Friendship Day: ನಿಮ್ಮ ಫ್ರೆಂಡ್ಸ್‌ಗೆ 500 ರೂಪಾಯಿ ಒಳಗೆ ಗಿಫ್ಟ್‌ ಕೊಡಲು ಇಲ್ಲಿದೆ ಐಡಿಯಾ

By Reshma
Aug 03, 2024

Hindustan Times
Kannada

ಫ್ರೆಂಡ್‌ಶಿಪ್‌ ಡೇ ಬಂದೇ ಬಿಡ್ತು. ನಾಳೆ (ಆಗಸ್ಟ್‌ 4) ನಿಮ್ಮ ಬೆಸ್ಟ್‌ ಫ್ರೆಂಡ್‌ಗೆ ಏನ್‌ ಗಿಫ್ಟ್‌ ಕೋಡೋದು ಅಂತ ಇನ್ನೂ ಗೊಂದಲದಲ್ಲೇ ಇದ್ದೀರಾ? ಇಲ್ಲಿದೆ ನಿಮಗಾಗಿ ಒಂದಿಷ್ಟು ಇಲ್ಲಿದೆ ಐಡಿಯಾಗಳು. 

500 ರೂಪಾಯಿ ಒಳಗೆ ಬಜೆಟ್‌ ಫ್ರೆಂಡ್ಲಿ ಗಿಫ್ಟ್‌ ಕೊಡಬೇಕು ಅಂತಿದ್ರೆ ಈ ಐಡಿಯಾಗಳು ಖಂಡಿತ ನಿಮಗೆ ಇಷ್ಟ ಆಗುತ್ತೆ. 

ಸ್ಪೀಕರ್‌ಗಳು, ಸ್ಮಾರ್ಟ್‌ಫೋನ್‌ಗೆ ಬೇಕಾಗುವ ಪರಿಕರಗಳನ್ನು ನೀವು ಗಿಫ್ಟ್‌ ನೀಡಬಹುದು. 

ಕಾಫಿ ಮಗ್‌ ಕೊಟ್ರೆ ಖಂಡಿತ ನಿಮ್ಮ ಫ್ರೆಂಡ್‌ ಬೇಜಾರಾಗೊಲ್ಲ. ನಿಮ್ಮ ಸ್ನೇಹಿತ ಅಥವಾ ಸ್ನೇಹಿತೆ ಟೀ, ಕಾಫಿ ಲವರ್‌ ಆದ್ರೆ ಅವರು ಇದನ್ನು ಖಂಡಿತ ಇಷ್ಟಪಡ್ತಾರೆ. 

ಫಿಟ್‌ನೆಸ್‌ ಟ್ರ್ಯಾಕರ್‌ ಗಿಫ್ಟ್‌ ಮಾಡೋದು ಬೆಸ್ಟ್‌. ಯಾಕಂದ್ರೆ ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ಫಿಟ್‌ನೆಸ್‌ ಬಗ್ಗೆ ಗಮನ ಕೊಡುವವರೇ ಅನ್ನೋದು ಗಮನಿಸಬೇಕಾದ ವಿಚಾರ. 

ಕಸ್ಟ್‌ಮೈಸ್ಡ್‌ ಆಭರಣಗಳು, ಕೀಚೈನ್‌, ಫೋಟೊ ಆಲ್ಬಮ್‌ ಇದನ್ನೂ ಕೂಡ ಕೊಡಬಹುದು. 

ನಿಮ್ಮ ಸ್ನೇಹಿತ ಪುಸ್ತಕ ಪ್ರೇಮಿ ಆದ್ರೆ ಇವರ ಆಸಕ್ತಿಯ ವಿಚಾರ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬಹುದು. 

ನಿಮ್ಮ ಫ್ರೆಂಡ್‌ ಪರಿಸರ ಪ್ರೇಮಿಯಾಗಿದ್ದರೆ ಹೂಕುಂಡ, ಗಿಡಗಳನ್ನು ಕೂಡ ನೀಡಬಹುದು. 

ಇನ್ನೂ ನಿಮಗೆ ಗಿಫ್ಟ್‌ ತೆಗೆದುಕೊಳ್ಳಲು ಸಮಯವಿಲ್ಲ ಎಂದಾದ್ರೆ ಚಾಕೊಲೇಟ್‌ ಬಾಕ್ಸ್‌ ಕೂಡ ಕೊಟ್ಟು ಖುಷಿ ಪಡಿಸಬಹುದು. 

ಕ್ರಿಕೆಟ್​ನಲ್ಲಿ ನಿವೃತ್ತಿ ಪಡೆದ ಜೆರ್ಸಿ ಸಂಖ್ಯೆಗಳು ಯಾವುವು?