ಕೂದಲು ಉದುರುವುದನ್ನು ತಡೆಯುವ 5 ಸೂಪರ್‌ಫುಡ್‌ಗಳಿವು, ನಿರಂತರ ಸೇವಿಸಿದ್ರೆ ಫಲಿತಾಂಶ ಖಚಿತ 

freepik

By Reshma
Oct 03, 2024

Hindustan Times
Kannada

ಕೂದಲು ಉದುರುವುದು ಇತ್ತೀಚೆಗೆ ಪುರುಷರು ಹಾಗೂ ಮಹಿಳೆಯರನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯಾಗಿದೆ. ಹದಿ ವಯಸ್ಸಿನ ಮಕ್ಕಳೂ ಕೂಡ ಕೂದಲು ಉದುರುವ ಸಮಸ್ಯೆ ಎದುರಿಸುತ್ತಿದ್ದಾರೆ 

freepik

ನೀವೂ ಕೂದಲು ಉದುರುವ ಸಮಸ್ಯೆ ಎದುರಿಸುತ್ತಿದ್ದಾರೆ ಅದಕ್ಕಾಗಿ ಔಷಧಿಗಳ ಮೊರೆ ಹೋಗಬೇಕು  ಎಂದೇನಿಲ್ಲ.

ನಾವು ಸೇವಿಸುವ ಕೆಲವು ಆಹಾರಗಳು ಕೂದಲನ್ನು ಆರೈಕೆ ಮಾಡಿ ಕೂದಲು ಉದುರದಂತೆ ತಡೆಯುವುದು ಸುಳ್ಳಲ್ಲ 

ಕೂದಲಿಗೆ ಸೂಪರ್‌ಫುಡ್ ಎನ್ನಿಸುವ 5 ಆಹಾರಗಳು ಇಲ್ಲಿವೆ, ಇವುಗಳ ನಿರಂತರ ಸೇವನೆಯಿಂದ ಕೂದಲು ಉದುರುವನ್ನು ತಡೆಯಬಹುದು 

freepik

ಪಾಲಕ್ ಸೊಪ್ಪು: ಕಬ್ಬಿಣಾಂಶ ಹೇರಳವಾಗಿರುವ ಪಾಲಕ್ ಸೊಪ್ಪು ಕೂದಲಿನ ಕಿರುಚೀಲಗಳಿಗೆ ಆಮ್ಲಜನಕವನ್ನು ಒದಗಿಸುತ್ತದೆ. ಆ ಮೂಲಕ ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ 

freepik

ಮೊಸರು: ಮೊಸರಿನಲ್ಲಿ ಪ್ರೊಟೀನ್ ಸಮೃದ್ಧವಾಗಿದೆ. ಇದು ಕೂದಲಿನ ಕಿರುಚೀಲಗಳನ್ನು ಬಲಪಡಿಸಿ ಕೂದರು ಉದುರುವುದನ್ನು ತಡೆಯುತ್ತದೆ 

freepik

ಬಾದಾಮಿ: ಪ್ರೊಟೀನ್, ಮೆಗ್ನೀಸಿಯಮ್ ಸಮೃದ್ಧ ಮೂಲವಾಗಿದ್ದು, ಬಾದಾಮಿ ಸೇವನೆಯು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ 

freepik

ಮೊಟ್ಟೆ: ಕೂದಲಿನ ಆರೋಗ್ಯಕ್ಕೆ ಅಗತ್ಯವಾದ ಪ್ರೊಟೀನ್ ಮತ್ತು ಬಯೋಟಿನ್ ಸಮೃದ್ಧವಾಗಿದೆ. ಮೊಟ್ಟೆಯ ಸೇವನೆಯು ಕೂದಲನ್ನು ಬಲಪಡಿಸಲು ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

freepik

ವಾಲ್‌ನಟ್ಸ್: ವಿಟಮಿನ್ ಇ ಸಮೃದ್ಧವಾಗಿರುವ ವಾಲ್‌ನಟ್‌ ಕೂದಲಿನ ಕಿರುಚೀಲಗಳನ್ನು ಬಲಪಡಿಸಲು ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ 

freepik

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ