ಮ್ಯಾಂಗೋ ಪ್ರಿಯರೇ ಗಮನಿಸಿ, ಮಾವಿನ ಸಿಪ್ಪೆಯಲ್ಲಿದೆ ಆರೋಗ್ಯದ ರಹಸ್ಯ

By Reshma
Apr 23, 2024

Hindustan Times
Kannada

ಸಾಮಾನ್ಯವಾಗಿ ಮಾವಿನಹಣ್ಣು ತಿಂದು ಸಿಪ್ಪೆಯನ್ನು ಎಸೆಯುತ್ತೇವೆ. ಆದರೆ ಮಾವಿನ ಸಿಪ್ಪೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ಎಂದು ಅಧ್ಯಯನಗಳು ಸಾಬೀತು ಪಡಿಸಿವೆ. 

ಮಾವಿನಹಣ್ಣಿನ ಸಿಪ್ಪೆಯು ಚರ್ಮದ ಆರೋಗ್ಯಕ್ಕೆ ಬಹಳ ಉತ್ತಮ, ಇದನ್ನು ಫೇಸ್‌ಮಾಸ್ಕ್‌ ರೀತಿಯೂ ಬಳಸಬಹುದು. 

ಮಧುಮೇಹ ವಿರೋಧಿ ಲಕ್ಷಣಗಳನ್ನು ಹೊಂದಿರುವ ಮಾವಿನಸಿಪ್ಪೆಯ ಚಹಾ ಹಾಗೂ ಡಿಟಾಕ್ಸ್‌ ವಾಟರ್‌ ಕುಡಿಯುವುದರಿಂದ ದೇಹದಲ್ಲಿ ಸಕ್ಕರೆಯ ಮಟ್ಟ ಸುಧಾರಿಸುತ್ತದೆ. ಮಾವಿನ ಸಿಪ್ಪೆಯಲ್ಲಿರುವ ಮ್ಯಾಂಗಿಫೆರಿನ್‌ ಅಂಶವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 

ಮಾವಿನಹಣ್ಣಿನ ಸಿಪ್ಪೆಯಲ್ಲಿರುವ ಮ್ಯಾಂಜಿಫೆರಿನ್‌, ಬೆಂಜೋಫೆನೋಸ್‌ ಅಂಶವು ನೈಸರ್ಗಿಕ ಕೀಟನಾಶಕವಾಗಿದೆ. 

ಮಾವಿನಸಿಪ್ಪೆಯು ಕ್ಯಾನ್ಸರ್‌ ವಿರೋಧಿ ಲಕ್ಷಣಗಳನ್ನು ಹೊಂದಿದೆ ಎಂದು ಹಲವು ಅಧ್ಯಯನಗಳು ಸಾಬೀತುಪಡಿಸಿವೆ. ಮ್ಯಾಂಗಿಫೆರಿನ್‌ ಅಂಶವು ಕ್ಯಾನ್ಸರ್‌ ಕೋಶಗಳ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ. 

ಮಾವಿನಸಿಪ್ಪೆಯನ್ನು ಹೀಗೆ ಬಳಸಿ 

ಇದನ್ನು ಪುಡಿ ಮಾಡಿ ತಿನ್ನಬಹುದು. ಚಟ್ನಿ ಅಥವಾ ಸ್ಮೂಥಿಗಳಿಗೆ ಸೇರಿಸಬಹುದು. ಇದನ್ನು ಟೀ ಅಥವಾ ಡಿಟಾಕ್ಸ್‌ ವಾಟರ್‌ಗೆ ಸೇರಿಸಬಹುದು. 

ಹಾಗಲಕಾಯಿ ಅಡುಗೆ ಹೀಗೆ ಮಾಡಿದ್ರೆ ಎಲ್ರಿಗೂ ಇಷ್ಟವಾಗುತ್ತೆ