ರಾತ್ರಿ ನಿದ್ದೆ ಬರ್ತಿಲ್ಲ ಅಂದ್ರೆ ಇಂದಿನಿಂದಲೇ ಈ ಅಭ್ಯಾಸ ರೂಢಿಸಿಕೊಳ್ಳಿ  

By Reshma
Sep 09, 2024

Hindustan Times
Kannada

ಇತ್ತೀಚಿನ ಬ್ಯುಸಿ ಲೈಫ್‌ನಲ್ಲಿ ನಿದ್ದೆ ಬಾರದೇ ಒದ್ದಾಡುವವರ ಸಂಖ್ಯೆ ಹೆಚ್ಚಾಗಿದೆ. ಹಲವರನ್ನು ನಿದ್ರಾಹೀನತೆ ಕಾಡುತ್ತಿದೆ. ಇದರಿಂದ ಇಲ್ಲದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. 

ಇಂದು ನಾವು ನಿಮಗೆ ರಾತ್ರಿ ಚೆನ್ನಾಗಿ ನಿದ್ದೆ ಬರುವಂತೆ ಮಾಡಲು ಪರಿಹಾರಗಳನ್ನು ತಿಳಿಸುತ್ತೇವೆ. ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ಚೆನ್ನಾಗಿ ನಿದ್ದೆ ಮಾಡಬಹುದು 

ರಾತ್ರಿ ಚೆನ್ನಾಗಿ ನಿದ್ದೆ ಬರಬೇಕು ಎಂದರೆ ಹಗಲಿನ ಹೊತ್ತು ಮಲಗುವುದನ್ನು ತಪ್ಪಿಸಿ. ಹಗಲಿನಲ್ಲಿ ಅರ್ಧ ಗಂಟೆಗಿಂತ ಹೆಚ್ಚು ಮಲಗಿದರೂ ರಾತ್ರಿ ನಿದ್ದೆಗೆ ತೊಂದರೆ ಎದುರಾಗುತ್ತದೆ 

ದಿನನಿತ್ಯದ ವ್ಯಾಯಾಮ, ಯೋಗ, ಧ್ಯಾನ, ಮಾರ್ನಿಂಗ್‌ ವಾಕ್ ಇಂತಹ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದರಿಂದ ದೇಹ ಚೆನ್ನಾಗಿ ದಣಿಯುತ್ತದೆ. ಇದರಿಂದ ನಿದ್ದೆಯು ಚೆನ್ನಾಗಿ ಬರುತ್ತದೆ

ನೀವು ಉತ್ತಮ ನಿದ್ದೆ ಬಯಸಿದರೆ ರಾತ್ರಿ ಮಲಗಲು 2 ಗಂಟೆಗೂ ಮುನ್ನ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಂತಹ ಗ್ಯಾಜೆಟ್‌ಗಳನ್ನು ಬದಿಗಿರಿಸಿ. ಇದರ ಬದಲು ಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಿ

ರಾತ್ರಿ ಚೆನ್ನಾಗಿ ನಿದ್ದೆ ಬರಬೇಕು ಅಂದ್ರೆ ಮಲಗುವ ಮೊದಲು ಕೊಬ್ಬಿನಾಂಶ ಇರುವ, ಮಸಾಲೆಯುಕ್ತ ಹಾಗೂ ಕರಿದ ಆಹಾರಗಳ ಸೇವನೆಗೆ ಕಡಿವಾಣ ಹಾಕಿ

ರಾತ್ರಿ ಮಲಗುವ ಮುನ್ನ ಧ್ಯಾನ ಮಾಡುವುದು ಕೂಡ ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಆಳವಾದ ನಿದ್ದೆಗೆ ಸಹಾಯ ಮಾಡುತ್ತದೆ 

ಚೆನ್ನಾಗಿ ನಿದ್ದೆ ಬರಬೇಕು ಅಂದ್ರೆ ರಾತ್ರಿ ಮಲಗಲು 2 ಗಂಟೆಗೂ ಮುನ್ನ ಊಟ ಮಾಡಬೇಕು 

ರಾತ್ರಿ ಮಲಗುವ ಮುನ್ನ ಚಹಾ, ಕಾಫಿ ಕುಡಿಯುವ ಅಭ್ಯಾಸ ಇದ್ರೆ ಇಂದೇ ಬಿಟ್ಟುಬಿಡಿ. ಇದು ನಿದ್ದೆಗೆ ಅಡ್ಡಿಪಡಿಸುತ್ತದೆ 

ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನ ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ

ವೇಟ್ಟೈಯನ್‌ ಚಿತ್ರಕ್ಕಾಗಿ ಬಚ್ಚನ್‌ಗಿಂತ ರಜನಿಗೆ 17 ಪಟ್ಟು ಹೆಚ್ಚು ಸಂಭಾವನೆ!