ಎಚ್‌ಡಿಎಫ್‌ಸಿ ಪರಿವರ್ತನ್‌ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ, ಡಿ 31 ಕೊನೆಯ ದಿನಾಂಕ

By Praveen Chandra B
Dec 17, 2024

Hindustan Times
Kannada

ಎಚ್‌ಡಿಎಫ್‌ಸಿ ಬ್ಯಾಂಕ್‌ ಪರಿವರ್ತನ್‌ ಇಸಿಎಸ್‌ಎಸ್‌ ಪ್ರೋಗ್ರಾಂನಡಿ ಆರ್ಥಿಕವಾಗಿ ದುರ್ಬಲರಾಗಿರುವ ವಿದ್ಯಾರ್ಥಿಗಳಿಗೆ ಈ ನೆರವು ನೀಡಲಾಗುತ್ತದೆ.

1-12 ತರಗತಿಯ ವಿದ್ಯಾರ್ಥಿಗಳು, ಡಿಪ್ಲೊಮಾ, ಐಟಿಐ ಮುಂತಾದ ತಾಂತ್ರಿಕ ಶಿಕ್ಷಣ ಪಡೆಯುವವರು, ಪದವಿ ಮತ್ತು ಸ್ನಾತಕೋತ್ತರ ಪದವೀಧರರು ಸೇರಿದಂತೆ ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಈ ಸ್ಕಾಲರ್‌ಷಿಪ್‌ ಪ್ರಯೋಜನ ಪಡೆದುಕೊಳ್ಳಬಹುದು.

ಡಿಪ್ಲೊಮಾ ಸ್ಕಾಲರ್‌ಷಿಪ್‌ಗೆ ಅರ್ಜಿ ಸಲ್ಲಿಸುವುದಾದರೆ, 12 ತರಗತಿಯ ಬಳಿಕ ಡಿಪ್ಲೊಮಾಕ್ಕೆ ಸೇರಿರುವವರಿಗೆ ಮಾತ್ರ ಅವಕಾಶವಿದೆ.

ಬಿಕಾಂ, ಬಿಎಸ್ಸಿ, ಬಿಎ, ಬಿಸಿಎ ಮುಂತಾದ ಪದವಿ ಕೋರ್ಸ್‌ಗಳು, ಬಿಟೆಕ್‌, ಎಂಬಿಬಿಎಸ್‌, ಎಲ್‌ಎಲ್‌ಬಿ, ಬಿಆರ್ಕ್‌, ನರ್ಸಿಂಗ್‌ ಮುಂತಾದ ವೃತ್ತಿಪರ ಕೋರ್ಸ್‌ಗಳನ್ನು ಕಲಿಯುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಎಂಕಾಂ, ಎಂಎ ಮುಂತಾದ ಜನರಲ್‌ ಕೋರ್ಸ್‌, ಎಂಟೆಕ್‌, ಎಂಬಿಎ ಮುಂತಾದ ವೃತ್ತಿಪರ ಸ್ನಾತಕೋತ್ತರ ಕೋರ್ಸ್‌ ಕಲಿಯುವವರು ಅರ್ಜಿ ಸಲ್ಲಿಸಬಹುದು

1-6ನೇ ತರಗತಿಯವರಿಗೆ 15,000 ರೂಪಾಯಿ, 7-12, ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳಿಗೆ 18,000 ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಸಾಮಾನ್ಯ ಪದವಿ ಕೋರ್ಸ್‌- 30 ಸಾವಿರ ರೂಪಾಯಿ, ವೃತ್ತಿಪರ ಪದವಿ ಕೋರ್ಸ್‌ 50,000 ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಸಾಮಾನ್ಯ ಸ್ನಾತಕೋತ್ತರ ಪದವಿ: 35 ಸಾವಿರ ರೂಪಾಯಿ, ವೃತ್ತಿಪರ ಸ್ನಾತಕೋತ್ತರ ಕೋರ್ಸ್‌: 75 ಸಾವಿರ ರೂಪಾಯಿ ವಿದ್ಯಾರ್ಥಿ ವೇತನ ದೊರಕುತ್ತದೆ.

ಎಚ್‌ಡಿಎಫ್‌ಸಿ ಪರಿವರ್ತನ್‌ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಲಿಂಕ್‌: hdfcbankecss.com. ಅರ್ಜಿ ಸಲ್ಲಿಸಲು ಡಿಸೆಂಬರ್‌ 31, 2024 ಕೊನೆಯ ದಿನವಾಗಿದೆ.

2025ರಲ್ಲಿ ಮೇಷ ರಾಶಿಯವರಿಗೆ ಯಾವ ತಿಂಗಳು ಮಂಗಳಕರ?