ಕಿವಿ ಹಣ್ಣು ಹಲವರಿಗೆ ಇದರ ರುಚಿ ಇಷ್ಟವಾಗದೇ ಹೋದರು, ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇದನ್ನು ಪ್ರತಿದಿನ ನಿರಂತರವಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.
ಅದರಲ್ಲೂ ಕೆಲವರು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಕಿವಿ ಹಣ್ಣನ್ನು ಪ್ರತಿನಿತ್ಯ ಸೇವಿಸಬೇಕು. ಯಾವೆಲ್ಲಾ ಸಮಸ್ಯೆ ಇರುವವರು ಕಿವಿ ಹಣ್ಣನ್ನು ಪ್ರತಿನಿತ್ಯ ಸೇವಿಸಬೇಕು ನೋಡಿ.
ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವ ಹಾಗೂ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಪ್ರತಿನಿತ್ಯ ಕಿವಿ ಹಣ್ಣು ಸೇವಿಸಬೇಕು. ಇದರಲ್ಲಿ ವಿಟಮಿನ್ ಸಿ ಇದ್ದು, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ
ಕಣ್ಣಿಗೆ ಸಂಬಂಧಿಸಿದ ಸಮಸ್ಯೆ ಇರುವವರು ಪ್ರತಿದಿನ ಕಿವಿ ಹಣ್ಣು ತಿನ್ನಬೇಕು. ಇದರಲ್ಲಿ ವಿಟಮಿನ್ ಎ ಅಂಶವಿದ್ದು ದೃಷ್ಟಿ ಸುಧಾರಿಸುವುದು ಮಾತ್ರವಲ್ಲ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.
ಆರೋಗ್ಯ ತಜ್ಞರ ಪ್ರಕಾರ ಕಿವಿ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್ ಅಂಶ, ವಿಟಮಿನ್ ಸಿ, ಪೊಟ್ಯಾಶಿಯಂ, ನಾರಿನಾಂಶದಂತಹ ಅಗತ್ಯ ಪೋಷಕಾಂಶಗಳಿದ್ದು ಡೆಂಗ್ಯೂ ಜ್ವರ ಇದ್ದವರಿಗೆ ಇದು ಬಹಳ ಪ್ರಯೋಜನಕಾರಿ.
ಕಿವಿ ಹಣ್ಣಿನ ಸೇವನೆಯಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ವೈದ್ಯರ ಸಲಹೆ ಪಡೆದು ಹೃದ್ರೋಗಿಗಳು ಕಿವಿ ಹಣ್ಣು ಸೇವಿಸಬಹುದು.
ಕೊಲೆಸ್ಟ್ರಾಲ್ ಪ್ರಮಾಣ ಅನಿಯಂತ್ರಿತವಾಗಿ ಉಳಿಯುವ ಜನರು ಪ್ರತಿದಿನ ಕಿವಿ ಹಣ್ಣನ್ನು ಸೇವಿಸಬಹುದು. ಇದರಲ್ಲಿ ಪೊಟ್ಯಾಶಿಯಂ ಅಂಶ ಹೇರಳವಾಗಿದ್ದು ಕೊಲೆಸ್ಟ್ರಾಲ್ ನಿಯಂತ್ರಿಸಲು ಸಹಾಯ ಮಾಡುತ್ತದೆ.
ಪೊಟ್ಯಾಶಿಯಂ ಹೇರಳವಾಗಿರುವ ಕಿವಿ ಫ್ರೂಟ್ ತಿನ್ನುವುದರಿಂದ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಹೈಬಿಪಿ ಇರುವವರು ಕಿವಿ ಹಣ್ಣನ್ನು ನಿರಂತರವಾಗಿ ಸೇವಿಸಬೇಕು.
ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಕಿವಿ ಹಣ್ಣು ದೇಹವನ್ನು ದೌರ್ಬಲ್ಯದಿಂದ ಕಾಪಾಡುತ್ತದೆ. ಪದೇ ಪದೇ ಆಯಾಸ ನಿಮ್ಮನ್ನು ಕಾಡುತ್ತಿದ್ದರೆ ಕಿವಿ ಹಣ್ಣು ಸೇವಿಸಿ.
ಈ ಸುದ್ದಿಯ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.
ನೈಸರ್ಗಿಕ ಸಿಹಿಕಾರಕವಾಗಿರುವ ಜೇನುತುಪ್ಪದ ಪ್ರಯೋಜನಗಳು ಹಲವು