ತಲೆಗೂದಲು ಉದುರುತ್ತಿರುವ ಚಿಂತೆಯಾ: ಈ ಐದು ಆಹಾರಗಳನ್ನು ಸೇವಿಸಿ

freepik

By Priyanka Gowda
Oct 01, 2024

Hindustan Times
Kannada

ತಲೆಗೂದಲು ಉದುರುವಿಕೆ ಸಮಸ್ಯೆ ಕೇವಲ ಹೆಂಗಳೆಯರು ಮಾತ್ರವಲ್ಲ ಯುವಕರೂ ಕೂಡ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ.

freepik

ನೀವು ಕೂಡ ತಲೆಗೂದಲು ಉದುರುವಿಕೆಯ ಚಿಂತೆಯಲ್ಲಿದ್ದರೆ ಈ 5 ಆಹಾರಗಳನ್ನು ಸೇವಿಸಿ, ಪ್ರಯೋಜನ ಪಡೆಯಬಹುದು.

freepik

ಪಾಲಕ್ ಸೊಪ್ಪು: ಇದರಲ್ಲಿ ಕಬ್ಬಿಣದ ಅಂಶ ಹೇರಳವಾಗಿದ್ದು, ಕೂದಲಿನ ಕಿರುಚೀಲಗಳಿಗೆ ಆಮ್ಲಜನಕವನ್ನು ಸಾಗಿಸಲು ಸಹಾಯ ಮಾಡುತ್ತದೆ. ಕೂದಲು ಉದುರುವಿಕೆಯನ್ನು ಕಡಿಮೆ ಮಾಡುವಲ್ಲಿ ಸಹಕಾರಿ.

freepik

ಮೊಸರು: ಪ್ರೋಟೀನ್‌ನಲ್ಲಿ ಸಮೃದ್ಧವಾಗಿದ್ದು, ಕೂದಲಿನ ಕಿರುಚೀಲಗಳನ್ನು ಬಲಪಡಿಸಲು ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ. 

freepik

ಬಾದಾಮಿ: ಪ್ರೋಟೀನ್, ಮೆಗ್ನೀಸಿಯಮ್‌ನ ಸಮೃದ್ಧ ಮೂಲವಾಗಿರುವ ಬಾದಾಮಿ ಸೇವನೆಯು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಹಾಗೂ ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ.

freepik

ಮೊಟ್ಟೆ: ಕೂದಲಿನ ಆರೋಗ್ಯಕ್ಕೆ ಅವಶ್ಯಕವಾಗಿರುವ ಪ್ರೋಟೀನ್ ಹಾಗೂ ಬಯೋಟಿನ್‌ನಲ್ಲಿ ಸಮೃದ್ಧವಾಗಿದೆ. ಮೊಟ್ಟೆ ಸೇವನೆಯು ಕೂದಲನ್ನು ಬಲಪಡಿಸಲು ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯಕವಾಗಿದೆ. 

freepik

ವಾಲ್‌ನಟ್ಸ್: ವಿಟಮಿನ್ ಇ, ಬಯೋಟಿನ್‌ನಲ್ಲಿ ಸಮೃದ್ಧವಾಗಿರುವ ಇದು ಕೂದಲಿನ ಕಿರುಚೀಲಗಳನ್ನು ಬಲಪಡಿಸಲು ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ಸಹಕಾರಿ.

freepik

ಕನ್ನಡ ಬಿಗ್‌ ಬಾಸ್‌ನಲ್ಲಿ ಗೆದ್ದವರು, ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡವರು