೆ.

ಬರೋಜ್‌ : ಮೋಹನ್‌ಲಾಲ್‌ ನಿರ್ದೇಶನ ಮತ್ತು ನಟನೆಯ ಬರೋಜ್‌ ಎಂಬ 3ಡಿ ಸಿನಿಮಾ ಡಿಸೆಂಬರ್‌ 25ರಂದು ರಿಲೀಸ್‌ ಆಗುತ್ತಿದೆ. ಮೂಲ ಮಲಯಾಳಂ ಮಾತ್ರವಲ್ಲದೆ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ಶ್ರೀಕಾಕುಳಂ ಶೆರ್ಲಾಕ್‌ಹೋಮ್ಸ್ : ಟಾಲಿವುಡ್‌ನಲ್ಲಿ ಶ್ರೀಕಾಕುಳಂ ಶೆರ್ಲಾಕ್‌ಹೋಮ್ಸ್  ಎಂಬ ಕಾಮಿಡಿ ಸಿನಿಮಾ ಬಿಡುಗಡೆಯಾಗುತ್ತಿದೆ. ವೆನ್ನೆಲ ಕಿಶೋರ್ ಮತ್ತು ಅನನ್ಯ ನಾಗಲ್ಲ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಹೀಗೆ ಕ್ರಿಸ್‌ಮಸ್‌ ರಜೆ ಸೇರಿದಂತೆ ಈ ವೀಕೆಂಡ್‌ಗೆ ನೋಡಲು ಒಟ್ಟು ನಾಲ್ಕು ಸಿನಿಮಾಗಳಿವೆ. ಯಾವ ಸಿನಿಮಾ ಫಸ್ಟ್‌ ನೋಡ್ತಿರಿ? ಆಯ್ಕೆ ಮಾಡಿಕೊಳ್ಳಿ.

ಎಕೆ-47 ಎದುರು ಶರಣಾದ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್​