ರಕ್ತ ಹೆಚ್ಚೋದಷ್ಟೇ ಅಲ್ಲ, ಪ್ರತಿದಿನ ದಾಳಿಂಬೆ ತಿನ್ನೋದ್ರಿಂದ ಇಷ್ಟೆಲ್ಲಾ ಪ್ರಯೋಜನವಿದೆ

By Reshma
Sep 04, 2024

Hindustan Times
Kannada

ದಾಳಿಂಬೆಯಲ್ಲಿ ಕ್ಯಾಲ್ಸಿಯಂ, ಪೊಟ್ಯಾಶಿಯಂ, ಸೋಡಿಯಂ. ಮೆಗ್ನಿಶಿಯಂ, ಕಬ್ಬಿಣ ಹಾಗೂ ಇತರ ಅಗತ್ಯ ಜೀವಸತ್ವಗಳಿರುತ್ತವೆ. ದಾಳಿಂಬೆಯಲ್ಲಿ ಪೋಷಕಾಂಶಗಳು ಹೇರಳವಾಗಿರುತ್ತವೆ. ಇದು ಸಾಕಷ್ಟು ಪ್ರಮಾಣದ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ 

ಕಬ್ಬಿಣಾಂಶ ಹೇರಳವಾಗಿರುವ ದಾಳಿಂಬೆ ತಿನ್ನುವುದರಿಂದ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚುತ್ತದೆ. ಹಾಗಾಗಿ ರಕ್ತವೃದ್ಧಿಗೆ ಹಲವರು ದಾಳಿಂಬೆ ಸೇವಿಸುತ್ತಾರೆ

ದಾಳಿಂಬೆ ತಿನ್ನುವುದರಿಂದ ರಕ್ತದ ಮಟ್ಟದಲ್ಲಿ ಏರಿಕೆಯಾಗುವುದು ಮಾತ್ರವಲ್ಲ. ಇದರಿಂದ ಆರೋಗ್ಯಕ್ಕೆ ಇನ್ನಿತರ ಹಲವು ಪ್ರಯೋಜನಗಳಿವೆ

ದಾಳಿಂಬೆಯಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳಿವೆ. ಇದು ಚರ್ಮಕ್ಕೆ ಪ್ರಯೋಜನಕಾರಿ. ಪ್ರತಿದಿನ ದಾಳಿಂಬೆ ತಿನ್ನುವುದರಿಂದ ತ್ವಚೆಯ ಕಾಂತಿ ಅರಳುತ್ತದೆ 

ದಾಳಿಂಬೆ ನಾರಿನಾಂಶದಿಂದ ಸಮೃದ್ಧವಾಗಿದೆ. ಇದು ಮಲಬದ್ಧತೆ, ಅಜೀರ್ಣ, ಗ್ಯಾಸ್ಟಿಕ್‌ನಂತರ ಜೀರ್ಣಕಾರಿ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ 

ದಾಳಿಂಬೆ ಸೇವನೆಯು ಕೊಲೆಸ್ಟ್ರಾಲ್‌ ಮತ್ತ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುತ್ತದೆ. ಇದು ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ 

ದಾಳಿಂಬೆ ಹಣ್ಣು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಅಗತ್ಯವಿರುವ ಅಂಶಗಳನ್ನು ಒಳಗೊಂಡಿದೆ. ಮಧುಮೇಹ ಇರುವವರು ವೈದ್ಯರ ಸಲಹೆ ಮೇರೆಗೆ ದಾಳಿಂಬೆ ತಿನ್ನಬಹುದು

ದಾಳಿಂಬೆಯಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಅಂಶವಿದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ. ಕೀಲು ನೋವಿನಿಂದ ಪರಿಹಾರ ಪಡೆಯಲು ಪ್ರತಿದಿನ ದಾಳಿಂಬೆ ಸೇವಿಸಬೇಕು

ದಾಳಿಂಬೆಯಲ್ಲಿರುವ ಪೋಷಕಾಂಶಗಳು ದೇಹವನ್ನು ಬಲಪಡಿಸುತ್ತದೆ. ನಿಮ್ಮ ದೇಹದಲ್ಲಿ ದೌರ್ಬಲ್ಯವಿದ್ದರೆ ಪ್ರತಿದಿನ ದಾಳಿಂಬೆ ಸೇವಿಸುವ ಅಭ್ಯಾಸ ಮಾಡಿ

ಈ ಸುದ್ದಿ ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ 

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ