ಬೇಸಿಗೆಯಲ್ಲಿ ಕಬ್ಬಿನ ರಸ ಸೇವನೆಯಿಂದಾಗುವ 8 ಪ್ರಯೋಜನಗಳಿವು

By Reshma
May 04, 2024

Hindustan Times
Kannada

ಕಬ್ಬಿನ ರಸದಲ್ಲಿ ಸುಕ್ರೋಸ್‌ ಅಂಶ ಅಧಿಕವಾಗಿರುತ್ತದೆ. ಇದು ದೇಹವನ್ನು ಹೈಡ್ರೇಟ್‌ ಮಾಡುವ ಜೊತೆಗೆ ಶಕ್ತಿ ಒದಗಿಸುತ್ತದೆ. ಆಯಾಸವನ್ನು ಕಡಿಮೆ ಮಾಡುತ್ತದೆ. ದೇಹಕ್ಕೆ ಕಾರ್ಬೋಹೈಡ್ರೇಟ್‌, ಪ್ರೊಟೀನ್‌ ಹಾಗೂ ಖನಿಜಗಳನ್ನು ಒದಗಿಸುತ್ತದೆ. 

ಆಯುರ್ವೇದದ ಪ್ರಕಾರ ಕಬ್ಬಿನ ರಸ ಜಾಂಡೀಸ್‌ ರೋಗಗಳಿಗೆ ಉತ್ತಮ. ಆದರೆ ಯಕೃತ್ತಿನ ಸಮಸ್ಯೆ ಇರುವವರು ಕಬ್ಬಿನ ರಸ ಸೇವನೆಗೂ ಮೊದಲು ತಜ್ಞರನ್ನು ಸಂಪರ್ಕಿಸಬೇಕು. 

ಪೊಟ್ಯಾಶಿಯಂನಿಂದ ಸಮೃದ್ಧವಾಗಿರುವ ಕಬ್ಬಿನ ರಸವು ಹೊಟ್ಟೆಯ ಪಿಎಚ್‌ ಹಂತವನ್ನು ಸಮತೋಲನಗೊಳಿಸುವ ಮೂಲಕ ಜೀರ್ಣಕ್ರಿಯೆ ಹೆಚ್ಚಲು ಸಹಾಯ ಮಾಡುತ್ತದೆ. ಇದರಲ್ಲಿ ನಾರಿನಾಂಶವಿರುತ್ತದೆ. ಇದು ಮಲಬದ್ಧತೆಯನ್ನೂ ಸುಧಾರಿಸುತ್ತದೆ. 

ಕಬ್ಬಿನ ರಸದಲ್ಲಿ ಉತ್ಕರ್ಷಣ ನಿರೋಧಕಗಳಾದ ಫಿನಾಲಿಕ್‌ ಆಮ್ಲ ಮತ್ತು ಫ್ಲೇವನಾಯ್ಡ್‌ಗಳಿಂದ ಸಮೃದ್ಧವಾಗಿದೆ. ಇದು ಚರ್ಮದ ಕಾಂತಿಯನ್ನು ಹೆಚ್ಚಿಸುವ ಜೊತೆಗೆ, ವಯಸ್ಸಾದಂತೆ ಕಾಣುವ ಲಕ್ಷಣಗಳನ್ನು ನಿವಾರಿಸುತ್ತದೆ. ಚರ್ಮದ ಮೇಲೆ ಉಂಟಾಗುವ ಸುಕ್ಕು, ಸೂಕ್ಷ್ಮರೇಖೆಗಳನು ನಿವಾರಿಸುತ್ತದೆ. 

ಕಬ್ಬಿನ ರಸದಲ್ಲಿ ವಿಟಮಿನ್‌ ಸಿ, ಉತ್ಕರ್ಷಣ ನಿರೋಧಕಗಳು ಮತ್ತು ಫ್ಲೇವನಾಯ್ಡ್‌ಗಳ ಸಮೃದ್ಧ ಮೂಲವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕ್ಯಾನ್ಸರ್‌ ತಡೆಯಲು ಇದು ಉತ್ತಮ. ಜೀರ್ಣಕ್ರಿಯೆ ಮತ್ತು ಯಕೃತ್ತಿನ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ. 

ಗರ್ಭಿಣಿ ಮಹಿಳೆಯರಿಗೂ ಶುಗರ್‌ ಕೇನ್‌ ಜ್ಯೂಸ್‌ ಉತ್ತಮ. ಇದು ಫೋಲಿಕ್‌ ಆಮ್ಲ, ವಿಟಮಿನ್‌ ಬಿ ಕಾಂಪ್ಲೆಕ್ಸ್‌, ಉತ್ಕರ್ಷಣ ನಿರೋಧಕಗಳು ಹಾಗೂ ಕ್ಸಾಲಿಯಂನಂತಹ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆದರೆ ಗರ್ಭಿಣಿಯರು ಕಬ್ಬಿನ ರಸ ಕುಡಿಯುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ. 

ಜ್ವರ ಬಂದಾಗ ದೈಹಿಕವಾಗಿ ದೌರ್ಬಲ್ಯ ಹಾಗೂ ನೋವು ಕಾಡುತ್ತದೆ. ಕಬ್ಬಿನ ರಸವು ನೀರು ದೇಹದಲ್ಲಿ ನೀರು ಹಾಗೂ ಗ್ಲೊಕೋಸ್‌ ಅಂಶ ಏರಿಕೆಯಾಗಲು ಕಾರಣವಾಗುತ್ತದೆ. ಇದು ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. 

ಕಬ್ಬಿನ ರಸವನ್ನು ಎಳನೀರು ಹಾಗೂ ನಿಂಬೆರಸದೊಂದಿಗೆ ಸೇರಿಸಿ ಕುಡಿದಾಗ ದೇಹದಲ್ಲಿನ ವಿಷಾಂಶ ಹಾಗೂ ಸೋಂಕುಗಳು ನಿವಾರಣೆಯಾಗುತ್ತದೆ. ಇದು ಮೂತ್ರದ ಸೋಂಕು ಹಾಗೂ ಮೂತ್ರಪಿಂಡದ ಕಲ್ಲುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. 

ಐಪಿಎಲ್‌ ಫೈನಲ್‌ಗೆ ತಂಡ ಮುನ್ನಡೆಸಿದ ವಿದೇಶಿ ನಾಯಕರು