ಹಾಲಿಗೆ ತುಪ್ಪ ಬೆರೆಸಿ ಕುಡಿಯುವುದರಿಂದಾಗುವ 7 ಅದ್ಭುತ ಪ್ರಯೋಜನಗಳಿವು
By Reshma Nov 27, 2024
Hindustan Times Kannada
ಹಾಲು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಮಕ್ಕಳಿಂದ ದೊಡ್ಡವರೆಗೆ ಪ್ರತಿಯೊಬ್ಬರು ಪ್ರತಿದಿನ ಹಾಲು ಕುಡಿಯಬೇಕು. ಆದರೆ ಹಾಲಿಗೆ ತುಪ್ಪ ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕೆ ದುಪ್ಪಟ್ಟು ಪ್ರಯೋಜನವಿದೆ
ಹಾಲು ಹಾಗೂ ತುಪ್ಪ ಎರಡೂ ಪೌಷ್ಟಿಕಾಂಶ ಸಮೃದ್ಧವಾಗಿದೆ. ಈ ಎರಡರ ಸಂಯೋಜನೆಯು ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಹಾಲಿಗೆ ತುಂಬಾ ಬೆರೆಸಿ ಕುಡಿಯುವುದರಿಂದಾಗುವ ಅದ್ಭುತ ಪ್ರಯೋಜನ ತಿಳಿಯಿರಿ
ಜೀರ್ಣಕ್ರಿಯೆಯನ್ನು ವೃದ್ಧಿಸಿ ಕರುಳಿನ ಕಾರ್ಯವನ್ನು ಸುಧಾರಿಸುತ್ತದೆ. ಇದರಿಂದಾಗಿ ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ
ಹಾಲು ಕ್ಯಾಲ್ಸಿಯಂನ ಅತ್ಯುತ್ತಮ ಮೂಲವಾಗಿದೆ. ತುಪ್ಪವು ವಿಟಮಿನ್ ಕೆ2 ಅನ್ನು ಹೊಂದಿರುತ್ತದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ
ಹಾಲು ಹಾಗೂ ತುಪ್ಪ ದೇಹಕ್ಕೆ ಅಗತ್ಯವಿರುವ ಜೀವಸತ್ವ ಹಾಗೂ ಖನಿಜಗಳನ್ನು ನೀಡುತ್ತದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ
ಮಲಗುವ ಮುನ್ನ ತುಪ್ಪ ಬೆರೆಸಿದ ಹಾಲು ಕುಡಿಯುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ. ಇದು ಒತ್ತಡ ಕಡಿಮೆಯಾಗಲು ಕೂಡ ಸಹಕಾರಿ
ತುಪ್ಪ ಸೇವನೆಯು ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿರುವ ಆರ್ಧ್ರಕ ಗುಣ ಚರ್ಮವನ್ನು ಮೃದುಗೊಳಿಸುತ್ತದೆ ಹಾಗೂ ಹೊಳೆಯುವಂತೆ ಮಾಡುತ್ತದೆ
ತುಪ್ಪದಲ್ಲಿರುವ ಕೊಬ್ಬಿನಾಮ್ಲ ಹಾಗೂ ಹಾಲಿನಲ್ಲಿರುವ ಕ್ಯಾಲ್ಸಿಯಂ ಕೀಲುನೋವಿನಿಂದ ಪರಿಹಾರ ನೀಡುತ್ತದೆ
ಗರ್ಭಿಣಿಯರು ಹಾಲಿಗೆ ತುಪ್ಪ ಬೆರೆಸಿ ಕುಡಿಯುವುದರಿಂದ ತಾಯಿಯ ದೇಹಕ್ಕೆ ಹಾಗೂ ಹೊಟ್ಟೆಯಲ್ಲಿರುವ ಮಗುವಿನ ಬೆಳವಣಿಗೆಗೂ ಉತ್ತಮ
ಬಿಸಿ ಹಾಲಿಗೆ ಒಂದು ಚಮಚ ತುಪ್ಪ ಸೇರಿಸಿ ಕುಡಿಯಿರಿ. ಆದರೆ ಅತಿಯಾದ ತುಪ್ಪ ಸೇವಮೆಯೂ ಒಳ್ಳೆಯದಲ್ಲ ನೆನಪಿರಲಿ
ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಆಹಾರದಲ್ಲಿ ಯಾವುದೇ ಬದಲಾವಣೆ ಮಾಡುವ ಮುನ್ನ ತಜ್ಞರಿಂದ ಸಲಹೆ ತೆಗೆದುಕೊಳ್ಳಲು ಮರೆಯದಿರಿ
ಮಾರ್ಗಶಿರ ಅಮಾವಾಸ್ಯೆ ದಿನ ಈ ಕೆಲಸ ಮಾಡಿದರೆ ನಿಮ್ಮ ದೋಷಗಳು ದೂರವಾಗುತ್ತೆ