ಹೊಟ್ಟೆಯುಬ್ಬರ ಸಮಸ್ಯೆಯಿಂದ ತತ್ತರಿಸಿದ್ದೀರಾ, ತಕ್ಷಣ ಪರಿಹಾರ ಸಿಗಲು ಇಲ್ಲಿದೆ ಮನೆಮದ್ದು

By Reshma
Sep 25, 2024

Hindustan Times
Kannada

ಮಳೆಗಾಲ ಮುಗಿಯುತ್ತಾ ಬಂದಿದೆ, ಇನ್ನೇನು ಚಳಿಗಾಲ ಆರಂಭವಾಗಲಿದ್ದು ತಣ್ಣಗೆ ಚಳಿ ಶುರುವಾಗಿದೆ. ಈ ಹವಾಮಾನ ಬದಲಾವಣೆಯು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದು ಸುಳ್ಳಲ್ಲ.

ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಹವಾಮಾನ ಬದಲಾದ ಕೂಡಲೇ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಶೀತ, ಜ್ವರದಂತಹ ಸಮಸ್ಯೆಗಳ ಜೊತೆಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನೂ ಎದುರಿಸುತ್ತಾರೆ

ಹವಾಮಾನ ಬದಲಾವಣೆಯಲ್ಲಿ ಎದುರಾಗುವ ಪ್ರಮುಖ ಸಮಸ್ಯೆಗಳಲ್ಲಿ ಹೊಟ್ಟೆಯುಬ್ಬರವೂ ಒಂದು. ಇದು ಒಂದು ರೀತಿಯ ಕಿರಿಕಿರಿ ಉಂಟು ಮಾಡುವುದು ಸುಳ್ಳಲ್ಲ 

ಹೊಟ್ಟೆಯುಬ್ಬರಕ್ಕೆ ತಕ್ಷಣ ಪರಿಹಾರ ನೀಡಲು ಈ ವಿಧಾನಗಳನ್ನು ಅನುಸರಿಬೇಕು 

ಹೊಟ್ಟೆಯುಬ್ಬರದ ಸಮಸ್ಯೆಗಳನ್ನು ಹೋಗಲಾಡಿಸಲು ಪುದಿನಾ ಚಹಾ ಕುಡಿಯಬಹುದು. ಇದು ಹೊಟ್ಟೆಯ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಹಾಗೂ ಹೊಟ್ಟೆಯುಬ್ಬರದ ಸಮಸ್ಯೆಗೆ ಪರಿಹಾರ ನೀಡುತ್ತದೆ 

ತಾಜಾ ಶುಂಠಿ ಚೂರುಗಳನ್ನು 10 ನಿಮಿಷಗಳ ಕಾಲ ನೀರಿನಲ್ಲಿ ಚೆನ್ನಾಗಿ ಕುದಿಸಿ ಇದನ್ನು ಚಹಾದಂತೆ ಕುಡಿಯಿರಿ. ಇದು ಹೊಟ್ಟೆಯುಬ್ಬರ ಸಮಸ್ಯೆಯಿಂದ ತಕ್ಷಣಕ್ಕೆ ಪರಿಹಾರ ನೀಡುತ್ತದೆ 

ಜೀರ್ಣಕ್ರಿಯೆಯನ್ನು ಸುಧಾರಿಸಲು ಸೋಂಪು ತುಂಬಾ ಸಹಾಯಕ. ಹೊಟ್ಟೆಯುಬ್ಬರ ಸಮಸ್ಯೆ ಇರುವವರು ಸೋಂ‍ಪು ತಿನ್ನಬೇಕು 

ನಿಂಬೆಹಣ್ಣು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೊಟ್ಟೆಯುಬ್ಬರ ಕಡಿಮೆಯಾಗಲು ಅರ್ಧ ನಿಂಬೆಹಣ್ಣಿನ ರಸವನ್ನು ಉಗುರು ಬೆಚ್ಚಗಿನ ನೀರಿಗೆ ಸೇರಿಸಿ ಕುಡಿಯಿರಿ 

ಅಜ್ವಾನ ಕೂಡ ಜೀರ್ಣಕ್ರಿಯೆಗೆ ಉತ್ತಮ. ಒಂದು ಚಮಚ ಅಜ್ವಾನವನ್ನು ಒಂದು ಲೋಟ ನೀರಿಗೆ ಹಾಕಿ ಕುದಿಸಿ ಆ ನೀರು ಅರ್ಧದಷ್ಟು ಇಂಗಿದಾಗ ತಣಿಸಿ ಕುಡಿಯಿರಿ 

ಈ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸುವುದು ಉತ್ತಮ 

ಮಾರ್ಟಿನ್ ಪದದ ರಿಯಲ್ ಅರ್ಥವಿದು