ಡ್ರ್ಯಾಗನ್ ಹಣ್ಣು ತಿನ್ನುವುದರಿಂದ ದೇಹಕ್ಕೆ ಸಿಗುವ 6 ಅದ್ಭುತ ಪ್ರಯೋಜನಗಳಿವು
By Reshma
Dec 19, 2024
Hindustan Times
Kannada
ಡ್ರ್ಯಾಗನ್ ಹಣ್ಣನ್ನು ಪಿಟಾಯಾ ಎಂದೂ ಕರೆಯುತ್ತಾರೆ. ಇದು ಉಷ್ಣವಲಯದ ಹಣ್ಣು. ಅದು ವಿಶಿಷ್ಟ ನೋಟ ಹಾಗೂ ರುಚಿಯಿಂದ ಪ್ರಸಿದ್ಧಿ ಪಡೆದಿದೆ
ಇದು ಪೌಷ್ಟಿಕಾಂಶ ಸಮೃದ್ಧ ಹಣ್ಣು. ಇದರಲ್ಲಿ ವಿಟಮನ್ ಸಿ, ನಾರಿನಾಂಶ ಹಾಗೂ ಆ್ಯಂಟಿ ಆಕ್ಸಿಡೆಂಟ್ ಅಂಶಗಳು ಹೇರಳವಾಗಿದೆ. ಇದು ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸಲು ಸಹಕಾರಿ
ಇದರಲ್ಲಿ ನಾರಿನಾಂಶ ಹೆಚ್ಚಿರುತ್ತದೆ. ಇದು ಜೀರ್ಣಾಂಗ ವ್ಯವಸ್ಥೆ ಸುಧಾರಿಸಲು ಉತ್ತಮ. ಇದರ ಸೇವನೆಯಿಂದ ಮಲಬದ್ಧತೆ ನಿವಾರಣೆಯಾಗುತ್ತದೆ
ಈ ಹಣ್ಣು ಹೃದಯದ ಆರೋಗ್ಯಕ್ಕೂ ಉತ್ತಮ. ರಕ್ತದೊತ್ತಡ ನಿಯಂತ್ರಿಸಿ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
ಡ್ರ್ಯಾಗನ್ ಪ್ರೂಟ್‌ನಲ್ಲಿ ಕ್ಯಾಲೊರಿ ಕಡಿಮೆ ಇದೆ. ಆದರೆ ಪೋಷಕಾಂಶ ಸಮೃದ್ಧವಾಗಿದೆ. ತೂಕ ಇಳಿಕೆಗೂ ಇದು ಸಹಕಾರಿ
ಡ್ರ್ಯಾಗನ್ ಹಣ್ಣು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಸ್ಥಿರವಾಗಿರುತ್ತದೆ. ಮಧುಮೇಹಿಗಳು ಈ ಹಣ್ಣನ್ನು ನಿಯಮಿತ ಪ್ರಮಾಣದಲ್ಲಿ ತಿನ್ನಬಹುದು
ಇದು ಉರಿಯೂತ ನಿವಾರಕ ಗುಣಗಳನ್ನ ಹೊಂದಿದೆ. ಇದು ಊತ, ತುರಿಕೆಯಂತಹ ಸಮಸ್ಯೆಗೆ ಪರಿಹಾರ ನೀಡುತ್ತದೆ
ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ನಿಖರ ಮಾಹಿತಿಗಾಗಿ ತಜ್ಞರಿಂದ ಸಲಹೆ ಪಡೆಯಿರಿ
ಉಪೇಂದ್ರ ನಿರ್ದೇಶನದ 8 ಸಿನಿಮಾಗಳ ಕಾನ್ಸೆಪ್ಟ್‌ಗಳೇ ಡಿಫರೆಂಟ್ ಗುರೂ!
ಮುಂದಿನ ಸ್ಟೋರಿ ಕ್ಲಿಕ್ ಮಾಡಿ