ಮಧುಮೇಹಿಗಳು ಸೇವಿಸಲೇಬಾರದಂತಹ ಕೆಲವು ದೈನಂದಿನ ಆಹಾರಗಳಿವು
By Reshma
Oct 12, 2024
Hindustan Times
Kannada
ಇತ್ತೀಚಿನ ದಿನಗಳಲ್ಲಿ ಮಧುಮೇಹದ ಸಮಸ್ಯೆ ಹಲವರನ್ನು ಕಾಡುತ್ತಿದೆ. ಸರಿಯಾದ ಆಹಾರಕ್ರಮ ಪಾಲಿಸುವ ಮೂಲಕ ಇದನ್ನು ನಿಯಂತ್ರಿಸಲು ಸಾಧ್ಯವಿದೆ
ಆದರೆ ಮಧುಮೇಹಿಗಳು ಆಹಾರದ ವಿಚಾರದಲ್ಲಿ ಕೊಂಚ ಎಡವಿದ್ರೂ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಏರಿಕೆಯಾಗಿ ಇನ್ನಷ್ಟು ಸಮಸ್ಯೆಯಾಗಬಹುದು
ನೀವು ಮಧುಮೇಹದ ಸಮಸ್ಯೆಯಿಂದ ಬಳಲುತ್ತಿದ್ದರೆ ತಿನ್ನಲೇಬಾರದಂತಹ ಕೆಲವು ಪದಾರ್ಥಗಳಿವೆ. ಅಂತಹ ಪದಾರ್ಥಗಳು ಬಹಳ ವೇಗವಾಗಿ ಸಕ್ಕರೆಯ ಮಟ್ಟವನ್ನು ಏರಿಕೆಯಾಗುವಂತೆ ಮಾಡುತ್ತವೆ
ಐಸ್‌ಕ್ರೀಮ್ ಎಲ್ಲರಿಗೂ ಇಷ್ಟ. ಹಾಗಂತ ಮಧುಮೇಹ ಇರುವವರು ಐಸ್‌ಕ್ರೀಮ್ ತಿನ್ನಬಾರದು. ಇದರಲ್ಲಿ ಸಕ್ಕರೆಯ ಅಂಶ ಹೆಚ್ಚಿದ್ದು ಮಧುಮೇಹಿಗಳಿಗೆ ಅಪಾಯ ಉಂಟು ಮಾಡಬಹುದು
ಆಲೂಗೆಡ್ಡೆ ಕೂಡ ಮಧುಮೇಹಿಗಳಿಗೆ ಒಳ್ಳೆಯದಲ್ಲ. ಅದರಲ್ಲೂ ಸಿಹಿಯಂಶ ಹೆಚ್ಚಿರುತ್ತದೆ
ಚಿಪ್ಸ್, ಪಾಪಡ್‌ನಂತಹ ಕರಿದ ಹಾಗೂ ಎಣ್ಣೆಯಂಶ ಇರುವ ಆಹಾರ ಸೇವಿಸುವುದರಿಂದ ದೂರವಿರಿ
ಮೈದಾಹಿಟ್ಟಿನ ಪದಾರ್ಥಗಳು ಆರೋಗ್ಯಕ್ಕೆ ಹಾನಿ ಮಾಡಬಹುದು, ಇವುಗಳಿಂದ ದೂರವಿರುವುದು ಉತ್ತಮ
ಮಧುಮೇಹಿಗಳು ತಾಜಾಹಣ್ಣಿನ ರಸ ಕುಡಿಯಬಹುದು. ಆದರೆ ಪ್ಯಾಕೆಟ್ ಡ್ರಿಂಕ್‌ಗಳಿಂದ ದೂರವಿದ್ದಷ್ಟೂ ಉತ್ತಮ
ಕುಕ್ಕರ್‌ನಲ್ಲಿ ಬೇಯಿಸಿದ ಅನ್ನವು ಮಧುಮೇಹಿಗಳಿಗೆ ಒಳ್ಳೆಯದಲ್ಲ
ಈ ಸಲಹೆಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ