ಒಣಕೆಮ್ಮು, ಕಫ ಸಾಮಾನ್ಯ ಅಂತ  ನಿರ್ಲಕ್ಷ್ಯ ಮಾಡ್ಬೇಡಿ, ಗಂಟಲು ಕ್ಯಾನ್ಸರ್‌ನ ಈ ಲಕ್ಷಣಗಳ ಬಗ್ಗೆ ತಿಳಿದಿರಲಿ 

By Reshma
Oct 02, 2024

Hindustan Times
Kannada

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿದೆ. ಇದನ್ನು ಆರಂಭದಲ್ಲೇ ಪತ್ತೆ ಮಾಡುವುದು ಅವಶ್ಯವಾದರೂ ಇದನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಪಡೆಯುವಲ್ಲಿ ಎಡವುತ್ತಿದ್ದೇವೆ

ಆದರೆ ಕ್ಯಾನ್ಸರ್‌ ರೋಗಲಕ್ಷಣಗಳ ಬಗ್ಗೆ ನಮಗೆ ತಿಳಿದಿದ್ದರೆ ಇದನ್ನ ಸುಲಭವಾಗಿ ಪತ್ತೆ ಹಚ್ಚಬಹುದು ಹಾಗೂ ಆರಂಭದಲ್ಲೇ ಚಿಕಿತ್ಸೆ ಪಡೆಯುವ ಮೂಲಕ ಪ್ರಾಣಾಪಾಯದಿಂದ ಪಾರಾಗಬಹುದು 

ಇತ್ತೀಚಿನ ದಿನಗಳಲ್ಲಿ ಗಂಟಲು ಕ್ಯಾನ್ಸರ್‌ನ ಪ್ರಮಾಣದಲ್ಲೂ ಏರಿಕೆಯಾಗುತ್ತಿದೆ. ಆದರೆ ಕೆಲವರು ಗಂಟಲು ಕ್ಯಾನ್ಸರ್‌ನ ಈ ಲಕ್ಷಣಗಳನ್ನು ಶೀತ, ಕೆಮ್ಮು ಎಂದು ನಿರ್ಲಕ್ಷ್ಯಿಸುತ್ತಾರೆ 

ಮಕ್ಕಳಿಂದ ದೊಡ್ಡವರವರೆಗೆ ಗಂಟಲು ಕ್ಯಾನ್ಸರ್ ಯಾರಿಗೂ ಕೂಡ ಬರಬಹುದು. ಆದರೆ ಸಮಯಕ್ಕೆ ಸರಿಯಾಗಿ ಅದರ ಲಕ್ಷಣಗಳನ್ನು ಅರ್ಥ ಮಾಡಿಕೊಂಡು ವೈದ್ಯರ ಬಳಿ ತೋರಿಸುವುದು ಬಹಳ ಮುಖ್ಯ

ಮೊದಲ ಲಕ್ಷಣ ನಿರಂತರವಾಗಿ ನೋಯುತ್ತಿರುವ ಗಂಟಲು. ಕೆಮ್ಮು ಇಲ್ಲದೇ ಸುಮ್ಮನೆ ಗಂಟಲು ನೋವು ಬಂದರೆ ಅದು ಕ್ಯಾನ್ಸರ್‌ನ ಲಕ್ಷಣವಾಗಿರಬಹುದು

ಗಂಟಲು ಕ್ಯಾನ್ಸರ್‌ನಿಂದಾಗಿ ಆಹಾರ ನುಂಗಲು ಕಷ್ಟವಾಗುತ್ತದೆ. ಆಹಾರವು ಗಂಟಲಿಗೆ ಸಿಕ್ಕಿಕೊಳ್ಳಲು ಆರಂಭಿಸುತ್ತದೆ 

ಗಂಟಲಿನ ಬಳಿ ಗೆಡ್ಡೆ ಉಂಟಾಗುವುದು ಗಂಟಲು ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ನಿಮ್ಮ ಗಂಟಲಿನಲ್ಲಿ ಯಾವುದೇ ಗೆಡ್ಡೆ, ಊತ ಕಂಡರೆ ತಡ ಮಾಡದೇ ವೈದ್ಯರಿಗೆ ತೋರಿಸಿ 

ಗಂಟಲಿನ ಕ್ಯಾನ್ಸರ್ ಇದ್ದರೆ ಧ್ವನಿಯಲ್ಲಿ ಬದಲಾಗುತ್ತದೆ. ಕೆಲವೊಮ್ಮೆ ಧ್ವನಿ ಕರ್ಕಶವಾಗಬಹುದು 

ಗಂಟಲಿನ ಕ್ಯಾನ್ಸರ್ ಇದ್ದರೆ ಇದ್ದಕ್ಕಿದ್ದಂತೆ ದೇಹ ತೂಕ ಕಡಿಮೆಯಾಗಲು ಆರಂಭವಾಗುತ್ತದೆ. ಹಸಿವು ಕಡಿಮೆಯಾಗುತ್ತದೆ. ಆಹಾರ ಗಂಟಲಿಗೆ ಸಿಕ್ಕಿಕೊಳ್ಳುವುದರಿಂದ ತಿನ್ನಲು ಸಾಧ್ಯವಾಗುವುದಿಲ್ಲ 

ಕೆಲವೊಮ್ಮೆ ಕೆಮ್ಮುವಾಗ ರಕ್ತ ಕಾಣಿಸಬಹುದು. ಕ್ಯಾನ್ಸರ್ ಆದಾಗ ಗಂಟಲಿನಲ್ಲಿ ಗಾಯವಾಗಲು ಆರಂಭವಾಗುತ್ತದೆ. ಇದರಿಂದ ಕೆಮ್ಮಿದಾಗ ರಕ್ತ ಬರುವ ಸಾಧ್ಯತೆ ಇದೆ 

ಗಂಟಲಿನಲ್ಲಿ ಪದೇ ಪದೇ ಲೋಳೆ, ಕಫ ಬರುವುದು ಗಂಟಲು ಕ್ಯಾನ್ಸರ್‌ನ ಲಕ್ಷಣವಾಗಿರಬಹುದು 

ತ್ವಚೆಯ ಹೊಳಪಿಗೆ ಬಾಳೆಹಣ್ಣು-ಕಾಫಿ ಫೇಸ್‍ಮಾಸ್ಕ್

freepik