ಆರೋಗ್ಯ, ಫಿಟ್ನೆಸ್‍ಗಾಗಿ ಅರಶಿನ ಹಾಲಿನ ಪ್ರಯೋಜನಗಳು ಏನೇನು, ಇಲ್ಲಿದೆ ಮಾಹಿತಿ

freepik

By Priyanka Gowda
Sep 21, 2024

Hindustan Times
Kannada

ಗೋಲ್ಡನ್ ಮಿಲ್ಕ್ ಎಂದೂ ಕರೆಯಲಾಗುವ ಅರಶಿನ ಹಾಲನ್ನು ಶತಮಾನಗಳಿಂದ ಆಯುರ್ವೇದದಲ್ಲಿ ಬಳಸಲಾಗುತ್ತಿದೆ. ಇದನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ದೊರಕುತ್ತವೆ.

freepik

ಹಾಲಿನೊಂದಿಗೆ ಅರಶಿನ ಬೆರೆಸಿ ಇದನ್ನು ತಯಾರಿಸಲಾಗುತ್ತದೆ. ಬೇಕಿದ್ದರೆ ಶುಂಠಿ, ಕರಿಮೆಣಸು, ದಾಲ್ಚಿನ್ನಿಯನ್ನು ಸೇರಿಸಬಹುದು. ಪೋಷಕಾಂಶಗಳಿಂದ ಸಮೃದ್ಧವಾಗಿದೆ ಈ ಅರಶಿನ ಹಾಲು.

freepik

ಅರಶಿನ ಹಾಲನ್ನು ನಿಯಮಿತವಾಗಿ ಸೇವಿಸುವುದರಿಂದ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿ. ಹಾಗೂ ಇದು ಉತ್ಕರ್ಷಣಾ ನಿರೋಧಕಗಳಿಂದ ಸಮೃದ್ಧವಾಗಿದೆ.

freepik

ಅರಶಿನದಲ್ಲಿರುವ ಕರ್ಕ್ಯುಮಿನ್ ಅಂಶ ಉರಿಯೂತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಸಹಕಾರಿ.

freepik

ಸಂಧಿವಾತದಿಂದ ಬಳಲುತ್ತಿರುವವರು ಅರಶಿನ ಹಾಲನ್ನು ಸೇವಿಸುವುದರಿಂದ ಪರಿಹಾರವನ್ನು ಪಡೆಯಬಹುದು.

freepik

ಸಂಧಿವಾತದಿಂದ ಬಳಲುತ್ತಿರುವವರು ಅರಶಿನ ಹಾಲನ್ನು ಸೇವಿಸುವುದರಿಂದ ಪರಿಹಾರವನ್ನು ಪಡೆಯಬಹುದು.

freepik

ಅರಶಿನವು ಪಿತ್ತರಸದ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಹೊಟ್ಟೆ ಉಬ್ಬರ, ಅಜೀರ್ಣ ಇತ್ಯಾದಿ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಸಹಕಾರಿ.

freepik

ಅರಶಿನ ಹಾಲನ್ನು ಸೇವಿಸುವುದರಿಂದ ನಿದ್ರಾಹೀನತೆ ಸಮಸ್ಯೆಯೂ ನಿಧಾನವಾಗಿ ಕಡಿಮೆಯಾಗಲು ಸಹಕಾರಿ. ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಸಹಕಾರಿ.

freepik

ಅರಶಿನ ಹಾಲಿನ ನಿಯಮಿತ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಗೂ ದೇಹವನ್ನು ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

freepik

ಮಲಗುವ ಮುನ್ನ 1 ಕಪ್ ಅರಶಿನ ಹಾಲು ಕುಡಿಯುವುದು ಉತ್ತಮ. ಅದರಲ್ಲೂ ಶೀತ, ಜ್ವರದಿಂದ ಬಳಲುತ್ತಿದ್ದರೆ ಈ ಹಾಲನ್ನು ಕುಡಿಯಬಹುದು. ಮಕ್ಕಳಿಗೂ ಕೊಡಬಹುದು.

freepik

ಇದು ಸ್ವತಂತ್ರ ರಾಡಿಕಲ್‍ಗಳ ವಿರುದ್ಧ ಹೋರಾಡಿ ತ್ವಚೆಯನ್ನು ಆರೋಗ್ಯಕರವಾಗಿಸುತ್ತದೆ ಅಲ್ಲದೆ ಕಾಂತಿಯುತವಾಗಿ ಹೊಳೆಯುವಂತೆ ಮಾಡುವಲ್ಲಿ ಸಹಕಾರಿ.  

freepik

ಮಾರ್ಟಿನ್ ಪದದ ರಿಯಲ್ ಅರ್ಥವಿದು