ಮೆಂತ್ಯವನ್ನು ಹೀಗೆ ಬಳಸಿ ನೋಡಿ, ಮತ್ತೆಂದೂ ಕೂದಲು ಉದುರುವುದಿಲ್ಲ

By Reshma
Oct 01, 2024

Hindustan Times
Kannada

ಕೂದಲಿನ ಆರೋಗ್ಯಕ್ಕೆ ಮೆಂತ್ಯೆ ಬಹಳ ಉತ್ತಮ. ಮೆಂತ್ಯವನ್ನು ರುಬ್ಬಿ ಹಚ್ಚುವುದು, ಮೆಂತ್ಯೆಕಾಳು ನೆನೆಸಿದ ಎಣ್ಣೆ ಹಚ್ಚುವುದರಿಂದ ಕೇಶರಾಶಿಗೆ ಸಾಕಷ್ಟು ಪ್ರಯೋಜನಗಳಿವೆ

ಮೆಂತ್ಯವು ಕೂದಲಿಗೆ ವರದಾನ ಎಂದರೂ ತಪ್ಪಲ್ಲ. ಇದರ ಬಳಕೆಯಿಂದ ಕೂದಲು ಉದ್ದವಾಗಿ, ದಟ್ಟವಾಗಿ, ಕಪ್ಪಾಗಿ ಬೆಳೆಯುತ್ತದೆ. ಆದರೆ ಇದನ್ನು ಸರಿಯಾದ ವಿಧಾನದಲ್ಲಿ ಬಳಸಬೇಕು 

ಕೂದಲು ಉದುರದಂತೆ, ತಲೆಹೊಟ್ಟು ನಿವಾರಿಸಿ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಮೆಂತ್ಯವನ್ನು ಕೂದಲಿಗೆ ಹೀಗೆ ಹಚ್ಚಿ 

ಕೂದಲು ತೆಳ್ಳಗಿದ್ದರೆ ಮೆಂತ್ಯವನ್ನು ಹಚ್ಚುವುದರಿಂದ ದಪ್ಪವಾಗಿ, ದಟ್ಟವಾಗಿ ಬೆಳೆಯುತ್ತದೆ 

ನೀವು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದರೆ ಮೆಂತ್ಯೆ ಹಚ್ಚುವುದರಿಂದ ಪರಿಹಾರ ಕಂಡುಕೊಳ್ಳಬಹುದು 

ನಿರಂತರವಾಗಿ ಮೆಂತ್ಯೆ ಬಳಸುವುದರಿಂದ ತಲೆಹೊಟ್ಟಿನ ಸಮಸ್ಯೆಯೂ ನಿವಾರಣೆಯಾಗುತ್ತದೆ 

ಕೂದಲಿಗೆ ಮೆಂತ್ಯೆ ಬಳಸುವ ಸರಿಯಾದ ಕ್ರಮ ಇಲ್ಲಿದೆ. ರಾತ್ರಿಯಿಡೀ ಮೆಂತ್ಯವನ್ನು ನೆನೆಸಿಡಿ, ಬೆಳಿಗ್ಗೆ ಅದನ್ನು ರುಬ್ಬಿ ಪೇಸ್ಟ್ ತಯಾರಿಸಿ 

ಇದನ್ನು ನೇರವಾಗಿ ಕೂದಲಿಗೆ ಹಚ್ಚಬಹುದು. ಅರ್ಧ ಗಂಟೆ ಬಿಟ್ಟು ತಲೆಸ್ನಾನ ಮಾಡಿ 

ತೆಂಗಿನೆಣ್ಣೆಗೆ ಮೆಂತ್ಯಕಾಳು ಸೇರಿಸಿ ಅದನ್ನು ಬಿಸಿ ಮಾಡಿ. ಎಣ್ಣೆ ತಣ್ಣದಾಗ ಮೇಲೆ ಕೂದಲಿಗೆ ಹಚ್ಚಿ ಮಸಾಜ್ ಮಾಡಿ 

ಗಮನಿಸಿ: ನಿಮ್ಮ ಕೂದಲಿಗೆ ಯಾವುದೇ ರೀತಿಯ ಅಲರ್ಜಿ ಇದ್ದರೆ ಇದನ್ನು ಹಚ್ಚದೇ ಇರುವುದು ಉತ್ತಮ. ಪ್ಯಾಚ್ ಟೆಸ್ಟ್ ಮಾಡಿದ ಮೇಲಷ್ಟೇ ಮೆಂತ್ಯವನ್ನು ಬಳಸಬೇಕು 

ಟೀ ಸ್ಟ್ರೈನರ್ ಕೊಳಕಾಗಿದ್ಯಾ: ಸ್ವಚ್ಛಗೊಳಿಸುವುದು ತುಂಬಾನೇ ಸಿಂಪಲ್

freepik