ಆ ಒಂದು ತಪ್ಪಿಂದ ನಿಮ್ಮ ಸ್ಮಾರ್ಟ್ ಟಿವಿಯನ್ನು ಹಾಳು ಮಾಡದಿರಿ

By Jayaraj
Apr 28, 2024

Hindustan Times
Kannada

ಆಧುನಿಕ ಸ್ಮಾರ್ಟ್ ಟಿವಿ ಸ್ಕ್ರೀನ್‌ ಕ್ಲೀನ್‌ ಮಾಡುವುದು ಹಲವರಿಗೆ ಸವಾಲಿನ ಕೆಲಸ

ಕೆಲವೊಬ್ಬರು ಕ್ಲೀನಿಂಗ್‌ ವೇಳೆ ಮಾಡುವ ತಪ್ಪಿನಿಂದ ಆ ಬಳಿಕ ಪಶ್ಚಾತ್ತಾಪ ಪಡುತ್ತಾರೆ.

ಹಾಗಿದ್ದರೆ ಟಿವಿ ಸ್ಕ್ರೀನ್ ಅನ್ನು ಯಾವ ರೀತಿ ಸರಿಯಾದ ಕ್ರಮದಲ್ಲಿ ಕ್ಲೀನ್‌ ಮಾಡಬೇಕು ಎಂಬುದನ್ನು ತಿಳಿಯೋಣ.

ಸ್ಕ್ರೀನ್‌ ಕ್ಲೀನರ್ ಅಥವಾ ಯಾವುದೇ ಲಿಕ್ವಿಡ್ ಅನ್ನು ನೇರವಾಗಿ ಟಿವಿ ಸ್ಕ್ರೀನ್ ಮೇಲೆ ಹಾರಿಸಬೇಡಿ.

ನೇರವಾಗಿ ಸ್ಪ್ರೇ ಮಾಡಿದರೆ, ಆ ಲಿಕ್ವಿಡ್‌ ಟಿವಿಯ ಬಿಡಿ ಭಾಗಗಳ ಒಳಗೆ ಹೋಗುತ್ತದೆ.

ಹೀಗಾದರೆ ಟೆಲಿವಿಷನ್‌ ಡಿಸ್ಪ್ಲೇ ಹಾಳಾಗುತ್ತದೆ.

ಹೀಗಾಗಿ ಟಿವಿಯನ್ನು ನೀವು ಮೈಕ್ರೋ ಫೈಬರ್ ಬಟ್ಟೆಯಿಂದ ಸ್ವಚ್ಛಗೊಳಿಸಬೇಕು.

ಬಟ್ಟೆಗೆ ಸ್ವಲ್ಪವೇ ಸ್ಕ್ರೀನ್‌ ಕ್ಲೀನರ್‌ ಹಾಕಿ ಸ್ವಚ್ಛಗೊಳಿಬೇಕು.

ಟಿಶ್ಯೂ ಪೇಪರ್‌ ಅಥವಾ ದಪ್ಪನೆಯ ಟವೆಲ್‌ನಿದ ಸ್ವಚ್ಛಗೊಳಿಸಿದರೆ ಟಿವಿ ಡಿಸ್ಪ್ಲೇ ಮೇಲೆ ಸ್ಕ್ರಾಚ್‌ ಬೀಳಬಹುದು.

ಮಳೆಗಾಲದಲ್ಲಿ ನಮ್ಮ ಬಳಿ ಇರಲೇಬೇಕಾದ 10 ಅಗತ್ಯ ವಸ್ತುಗಳಿವು