ತುಳಸಿ ಎಲೆಗಳನ್ನು ತಿನ್ನುವುದರಿಂದ ದೊರಕುವ ಆರೋಗ್ಯ ಪ್ರಯೋಜನಗಳು

By Praveen Chandra B
Dec 18, 2024

Hindustan Times
Kannada

ಭಾರತದಲ್ಲಿ ತುಳಸಿ ಗಿಡ ಪೂಜನೀಯ. ತುಳಸಿ ಎಲೆಯು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ.

ಖಾಲಿಹೊಟ್ಟೆಯಲ್ಲಿ ಪ್ರತಿನಿತ್ಯ ತುಳಸಿ ಎಲೆಗಳನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ದೊರಕುತ್ತವೆ. 

ತುಳಸಿ ಎಲೆಗಳನ್ನು  ಇಮ್ಯುನಿಟಿ ಬೂಸ್ಟರ್‌ ಎಂದು ಕರೆಯಲಾುತ್ತದೆ. ತುಳಸಿ ಎಲೆಗಳಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿರುತ್ತೆ. ಹಾನಿಕಾರಕ ಬ್ಯಾಕ್ಟೀರಿಯಾ, ಅನಾರೋಗ್ಯಕ್ಕೆ ಕಾರಣವಾಗುವ ವೈರಸ್‌ಗಳ ವಿರುದ್ಧ ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ತುಳಸಿ ಎಲೆಗಳು ಹೊಂದಿವೆ.

ತುಳಸಿ ಎಲೆಗಳಿಗೆ ಗಾಯವನ್ನು ಗುಣಪಡಿಸುವ ಶಕ್ತಿಯಿದೆ. ತುಳಸಿ ಎಲೆಗಳಲ್ಲಿರುವ ಆಂಟಿಫಂಗಲ್‌, ಆಂಟಿ ಬ್ಯಾಕ್ಟೀರಿಯ ಗುಣಲಕ್ಷಣಗಳು ಗಾಯವನ್ನು ಗುಣಪಡಿಸಲು ಮತ್ತು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ತುಳಸಿ ಎಲೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕ. ತುಳಸಿಯು ಮೇದೋಜ್ಜೀರಕ ಗ್ರಂಥಿಯ ಕೋಶಗಳ ಕಾರ್ಯನಿರ್ವಹಣೆಯನ್ನು ಉತ್ತಮಪಡಿಸುತ್ತದೆ. 

ದೇಹದ ಉಸಿರಾಟ ಪ್ರಕ್ರಿಯೆಯನ್ನು ತುಳಸಿ ಉತ್ತಮಗೊಳಿಸುತ್ತದೆ. ತುಳಸಿ ಎಲೆಗಳು ಅಸ್ತಮಾ ಮತ್ತು ಬ್ರಾಂಕೈಟಿಸ್‌ನಂತನ ಸಮಸ್ಯೆಗಳನ್ನು ಕಡಿಮೆ ಮಾಡಲು ನೆರವು ನೀಡುತ್ತದೆ. ತುಳಸಿ ಹಬೆಯನ್ನು ತೆಗೆದುಕೊಳ್ಳುವುದರಿಂದ ಉಸಿರಾಟ ಉತ್ತಮವಾಗುತ್ತದೆ.

ತುಳಸಿಯು ಒತ್ತಡ ನಿವಾರಕ. ತುಳಸಿ ಎಲೆಗಳಲ್ಲಿ ಅಡಾಪ್ಟೋಜೆನ್‌ಗಳು ಸಮೃದ್ಧವಾಗಿವೆ. ಇದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತುಳಸಿಯು ಚರ್ಮದ ಆರೋಗ್ಯವನ್ನು ಉತ್ತಮಪಡಿಸುತ್ತದೆ. ಮೊಡವೆ ಮತ್ತು ಕಲೆಗಳನ್ನು ನಿವಾರಿಸುತ್ತದೆ.

ಈ ಚಳಿಗಾಲದಲ್ಲಿ ಸಾಕಷ್ಟು ಜನರು ಶೀತ, ನೆಗಡಿಯಿಂದ ಬಳಲುತ್ತಿರಬಹುದು. ತುಳಸಿ ಎಲೆಯು ನೆಗಡಿ ನಿವಾರಕ. ಇದು ಸೂಕ್ಷ್ಮಾಣು ನಿರೋಧಕ ಗುಣಲಕ್ಷಣ ಹೊಂದಿದೆ. ಕೆಮ್ಮು ಮತ್ತು ನೆಗಡಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ತುಳಸಿ ಎಲೆಯ ಸೇವನೆಯಿಂದ ತೂಕ ಇಳಿಕೆ ಮಾಡಿಕೊಳ್ಳಬಹುದು. ಕ್ಯಾಲೋರಿ ಬರ್ನ್‌ ಮಾಡಲು ಸಹಾಯಕ.

ಡಿಸ್‌ಕ್ಲೈಮರ್‌: ಇದು ಲಭ್ಯವಿರುವ ಮಾಹಿತಿ ಆಧರಿಸಿದ ಬರಹವಾಗಿದೆ. ಅನುಸರಿಸುವ ಮೊದಲು ಆಯುರ್ವೇದ ತಜ್ಞರ ಸಲಹೆ ಪಡೆಯಿರಿ.

ಭೂಮಿಯತ್ತ 84 ಅಡಿ ಗಾತ್ರದ ರಾಕ್ಷಸ ಕ್ಷುದ್ರಗ್ರಹ, ನಾಸಾದಿಂದ ಎಚ್ಚರಿಕೆ