ಪ್ರತಿದಿನ ಪ್ರೊಟೀನ್‌ ಸಮೃದ್ಧ ಆಹಾರ ಸೇವಿಸಬೇಕು ಅನ್ನೋದಕ್ಕೆ ಕಾರಣಗಳಿವು 

By Reshma
Aug 08, 2024

Hindustan Times
Kannada

ದೇಹಕ್ಕೆ ಅತ್ಯಗತ್ಯವಾದ ಪೋಷಕಾಂಶಗಳಲ್ಲಿ ಪ್ರೊಟೀನ್‌ ಕೂಡ ಒಂದು. ಪ್ರೊಟೀನ್‌ ಕೊರತೆಯಿಂದ ದೇಹದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. 

ಪ್ರೊಟೀನ್‌ ಕೊರತೆಯಿಂದ ದೇಹ ಒಣಗಿದಂತೆ ಕಾಣುತ್ತದೆ. ಇದು ಚರ್ಮ ಹಾಗೂ ಕೂದಲಿನ ಬೆಳವಣಿಗೆಗೂ ಅಡ್ಡಿಪಡಿಸುತ್ತದೆ. 

ಪ್ರೊಟೀನ್‌ ಕೊರತೆಯು ಸ್ನಾಯುಗಳ ಬೆಳವಣಿಗೆಗೆ ಅಡ್ಡಿಪಡಿಸುತ್ತದೆ ಮತ್ತು ಇದರಿಂದ ಮೂಳೆಗಳು ದುರ್ಬಲಗೊಳ್ಳಬಹುದು. 

ದೇಹ ಸದೃಢವಾಗಲು ಮೂಳೆ, ಮಾಂಸಖಂಡಗಳು ಬಲಗೊಳ್ಳಲು ಹಾಗೂ ದೇಹ ಆಕರ್ಷಕವಾಗಿರಲು ಪ್ರತಿದಿನ ಪ್ರೊಟೀನ್‌ ಸೇವಿಸಬೇಕು. 

ಪ್ರೊಟೀನ್‌ ಸಮೃದ್ಧ ಆಹಾರ ಸೇವನೆಯಿಂದ ಚರ್ಮವು ಹೊಳೆಯುತ್ತದೆ. ಇದರಿಂದ ಕೂದಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. 

ಆರೋಗ್ಯ ತಜ್ಞರ ಪ್ರಕಾರ ಪ್ರತಿ ಕ್ರಿಲೊಗ್ರಾಂ ದೇಹ ತೂಕಕ್ಕೆ 0.8 ಗ್ರಾಂ ಪ್ರೊಟೀನ್‌ ಅಗತ್ಯವಿದೆ. 

ಉದಾಹರಣೆಗೆ ನಿಮ್ಮ ದೇಹ ತೂಕ 75 ಕೆಜಿ ಇದ್ದರೆ ನೀವು 60 ಗ್ರಾಂ ಪ್ರೊಟೀನ್‌ ಸೇವಿಸಬೇಕು ಎಂದರ್ಥ. 

ಪ್ರೊಟೀನ್‌ ಎಂದರೆ ನಮ್ಮ ದಿನನಿತ್ಯದ ಆಹಾರದಲ್ಲಿ ಹಾಲು, ಮೊಸರು, ಚೀಸ್‌, ಪನೀರ್‌ ಇವುಗಳನ್ನು ಸೇರಿಸಬಹುದು. 

ಮೀನು ಹಾಗೂ ಚಿಕನ್‌ಗೆ ಹೋಲಿಸಿದರೆ ಮೊಟ್ಟೆಯಲ್ಲಿ ಪೊಟೀನ್‌ ಪ್ರಮಾಣ ಕಡಿಮೆ. ಹಾಗಾಗಿ ಇವುಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. 

ಈ ಸುದ್ದಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ. 

ಜನಿವಾರದಲ್ಲಿ ಎಷ್ಟು ಎಳೆಯಿರುತ್ತದೆ?