ದೇಹದಲ್ಲಿ ಕಬ್ಬಿಣಾಂಶ ಕೊರತೆ ನೀಗಿಸುವ ದೇಸಿ ಆಹಾರಗಳಿವು, ನಿಶಕ್ತಿಗೆ ಇದೇ ಪರಿಹಾರ
By Reshma Sep 11, 2024
Hindustan Times Kannada
ನೀವು ಸರಿಯಾದ ಕ್ರಮದಲ್ಲಿ ಆಹಾರ ಸೇವಿಸಿ, ವಿಶ್ರಾಂತಿ ಪಡೆದು, ಸಾಕಷ್ಟು ನೀರು ಕುಡಿದ ಮೇಲೂ ನಿಶಕ್ತಿ ಕಾಡುತ್ತಿದ್ದರೆ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಇರಬಹುದು.
ಕಬ್ಬಿಣಾಂಶದ ಕೊರತೆ ಇದ್ದರೆ ಸ್ವಲ್ಪ ದೂರ ನಡೆದರೂ ಉಸಿರಾಟದ ತೊಂದರೆ ಕಾಣಿಸುತ್ತದೆ. ತಲೆನೋವು ಬರುತ್ತದೆ ಹಾಗೂ ಕೆಲವೊಮ್ಮೆ ಹೃದಯ ಬಡಿತವೂ ಹೆಚ್ಚಾಗುತ್ತದೆ
ಆರೋಗ್ಯ ಕಾಪಾಡಿಕೊಳ್ಳಲು ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಕಬ್ಬಿಣಾಂಶವನ್ನು ಹೊಂದಿರುವುದು ಮುಖ್ಯವಾಗುತ್ತದೆ.
ನೀವು ಕಬ್ಬಿಣಾಂಶದ ಕೊರತೆಯಿಂದ ಬಳಲುತ್ತಿದ್ದೀರಿ ಎಂದು ನಿಮಗೆ ಅನ್ನಿಸಿದರೆ ನೀವು ಈ ದೇಸಿ ಆಹಾರಗಳ ಸೇವನೆ ಆದ್ಯತೆ ನೀಡಬೇಕು. ಹುರಿಗಡಲೆ ಬೆಲ್ಲ ಜೊತೆಯಾಗಿ ತಿನ್ನುವುದು ಕಬ್ಬಿಣಾಂಶ ಕೊರತೆಗೆ ಉತ್ತಮ
ಬಾರ್ಲಿ ದೇಹದಲ್ಲಿ ಕಬ್ಬಿಣಾಂಶ ಕೊರತೆ ನೀಗಿಸಲು ಸಹಾಯ ಮಾಡುವ ದೇಸಿ ಆಹಾರವಾಗಿದೆ. ಇದರಿಂದ ಜ್ಯೂಸ್ ಅಥವಾ ಗಂಜಿ ಮಾಡಿ ಸೇವಿಸಬಹುದು
ಬ್ರೀಟ್ರೂಟ್‌ನಲ್ಲಿ ಕಬ್ಬಿಣಾಂಶ ಹೇರಳವಾಗಿರುತ್ತದೆ. ನೆಲ್ಲಿಕಾಯಿ ಕೂಡ ಕಬ್ಬಿಣಾಂಶದ ಕೊರತೆ ನೀಗಿಸಿಲು ಉತ್ತಮ.
ಕಬ್ಬಿಣಾಂಶದ ಕೊರತೆ ನೀಗಿಸಲು ದಾಳಿಂಬೆ ಹಣ್ಣು ಕೂಡ ಬಹಳ ಮುಖ್ಯ, ದಾಳಿಂಬೆ ಹಣ್ಣನ್ನು ಪ್ರತಿನಿತ್ಯ ಸೇವಿಸುವುದರಿಂದ ರಕ್ತಹೀನತೆ, ಕಬ್ಬಿಣಾಂಶ ಕೊರತೆಯನ್ನು ನೀಗಿಸಬಹುದು