ಮಾರ್ಗಶಿರ ಅಮಾವಾಸ್ಯೆ ದಿನ ಈ ಕೆಲಸ ಮಾಡಿದರೆ ನಿಮ್ಮ ದೋಷಗಳು ದೂರವಾಗುತ್ತೆ
By Raghavendra M Y
Nov 27, 2024
Hindustan Times
Kannada
ಹಿಂದೂ ಕ್ಯಾಲೆಂಡರ್ ನಲ್ಲಿ ನವೆಂಬರ್ ತಿಂಗಳ ಮಾರ್ಗಶಿರ ಅಮಾವಾಸ್ಯೆಯನ್ನು ವಿಶೇಷವೆಂದು ಪರಿಗಣಿಸಲಾಗಿದೆ. ಈ ತಿಂಗಳ ಅಮಾವಾಸ್ಯೆಯ ತಿಥಿಗೂ ವಿಶೇಷ ಮಹತ್ವವಿದೆ
ಮಾರ್ಗಶಿರ ಅಮಾವಾಸ್ಯೆ ದಿನ ಸ್ನಾನ ಮಾಡುವುದರಿಂದ ಪುಣ್ಯ ಫಲ ಸಿಗುತ್ತದೆ ಎಂದು ನಂಬಲಾಗಿದೆ. ಈ ದಿನ ಶಿವ, ವಿಷ್ಣು ಮತ್ತು ಗಂಗೆ ಮಾತೆಯನ್ನು ಪೂಜಿಸುವ ಪದ್ಧತಿ ಇದೆ
ಅಮಾವಸ್ಯೆಯ ತಿಥಿಯಂದು ಪೂರ್ಜರಿಗೆ ತರ್ಪಣ ಅರ್ಪಿಸುವ ಸಂಪ್ರದಾಯವಿದೆ. ಮಾರ್ಗಶಿರ ಅಮಾವಾಸ್ಯೆಯಂದು ಎಳ್ಳಿಗೆ ಸಂಬಂಧಿದ ಪರಿಹಾರಗಳು ಮಂಗಳಕರ ಎನ್ನಲಾಗಿದೆ
ಧಾರ್ಮಿಕ ತಜ್ಞರ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಗ್ರಹದೋಷವಿದ್ದರೆ, ಮಾರ್ಗಶಿರ ಅಮಾವಾಸ್ಯೆಯಂದು ಅಶ್ವತ್ಥಮರಕ್ಕೆ ಕಪ್ಪು ಎಳ್ಳಿನೊಂದಿಗೆ ನೀರನ್ನು ಅರ್ಪಿಸಬೇಕು
ಮಾರ್ಗಶಿರ ಅಮಾವಾಸ್ಯೆ ದಿನ ಕಪ್ಪು ಎಳ್ಳಿಗೆ ಸಂಬಂಧಿಸಿದ ಪರಿಹಾರಗಳನ್ನು ಮಾಡುವುದರಿಂದ ಎಲ್ಲಾ ಗ್ರಹಗಳ ಅಶುಭ ಪರಿಣಾಮಗಳು ಕಡಿಮೆಯಾಗುತ್ತವೆ ಎಂಬ ನಂಬಿಕೆ ಇದೆ
ಮಾರ್ಗಶಿರ ಅಮಾವಾಸ್ಯೆ ದಿನದಂದು ಆಂಜನೇಯನಿಗೆ ಎಳ್ಳು ಅರ್ಪಿಸಿ. ಎಳ್ಳೆಣ್ಣೆ ದೀಪವನ್ನು ಬೆಳಗಿಸಿ ಆರತಿ ಮಾಡಿ. ಹೀಗೆ ಮಾಡಿದರೆ ನಿಮ್ಮ ಕಾರ್ಯಗಳು ಯಶಸ್ವಿಯಾಗುತ್ತವೆ
ಮಾರ್ಗಶಿರ ಅಮಾವಾಸ್ಯೆಯ ತಿಥಿಯಂದು ಸೂರ್ಯ ದೇವರಿಗೆ ಎಳ್ಳುನೀರನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡಿದರೆ ರೋಗಗಳಿಂದ ಮುಕ್ತಿ ಸಿಗುತ್ತದೆ
ನೀವು ಶನಿ ದೋಷದಿಂದ ಮುಕ್ತಿ ಪಡೆಯಬೇಕಾದರೆ ಮಾರ್ಗಶಿರ ಅಮಾವಾಸ್ಯೆಯಂದು ಶನಿ ದೇವರಿಗೆ ಸಾಸಿವೆ ಎಣ್ಣೆ, ಕಪ್ಪು ಎಳ್ಳನ್ನು ಅರ್ಪಿಸಿ, ಶನಿದೇವರ ಮಂತ್ರಗಳನ್ನು ಪಠಿಸಿ
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ಕೊಹ್ಲಿ-ಧೋನಿ ಬಳಿಕ ರೋಹಿತ್ ಮುಜುಗರದ ದಾಖಲೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ