ದಿನಕ್ಕೆಷ್ಟು ಸಲ ಬ್ಲ್ಯಾಕ್ ಟೀ ಕುಡೀತೀರಿ, ಇದಕ್ಕಿಂತ ಹೆಚ್ಚು ಹೆಚ್ಚು ಕುಡೀಬೇಡಿ
Pixabay
By Umesh Kumar S
Sep 17, 2024
Hindustan Times
Kannada
ಹಾಲು ಹಾಕಿದ ಚಹಾ ರುಚಿಕರ. ಆದರೆ ಅತಿಯಾಗಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಕರ. ಹೀಗಾಗಿ ಅನೇಕರಿಗೆ ಬ್ಲ್ಯಾಕ್ ಟೀ ಇಷ್ಟ.
Pixabay
ಆರೋಗ್ಯದ ದೃಷ್ಟಿಯಿಂದ ಹಾಲು ಹಾಕಿದ ಚಹಾಕ್ಕಿಂತ ಬ್ಲ್ಯಾಕ್ ಟೀ ಹೆಚ್ಚು ಆರೋಗ್ಯಕರ. ರುಚಿಕರವೂ ಹೌದು.
Pixabay
ಬ್ಲ್ಯಾಕ್ ಟೀ ಸೇವನೆಯು ತಾಜಾತನದ ಭಾವ ಆವರಿಸುವಂತೆ ಮಾಡುತ್ತದೆ. ಹಾಲು ಹಾಕಿದ ಚಹಾಕ್ಕಿಂತ ಹೆಚ್ಚು ಪರಿಣಾಮಕಾರಿ.
Pixabay
ಬ್ಲ್ಯಾಕ್ ಟೀ ಅಲ್ವ ಎಷ್ಟು ಕುಡಿದರೂ ನಡೆಯುತ್ತೆ ಅನ್ವೇಡಿ. ಇದಕ್ಕಿಂತ ಹೆಚ್ಚು ಸಲ ಟೀ ಕುಡಿದ್ರೆ ಆರೋಗ್ಯ ಕೆಡೋದು ಗ್ಯಾರೆಂಟಿ
Pixabay
ಬ್ಲ್ಯಾಕ್ ಟೀ ಕುಡಿಯುವುದರಿಂದ ಆಗುವ ಅನುಕೂಲ ಮತ್ತು ಅನಾನುಕೂಲಗಳ ವಿವರ ಹೀಗಿದೆ ನೋಡಿ
Pixabay
ಬ್ಲ್ಯಾಕ್ ಟೀ ಶರೀರದ ಜಲಮಟ್ಟವನ್ನು ಸುಧಾರಿಸುತ್ತದೆ. ಶಕ್ತಿಯನ್ನು ಹೆಚ್ಚಿಸುತ್ತದೆ. ಕೆಲಸದ ಮೇಲೆ ಗಮನಕೇಂದ್ರೀಕರಿಸಲು ನೆರವಾಗುತ್ತೆ.
Pixabay
ಬ್ಲ್ಯಾಕ್ ಟೀಯಲ್ಲಿರುವ ಫ್ಲೇವನಾಯ್ಡ್‌ಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ತೂಕ ನಷ್ಟಕ್ಕೂ ನೆರವಾಗುತ್ತೆ.
Pixabay
ಆರೋಗ್ಯವಂತ ವ್ಯಕ್ತಿ ದಿನಕ್ಕೆ 2 ರಿಂದ 3 ಕಪ್ ಬ್ಲ್ಯಾಕ್ ಟೀ ಕುಡಿಯಬಹುದು. ಅದಕ್ಕಿಂತ ಹೆಚ್ಚು ಕುಡಿದರೆ ಅರೋಗ್ಯಕ್ಕೆ ಕಷ್ಟ.
Pixabay
ಹೆಚ್ಚು ಬ್ಲ್ಯಾಕ್ ಟೀ ಕುಡಿಯುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ವಾಂತಿ, ತಲೆಸುತ್ತು ಕಾಡಬಹುದು.
Pixabay
ಅದೇ ರೀತಿ, ಹೆಚ್ಚು ಬ್ಲ್ಯಾಕ್ ಟೀ ಕುಡಿದರೆ,ವೇಗದ ಹೃದಯ ಬಡಿತ ಮತ್ತು ಅಧಿಕ ರಕ್ತದೊತ್ತಡ ಕಾಡಬಹುದು.
Pixabay
ರಕ್ತಹೀನತೆ, ಆತಂಕ, ಕಣ್ಣಿನ ಪೊರೆ ಮತ್ತು ಹೊಟ್ಟೆಯ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯು ಕಪ್ಪು ಚಹಾವನ್ನು ಕುಡಿಯಬಾರದು.
Pixabay
ಸಾಮಾನ್ಯ ಮಾಹಿತಿಯನ್ನು ಆಧರಿಸಿ ಈ ವಿವರ ನೀಡಲಾಗಿದೆ. ಯಾವುದೇ ನಿರ್ದಿಷ್ಟ ಮಾಹಿತಿಗಾಗಿ, ಆರೋಗ್ಯ ತಜ್ಞರಿಂದ ಸೂಕ್ತ ಸಲಹೆ ಪಡೆಯಿರಿ
Pixabay
ರತನ್ ಟಾಟಾ ಅವರ ಪ್ರಾಣಿ ಪ್ರೀತಿ; ಗಮನಸೆಳೆಯುತ್ತಿದೆ 6 ಹೃದ್ಯ ಅಂಶಗಳು
Instagram/@ratantata
ಮುಂದಿನ ಸ್ಟೋರಿ ಕ್ಲಿಕ್ ಮಾಡಿ