ಊಟದ ನಂತರ ಬೆಲ್ಲ ತಿಂದರೆ ಇಷ್ಟೆಲ್ಲ ಅನುಕೂಲ; ಮುಟ್ಟಿನ ನೋವಿಗೂ ಮುಕ್ತಿ

pixel

By Jayaraj
May 02, 2024

Hindustan Times
Kannada

ಸಕ್ಕರೆಗೆ ಹೋಲಿಸಿದರೆ ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು ಎಂಬುದು ತಿಳಿದಿರುವ ವಿಚಾರ. ಇದೇ ಬೆಲ್ಲವನ್ನು ನಿತ್ಯ ಆಹಾರ ಸೇವನೆ ಬಳಿಕ ತಿಂದರೆ ಮತ್ತಷ್ಟು ಅನುಕೂಲ.

freepik

ಊಟದ ನಂತರದ ನಿತ್ಯ ಬೆಲ್ಲ ತಿನ್ನುವುದರಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ. ರೋಗನಿರೋಧಕ ಶಕ್ತಿ ಸುಧಾರಿಸುವುದರೊಂದಿಗೆ ದೇಹವು ಆರೋಗ್ಯಕರವಾಗಿರಲು ಬೆಲ್ಲ ನೆರವಾಗುತ್ತದೆ.

freepik

ಜೊತೆಗೆ ಕೀಲು ನೋವನ್ನು ನಿವಾರಿಸುವುದು ಸೇರಿದಂತೆ, ಬೆಲ್ಲ ಸೇವನೆಯಿಂದ ಲೆಕ್ಕವಿಲ್ಲದಷ್ಟು ಆರೋಗ್ಯ ಪ್ರಯೋಜನಗಳಿವೆ.

freepik

ಊಟದ ಬಳಿಕ ಬೆಲ್ಲ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ಮಲಬದ್ಧತೆ ತಡೆಯುತ್ತದೆ. ಇದರೊಂದಿಗೆ ಕರುಳಿನ ಆರೋಗ್ಯ ಸುಧಾರಣೆಯಾಗುತ್ತದೆ.

freepik

ನಿತ್ಯ ಬೆಲ್ಲ ಸೇವನೆಯಿಂದ ದೇಹಕ್ಕೆ ಕಬ್ಬಿಣಾಂಶ ಸಿಗುತ್ತದೆ. ಬೆಲ್ಲದಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಆರೋಗ್ಯಕರ ಮಟ್ಟದಲ್ಲಿರುವಂತೆ ಕಾಪಾಡುತ್ತದೆ.

freepik

ಬೆಲ್ಲ ಸೇವನೆಯಿಂದ ಮಹಿಳೆಯರಿಗೆ ವಿಶೇಷ ಅನುಕೂಲವಿದೆ. ಮುಟ್ಟಿನ ಸಮಯದಲ್ಲಿ ತಡೆಯಲಾಗದ ನೋವು ಅನುಭವಿಸುವ ನೀರೆಯರು ಕೊಂಚ ಮುಕ್ತಿ ಪಡೆಯಬಹುದು. ಹಾರ್ಮೋನ್‌ ಮಟ್ಟ ನಿಯಂತ್ರಿಸುವ ಮೂಲಕ ನಿಮ್ಮ ಮೂಡ್‌ ಬದಲಾಯಿಸುತ್ತದೆ

freepik

ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರತೆಗೆಯುವಲ್ಲಿ ಬೆಲ್ಲ ನೆರವಾಗುತ್ತದೆ.

freepik

ರಕ್ತ ಶುದ್ಧೀಕರಣಕ್ಕೆ ನೆರವಾಗುವ ಮೂಲಕ, ನಿಮ್ಮ ತ್ವಚೆಯು ನೈಸರ್ಕಿಕವಾಗಿ ಕಾಂತಿಯುತವಾಗುವಂತೆ ಮಾಡುತ್ತದೆ.

freepik

ಈ ಮಾಹಿತಿಯನ್ನು ಡಯಟೀಶಿಯನ್‌ ವಿಧಿ ಚಾವ್ಲಾ ನೀಡಿರುತ್ತಾರೆ. (ಹೀಗಾಗಿ ವ್ಯಕ್ತಿಯಿಂದ ವ್ಯಕ್ತಿಗಳಿಗೆ ಬೆಲ್ಲದ ಪ್ರಯೋಜನಗಳಲ್ಲಿ ವ್ಯತ್ಯಾಸಗಳಾಗಬಹುದು.)

freepik

ಚಳಿ ಜೋರಾಗಿದೆ, ಸ್ವೆಟರ್ ಖರೀದಿಸುವ ಪ್ಲಾನ್ ಇದ್ದರೆ ಈ ವಿಚಾರ ಗಮನದಲ್ಲಿರಲಿ