ಹೃದಯದ ಸಮಸ್ಯೆ ಮಾತ್ರವಲ್ಲ, ಎದೆಯ ಎಡಭಾಗದಲ್ಲಿ ನೋವು ಕಾಣಿಸಲು ಈ ಅಂಶಗಳೂ ಕಾರಣ

By Reshma
Aug 12, 2024

Hindustan Times
Kannada

ಇತ್ತೀಚೆಗೆ ಬದಲಾಗುತ್ತಿರುವ ಜೀವನಶೈಲಿ ಮತ್ತು ಅಸಮರ್ಪಕ ಆಹಾರ ಪದ್ಧತಿಯ ಕಾರಣದಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ನಾವು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. 

ಎದೆಯ ಎಡಭಾಗದಲ್ಲಿ ಇದ್ದಕ್ಕಿದ್ದಂತೆ ನೋವು ಕಾಣಿಸಿಕೊಳ್ಳುತ್ತದೆ. ಈ ಹಠಾತ್‌ ನೋವಿನಿಂದ ಹಲವರು ಚಿಂತೆಗೆ ಒಳಗಾಗುತ್ತಾರೆ. ಕೆಲವರು ಇದನ್ನು ಹೃದಯಾಘಾತದ ಸಂಕೇತ ಅಂತಲೂ ಅಂದುಕೊಳ್ಳುತ್ತಾರೆ. 

ಆರೋಗ್ಯ ತಜ್ಞರ ಪ್ರಕಾರ ಎದೆನೋವು ಯಾವಾಗಲೂ ಹೃದ್ರೋಗದ ಲಕ್ಷಣವಲ್ಲ. ಕೆಲವೊಮ್ಮೆ ಎದೆಯ ಎಡಭಾಗದಲ್ಲಿ ನೋವು ಕಾಣಿಸಿಕೊಳ್ಳಲು ಈ ಅಂಶಗಳೂ ಕಾರಣವಾಗುತ್ತವೆ.

ಹೃದಯಾಘಾತದ ಕಾರಣದಿಂದ ಮಾತ್ರ ನೋವು ಕಾಣಿಸುವುದಿಲ್ಲ. ಈ ಕಾರಣಗಳಿಂದಲೂ ಎದೆಯ ಎಡಭಾಗದಲ್ಲಿ ನೋವು ಕಾಣಿಸುತ್ತದೆ. 

ಹಲವು ಬಾರಿ ಭಾರವಾದ ವಸ್ತುಗಳನ್ನು ಎತ್ತುವುದರಿಂದ ಅಥವಾ ವ್ಯಾಯಮಗಳನ್ನು ತಪ್ಪಾಗಿ ಮಾಡುವುದರಿಂದ ಕೂಡ ಎದೆಯ ಸ್ನಾಯುಗಳು ಆಯಾಸಗೊಳ್ಳುತ್ತವೆ. ಇದರಿಂದಲೂ ಎದೆನೋವು ಕಾಣಿಸಬಹುದು. 

ಹೆಚ್ಚು ಮಸಾಲೆಯುಕ್ತ ಮತ್ತು ಕರಿದ ಆಹಾರವನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಆಮ್ಲ ಉತ್ಪತ್ತಿಯಾಗುತ್ತದೆ. ಇದು ಎದೆನೋವಿಗೆ ಕಾರಣವಾಗುತ್ತದೆ. 

ಹಲವು ಬಾರಿ ಒತ್ತಡ ಹಾಗೂ ಆತಂಕದಿಂದಾಗಿ ದೇಹದಲ್ಲಿ ಹಾರ್ಮೋನ್‌ ಅಸಮತೋಲನ ಉಂಟಾಗುತ್ತದೆ. ಇದರಿಂದಾಗಿ ಹೃದಯ ಬಡಿತ ಹೆಚ್ಚಾಗುತ್ತದೆ, ಇದು ಕೂಡ ಎದೆನೋವಿಗೆ ಕಾರಣವಾಗಬಹುದು. 

ಗ್ಯಾಸ್ಟ್ರಿಕ್‌ ಕಾರಣದಿಂದ ಎದೆನೋವು ಹಾಗೂ ಹೊಟ್ಟೆಯುರಿ ಸಮಸ್ಯೆಗಳು ಎದುರಾಗಬಹುದು. ಆದರೆ ಹಲವರು ಇದನ್ನು ಹೃದಯಾಘಾತ ಅಥವಾ ಎದೆನೋವಿನ ಲಕ್ಷಣ ಎಂದುಕೊಳ್ಳುತ್ತಾರೆ. 

ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಾದ ನ್ಯುಮೋನಿಯಾ ಅಥವಾ ಪಲ್ಮನರಿ ಎಂಬಾಲಿಸಮ್‌ ಸಹ ಎದೆ ನೋವು ಉಂಟಾಗಲು ಕಾರಣವಾಗಬಹುದು. 

ಎದೆನೋವು ಕಾಣಿಸಿದರೆ ಮೊದಲು ವಿಶ್ರಾಂತಿ ತೆಗೆದುಕೊಳ್ಳಿ ಹಾಗೂ ದೀರ್ಘವಾದ ಉಸಿರನ್ನು ತೆಗೆದುಕೊಳ್ಳಿ. ಸ್ವಲ್ಪ ಸಮಯದೊಳಗೆ ಪರಿಹಾರ ಸಿಗದಿದ್ದರೆ ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ. 

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?