ಪೇಪರ್ ಕಪ್‌ನಲ್ಲಿ ಟೀ ಕುಡಿದರೆ ಆರೋಗ್ಯಕ್ಕೆ ಆಗುವ 5 ಹಾನಿಗಳಿವು

By Umesh Kumar S
Sep 09, 2024

Hindustan Times
Kannada

ಚಹಾ, ಕಾಫಿ ಇಷ್ಟ ಹೌದು. ಹೊರಗೆ ಹೋದಾಗ ನೀವು ಪೇಪರ್ ಕಪ್‌ನಲ್ಲಿ ಚಹಾ, ಕಾಫಿ ಕುಡೀತೀರಾ?

ಸಹಜ ಅಲ್ವ. ಪ್ಲಾಸ್ಟಿಕ್ ಕಪ್ ನಿಷೇಧದ ಬಳಿಕ ಪೇಪರ್ ಕಪ್ ಹೆಚ್ಚು ಬಳಕೆಗೆ ಬಂದಿದೆ. ಆದರೆ ತಿಳಿದಿರಿ- ಅದೂ ಅಪಾಯಕಾರಿ.

ರಸ್ತೆ ಬದಿ ಅಂಗಡಿಗಳಲ್ಲಿ ,  ರೆಸ್ಟೋರೆಂಟ್‌ಗಳಲ್ಲಿ ಪೇಪರ್ ಕಪ್‌ನಲ್ಲಿ ಚಹಾ ಸೇವಿಸಬೇಡಿ.

ಪೇಪರ್ ಕಪ್ ನಲ್ಲಿ ಟೀ ಕುಡಿಯುವುದರಿಂದ ಆಗುವ ದುಷ್ಪರಿಣಾಮಗಳಿವು

ಪೇಪರ್ ಕಪ್‌ ತಯಾರಿಸಲು ರಾಸಾಯನಿಕ ಬಳಸ್ತಾರೆ. ಅವು ಶರೀರದ ಮೇಲೆ ದುಷ್ಪರಿಣಾಮ ಬೀರುತ್ತವೆ.

ದೇಹದ ಹಾರ್ಮೋನ್‌ ಅಸಮತೋಲನಗೊಂಡು ಮಾನಸಿಕ ಆರೋಗ್ಯಕ್ಕೆ ಧಕ್ಕೆಯಾಗುತ್ತದೆ. 

ಹೊಟ್ಟೆ ಕೂಡ ಕೆಡುತ್ತೆ. ಹೊಟ್ಟೆ ಕೆಟ್ಟರೆ ಮನಸ್ಥಿತಿಯೂ ಸರಿ ಇರಲ್ಲ. ಹಾಗಾಗಿ ಪೇಪರ್‌ ಕಪ್‌ನಲ್ಲಿ ಚಹಾ ಕುಡಿಯುವುದು ನಿಲ್ಲಿಸಿ

ಪೇಪರ್ ಕಪ್‌ಗಳ  ಲೇಪನದಲ್ಲಿ ಕೆಮಿಕಲ್ ಮಾತ್ರವಲ್ಲದೆ ಪ್ಲಾಸ್ಟಿಕ್ ಅಥವಾ ಮೇಣವನ್ನೂ ಬಳಸುತ್ತಾರೆ 

ಪೇಪರ್ ಕಪ್‌ಗಳ ಮೇಲಿನ ಲೇಪನ ಚಹಾದೊಂದಿಗೆ ಕರಗಿ ಹೊಟ್ಟೆ ಸೇರಿ, ರಕ್ತದೊತ್ತಡದ ಮೇಲೂ ಪರಿಣಾಮ ಬೀರುತ್ತದೆ.

ಪುರುಷರ ಸಂತಾನೋತ್ಪತ್ತಿ ಆರೋಗ್ಯಕ್ಕೂ ಹಾನಿ ಮಾಡುತ್ತದೆ. ಅಲ್ಲಿರುವ ಥಾಲೇಟ್‌ಗಳಿಂದ ಹಾರ್ಮೋನ್‌ ವ್ಯತ್ಯಯವಾಗುತ್ತವೆ.

ಅಧ್ಯಯನ ವರದಿ ಪ್ರಕಾರ, ಒಬ್ಬ ವ್ಯಕ್ತಿ ದಿನಕ್ಕ 2-3 ಬಾರಿ ಪೇಪರ್‌ಕಪ್‌ನಲ್ಲಿ ಚಹಾ ಸೇವಿಸಿದರೆ 75,000 ಪ್ಲಾಸ್ಟಿಕ್‌ ಸೂಕ್ಷ್ಮ ಕಣ ಶರೀರ ಸೇರುತ್ತವೆ.

ಪ್ಲಾಸ್ಟಿಕ್ ಅಪಾಯವನ್ನು ಕಡಿಮೆ ಮಾಡಲು, BPA-ಮುಕ್ತ ಮತ್ತು ಪಾಲಿಪ್ರೊಪಿಲೀನ್ ಅಥವಾ ಪಾಲಿಥಿಲೀನ್‌ ಕಪ್‌ ಬಳಸುವುದು ಸೂಕ್ತ.

ಐಐಟಿ ಖರಗ್‌ಪುರ ಅಧ್ಯಯನ ಪ್ರಕಾರ, ಪೇಪರ್ ಕಪ್‌ನಲ್ಲಿ ಮೈಕ್ರೋ ಪ್ಲಾಸ್ಟಿಕ್‌ ಕಣಗಳು, ಅಯಾನ್‌, ಭಾರಿ ಲೋಹಗಳ ತುಣುಕುಗಳಿವೆ.

ಈ ಸುದ್ದಿ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಯಾವುದೇ ನಿರ್ದಿಷ್ಟ ಮಾಹಿತಿಗಾಗಿ ಆರೋಗ್ಯ ತಜ್ಞರನ್ನು ಸಂಪರ್ಕಿಸಿ

ವೇಟ್ಟೈಯನ್‌ ಚಿತ್ರಕ್ಕಾಗಿ ಬಚ್ಚನ್‌ಗಿಂತ ರಜನಿಗೆ 17 ಪಟ್ಟು ಹೆಚ್ಚು ಸಂಭಾವನೆ!