ಕೆಸುವಿನ ಎಲೆ ಸೇವನೆಯಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನ
By Reshma
Nov 23, 2024
Hindustan Times
Kannada
ಕೆಸುವಿನ ಎಲೆಯನ್ನು ಎಲ್ಲಾ ಭಾಗದಲ್ಲೂ ಬಳಸುವುದಿಲ್ಲ. ಆದರೆ ಇದರಿಂದ ರುಚಿಕರ ಖಾದ್ಯಗಳನ್ನು ತಯಾರಿಸಬಹುದು
ಇದರಲ್ಲಿ ವಿಟಮಿನ್ ಎ ಬಿ ಸಿ, ಫೋಲೆಟ್ ಹಾಗೂ ಕ್ಯಾಲ್ಸಿಯಂ ಅಂಶಗಳಿವೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಕೂಡ ಸಹಕಾರಿ
ಕೆಸುವಿನ ಎಲೆ ಕೀಲು ನೋವು ಹಾಗೂ ಊತವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುತ್ತದೆ
ಕೆಸುವಿನ ಎಲೆ ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ
ಕೆಸುವಿನ ಎಲೆಯಲ್ಲಿ ವಿಟಮಿನ್ ಎ ಇದ್ದು, ಇದು ಕಣ್ಣಿನ ಆರೋಗ್ಯಕ್ಕೆ ಉತ್ತಮ. ಇದು ದೃಷ್ಟಿ ಸುಧಾರಿಸುತ್ತದೆ
ಈ ಎಲೆಯಲ್ಲಿ ಕಡಿಮೆ ಕ್ಯಾಲೊರಿ ಹಾಗೂ ಸಾಕಷ್ಟು ನಾರಿನಾಂಶಗಳಿರುತ್ತವೆ. ಇದು ತೂಕ ನಿಯಂತ್ರಿಸಲು ಕೂಡ ಸಹಕಾರಿ
ಕೆಸುವಿನ ಎಲೆ ಮಧುಮೇಹ ನಿಯಂತ್ರಿಸಲು ಕೂಡ ಸಹಾಯ ಮಾಡುತ್ತದೆ. ಮಧುಮೇಹಿಗಳಿಗೆ ಇದು ಉತ್ತಮ
ಕೆಸುವಿನ ಎಲೆಯಲ್ಲಿ ಕಬ್ಬಿಣಾಂಶ ಹೇರಳವಾಗಿದ್ದು ಇದು ರಕ್ತಹೀನತೆಯನ್ನು ಹೋಗಲಾಡಿಸುತ್ತದೆ
ಕೆಸುವಿನ ಎಲೆಯಿಂದ ಚಟ್ನಿ, ಪಲ್ಯ, ಪತ್ರೊಡೆ ಮಾಡಿ ತಿನ್ನಬಹುದು
ಗಮನಿಸಿ: ಈ ಸುದ್ದಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದ ಮಾಹಿತಿಯನ್ನು ಒಳಗೊಂಡಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ
ಯುವರಾಜ್ ಸಿಂಗ್ ಹುಟ್ಟುಹಬ್ಬ; ಕ್ರಿಕೆಟ್ ದಾಖಲೆ-ನಿವ್ವಳ ಮೌಲ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ