ಹಲ್ಲುಗಳ ಮೇಲಿರುವ ಹಳದಿ ಕಲೆಗಳನ್ನು ಹೋಗಲಾಡಿಸಲು ಇಲ್ಲಿದೆ ಮನೆಮದ್ದು
freepik
By Priyanka Gowda
Sep 10, 2024
Hindustan Times
Kannada
ಹಲ್ಲುಗಳಿಂದ ಹಳದಿ ಕಲೆಗಳನ್ನು ತೆಗೆದುಹಾಕಲು ಅಥವಾ ಕಡಿಮೆ ಮಾಡಲು ಈ ಮನೆಮದ್ದುಗಳನ್ನು ಪ್ರಯತ್ನಿಸಬಹುದು.
freepik
ಅಡುಗೆ ಸೋಡಾ ಮತ್ತು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಪೇಸ್ಟ್ ಮಾಡಿ, ಹಲ್ಲುಗಳಿಗೆ ಹಚ್ಚಿ. 1-2 ನಿಮಿಷಗಳ ಕಾಲ ನಿಧಾನವಾಗಿ ಬ್ರಷ್ ಮಾಡಿ, ತೊಳೆಯಿರಿ.
ಹಲ್ಲುಜ್ಜುವ ಬ್ರಷ್ ಅನ್ನು ಇದ್ದಿಲು ಪುಡಿಯಲ್ಲಿ ಅದ್ದಿ. 2 ನಿಮಿಷಗಳ ಕಾಲ ನಿಧಾನವಾಗಿ ಬ್ರಷ್ ಮಾಡಿ. ನಂತರ ಚೆನ್ನಾಗಿ ತೊಳೆಯಿರಿ.
freepik
ಒಂದು ಚಮಚ ಶುದ್ಧ ತೆಂಗಿನೆಣ್ಣೆಯನ್ನು ಹಲ್ಲುಗಳ ಸುತ್ತ ಹಚ್ಚಿ, 10-15 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಬಾಯಿಯನ್ನು ತೊಳೆಯಿರಿ.
freepik
ಸ್ಟ್ರಾಬೆರಿಗಳನ್ನು ಮ್ಯಾಶ್ ಮಾಡಿ, ಅದಕ್ಕೆ ಅಡುಗೆ ಸೋಡಾದೊಂದಿಗೆ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಹಲ್ಲುಗಳಿಗೆ ಹಚ್ಚಿ, 5 ನಿಮಿಷ ಹಾಗೇ ಬಿಟ್ಟು ತೊಳೆಯಿರಿ.
freepik
ಅಡುಗೆ ಸೋಡಾಗೆ ನಿಂಬೆ ರಸವನ್ನು ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಹಲ್ಲುಗಳಿಗೆ ಹಚ್ಚಿ, 1 ನಿಮಿಷ ಬಿಟ್ಟು ತೊಳೆಯಿರಿ.
freepik
ದಿನಕ್ಕೆ ಎರಡು ಬಾರಿಯಾದರೂ ಟೂತ್‌ಪೇಸ್ಟ್‌ನಿಂದ ಹಲ್ಲುಗಳನ್ನು ಬ್ರಷ್ ಮಾಡಿ. ಪ್ರತಿದಿನ ಫ್ಲೋಸ್ ಮಾಡಿ ಮತ್ತು ದುರ್ವಾಸನೆ ತಡೆಗಟ್ಟಲು ಮೌತ್‍ವಾಶ್ ಬಳಸಿ.
freepik
ಕಾಫಿ, ಟೀ, ರೆಡ್ ವೈನ್ ಮತ್ತು ಇತರ ಕಲೆಗಳನ್ನು ಉಂಟುಮಾಡುವ ಪಾನೀಯ ಅಥವಾ ಆಹಾರಗಳ ಸೇವನೆಯನ್ನು ಮಿತಿಗೊಳಿಸಿ. ಇವುಗಳನ್ನು ಸೇವಿಸಿದ ನಂತರ ನೀರಿನಿಂದ ನಿಮ್ಮ ಬಾಯಿಯನ್ನು ತೊಳೆಯಿರಿ.
freepik
ಬಾಯಿ, ಹಲ್ಲಿನ ನೈರ್ಮಲ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಕಲೆಗಳು ಹೆಚ್ಚಿದ್ದರೆ ದಂತವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
freepik
ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ