ಮತ್ಸ್ಯ ಅವತಾರ: ವಿಷ್ಣುವಿನ ಮೊದಲ ಅವತಾರ ಮೀನಿನ ರೂಪದಲ್ಲಿತ್ತು. ಮೀನು ಮಾನವ ಜೀವನದ ಮೂಲವನ್ನು ಪ್ರತಿನಿಧಿಸುತ್ತೆ
ಆಮೆ: ಆಮೆಯನ್ನು ಶ್ರೀಹರಿಯ ಎರಡನೇ ಅವತಾರವೆಂದು ಪರಿಗಣಿಸಲಾಗಿದೆ. ಮಾನವ ವಿಕಾಸದ ಹಾದಿಯಲ್ಲಿ ಆಮೆ ಸಮುದ್ರದಿಂದ ಭೂಮಿಗೆ ಚಲಿಸುವ ಜೀವನವನ್ನು ಪ್ರತಿನಿಧಿಸುತ್ತೆ
ವರಾಹ: ವರಾಹ ದೇವರಾಗಿ ವಿಷ್ಣು ತನ್ನ ಮೂರನೇ ಅವತಾರವಾಗಿ ಕಾಣಿಸಿಕೊಂಡ. ಈ ರೂಪವು ಕಾಡು ಹಂದಿ ಮತ್ತು ಇತರೆ ಕಾಡು ಪ್ರಾಣಿಗಳನ್ನು ಪ್ರತಿನಿಧಿಸುತ್ತದೆ
ನರಸಿಂಹ: ವಿಷ್ಣುವು ನಾಲ್ಕನೇ ಅವತಾರದಲ್ಲಿ ನರಸಿಂಹನಾಗಿ ಕಾಣಿಸಿಕೊಂಡನು. ಇದರಲ್ಲಿ ಅರ್ಧ ಸಿಂಹ ಮತ್ತು ಉಳಿದ ಭಾಗ ಮನುಷ್ಯನ ದೇಹವಾಗಿ ಕಾಣಿಸಿಕೊಂಡಿದ್ದಾನೆ
ವಾಮನ: ವಾಮನ ದೇವರು ವಿಷ್ಣುವಿನ ಐದನೇ ಅವತಾರವಾಗಿ ಕಾಣಿಸಿಕೊಂಡಿದ್ದಾನೆ
ಪರಶುರಾಮ: ಮನುಷ್ಯನಿಗೆ ಉಪಕರಣದ ಅವಶ್ಯಕತೆಯ ಸಮಯದಲ್ಲಿ ವಿಷ್ಣು ಪರಶುರಾಮನಾಗಿ ಅವತರಿಸಿದನೆಂದು ನಂಬಲಾಗಿದೆ
ಶ್ರೀ ರಾಮ: ಭೂಮಿಯ ಮೇಲೆ ಮಾನವರ ದೊಡ್ಡ ಸಂಖ್ಯೆ ಇದ್ದಾಗ, ನಂತರ ರಾಜ, ಜನರು ಮತ್ತು ಸಮಾಜಕ್ಕೆ ಬಟ್ಟೆಯನ್ನು ನೇಯುವ ಅಗತ್ಯವಿದ್ದಾಗ ಶ್ರೀರಾಮನ ಅವತಾರವನ್ನು ಪಡೆದನು ಎಂದು ಹೇಳಲಾಗುತ್ತದೆ
ಶ್ರೀಕೃಷ್ಣ: ಶ್ರೀರಾಮನ ನಂತರ ವಿಷ್ಣು ಶ್ರೀಕೃಷ್ಣನಾಗಿ ಅವತರಿಸಿದನು. ಎಲ್ಲರ ನೆಚ್ಚಿನ ದೇವರಾಗಿ ರೂಪ ತಾಳಿದನು
ಬುದ್ಧ: ವಿಷ್ಣುವಿನ ಒಂಬತ್ತನೇ ಅವತಾರ ಮಹಾತ್ಮ ಬುದ್ಧನ ಅವತಾರವಾಗಿದೆ. ಈ ಮೂಲಕ ಮಾನವರಿಂದ ಜ್ಞಾನದ ಅಂತಿಮ ಹುಡುಕಾಟವನ್ನು ಗುರುತಿಸಿದರು ಎಂದು ಕೆಲವು ಧಾರ್ಮಿಕ ಗ್ರಂಥಗಳು ಹೇಳುತ್ತವೆ
ಕಲ್ಕಿ: ವಿಷ್ಣುವಿನ 10ನೇ ಅವತಾರ ಕಲ್ಲಿಯ ರೂಪವಾಗಿದೆ. ಕಲಿಯುಗದಲ್ಲಿ ಪಾಪವನ್ನು ಕೊನೆಗೊಳಿಸಲು ಈ ಅವತಾರವನ್ನು ತಾಳಿದನು ಎಂಬ ನಂಬಿಕೆಗಳಿವೆ
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ